ಸಾರಾಂಶ
ಇಂದಿನ ಅಧುನಿಕ ಜೀವನ ಶೈಲಿಯಲ್ಲಿ ನಾವು ಯಾವುದನ್ನು ಬಿಡಬಾರದು ಅದನ್ನು ಬಿಟ್ಟು ಬದುಕಿನ ಜಂಜಾಟದಲ್ಲಿ ಮುಳಗಿದ್ದೇವೆ
ಸಿದ್ದಾಪುರ: ಚಾತುರ್ಮಾಸ್ಯದಲ್ಲಿ ಶ್ರೀಗಳ ದರ್ಶನ ಮಾಡುವುದು ಕಾಶಿಯಲ್ಲಿ ಗಂಗಾ ಸ್ನಾನ ಮಾಡಿದ ಪುಣ್ಯ ಬರುತ್ತದೆ. ಈ ಸಮಯದಲ್ಲಿ ಮಠಗಳಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮ ನಡೆಯುವುದರಿಂದ ಮನುಷ್ಯ ಜನ್ಮ ಸಾರ್ಥಕ ಗೊಳಿಸಲು ಸಾಧ್ಯ ಎಂದು ಶ್ರೀಮನ್ನೆಲೆಮಾವು ಮಠದ ಶ್ರೀಮಾಧವಾನಂದ ಭಾರತೀ ಮಹಾಸ್ವಾಮಿಗಳು ಹೇಳಿದರು.
ಅವರು ಅಖಿಲ ಹವ್ಯಕ ಮಹಾಸಭಾದಿಂದ ನಡೆದ ಚಾತುರ್ಮಾಸ್ಯದ ಬಿಕ್ಷಾ ಹಾಗೂ ಇತರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ಇಂದಿನ ಅಧುನಿಕ ಜೀವನ ಶೈಲಿಯಲ್ಲಿ ನಾವು ಯಾವುದನ್ನು ಬಿಡಬಾರದು ಅದನ್ನು ಬಿಟ್ಟು ಬದುಕಿನ ಜಂಜಾಟದಲ್ಲಿ ಮುಳಗಿದ್ದೇವೆ. ಧಾರ್ಮಿಕ ಕಾರ್ಯಕ್ರಮದ ಮಹತ್ವ ತಿಳಿದು ಪಾಲ್ಗೊಳ್ಳಬೇಕು. ನಮ್ಮ ಸಂಸ್ಕೃತಿ ಪರಂಪರೆ ನಶಿಸುತ್ತಿದ್ದು, ಎಷ್ಟೇ ಆಧುನಿಕತೆಗೆ ಒಗ್ಗಿಕೊಂಡರೂ ನಮ್ಮ ಸಂಸ್ಕೃತಿ ಶ್ರೇಷ್ಠ. ಮುಂದಿನ ಪೀಳಿಗೆಗೂ ಇದನ್ನು ಹೇಳಿಕೊಟ್ಟು ಅವರು ಪಾಲಿಸುವಂತೆ ನೋಡಿಕೊಳ್ಳಬೇಕೆ ಹೊರತು ಇತರೆ ಕಾರಣ ನೀಡಿ ನಾವೇ ಬಿಡುವಂತೆ ಮಾಡಬಾರದು. ಕಾಲಕ್ಕೆ ತಕ್ಕಂತೆ ಬದಲಾಗುವ ಜತೆ ನಮ್ಮ ಪರಂಪರೆ ಅಳವಡಿಸಿಕೊಂಡು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು. ಇಂದು ಹಳ್ಳಿಗಳು ವೃದ್ಧಾಶ್ರಮವಾಗುತ್ತಿದೆ. ಹಿಂದೆ ನಗರಕ್ಕೆ ಹೋದವರು ಸ್ವಲ್ಪ ಸಮಯದ ನಂತರ ಹಳ್ಳಿಗೆ ತಿರುಗಿ ಬರುತ್ತಿದ್ದರು. ಆದರೆ ಇಂದಿನ ಯುವಕರು ಅಲ್ಲೇ ಉಳಿಯುತ್ತಿದ್ದಾರೆ. ಸಮಾಜದ ಪರಂಪರೆಯ ಉಳಿವಿಗೆ ಮಾರಕವಾಗಬಹುದು ಎಂದರು.ಅಖಿಲ ಹವ್ಯಕ ಮಹಾಸಭಾದ ಪ್ರಶಾಂತ ಭಟ್ಟ, ನರಹರಿರಾವ್, ಜಿ.ಎಂ.ಭಟ್ಟ, ಆರ್.ಎಸ್. ಹೆಗಡೆ, ಶಶಾಂಕ ಹೆಗಡೆ, ಎನ್.ವಿ. ಹೆಗಡೆ ಮುತ್ತಿಗೆ, ನಿತಿನ್ ಹೆಗಡೆ, ಶಂಕರ ಹೆಗಡೆ ಶಿರಸಿ, ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ. ಹೆಗಡೆ ಮುಂತಾದವರು ಉಪಸ್ಥಿತರಿದ್ದರು.