ಸಿದ್ಧವೃಷಬೇಂದ್ರ ಸ್ವಾಮಿಗಳಿಂದ ಧಾರ್ಮಿಕ ಕ್ರಾಂತಿ: ಮಹಾಂತಶ್ರೀ

| Published : Aug 31 2024, 01:43 AM IST

ಸಾರಾಂಶ

ಸೊರಬ ತಾಲೂಕಿನ ಕೂಸನೂರು ಜಡೆ ಶಾಖಾ ಮಠದಲ್ಲಿ ಸಭಾ ಭವನ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿತು.

ಕನ್ನಡಪ್ರಭ ವಾರ್ತೆ ಸೊರಬ

ಜಡೆ ಸಂಸ್ಥಾನ ಮಠದ ಸಿದ್ಧವೃಷಭೇಂದ್ರ ಸ್ವಾಮೀಜಿ ಅವರು ಜಡೆ ಸಂಸ್ಥಾನ ಮಠದ ಜತೆಗೆ ನಾಡಿನಾದ್ಯಂತ ನೂರಾರು ಮಠಗಳ ಸ್ಥಾಪನೆ ಮಾಡಿ ಧಾರ್ಮಿಕ ಕ್ರಾಂತಿ ಮಾಡಿದ್ದಾರೆ ಎಂದು ಜಡೆ ಸಂಸ್ಥಾನ ಮಠದ ಮ.ನಿ.ಪ್ರ.ಮಹಾಂತ ಸ್ವಾಮೀಜಿ ಹೇಳಿದರು.

ಗುರುವಾರ ತಾಲೂಕಿನ ಜಡೆ ಸಂಸ್ಥಾನ ಮಠದ ಶಾಖೆ ಕೂಸನೂರು ಶಿವಪೂಜಪ್ಪನವರ ಮಠದ ಆವರಣದಲ್ಲಿ ಶ್ರೀಮಠದ ಹಾಗೂ ಸಭಾಭವನದ ಕಾಮಗಾರಿಯ ಭೂಮಿಪೂಜೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜಡೆ ಸಂಸ್ಥಾನ ಮಠದ ಶಾಖಾ ಮಠ ಕೂಸನೂರಿನ ಶಿವಪೂಜಪ್ಪ ಮಠದ ಅಭಿವೃದ್ಧಿ ಕಾಮಗಾರಿಗೆ ೫೦ ಲಕ್ಷ ರು. ಅನುದಾನ ಮಂಜೂರಾಗಿದ್ದು, ೧೨ ಲಕ್ಷ ರೂ. ಬಿಡುಗಡೆಯಾಗಿದೆ. ೧೬ ನೇ ಶತಮಾನದಲ್ಲಿ ಜಡೆ ಸಂಸ್ಥಾನ ಮಠದ ಸಿದ್ಧವೃಷಭೇಂದ್ರ ಸ್ವಾಮೀಜಿ ಅವರು ಶಿವಪೂಜಪ್ಪನವರ ತಪಸ್ಸು, ಕಾರ್ಯಗಳನ್ನು ಗುರುತಿಸಿ ಕೂಸನೂರಿನಲ್ಲಿ ಮಠ ಕಟ್ಟಿಸಿಕೊಟ್ಟಿದ್ದರು. ಆ ಮಠವನ್ನು ಅಭಿವೃದ್ಧಿ ಪಡಿಸಿ ಈ ಭಾಗದ ಜನರ ಧಾರ್ಮಿಕ ಕೈಂಕರ್ಯಗಳಿಗೆ ನೀಡುವ ಚಿಂತನೆಯಿAದ ಮಠದ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಜಡೆ ಸಂಸ್ಥಾನ ಮಠದ ಅಭಿವೃದ್ಧಿಗೆ ಎಲ್ಲಾ ಪಕ್ಷದ ಜನಪ್ರತಿನಿಧಿಗಳ ಸಹಕಾರ ಹಿರಿದಾಗಿದೆ. ಕೂಸನೂರಿನಲ್ಲಿಯೂ ಭಕ್ತರಿಗೆ ಅನುಕೂಲವಾಗಲು ಸುವ್ಯವಸ್ಥಿತ ಸಭಾ ಭವನ ನಿರ್ಮಿಸಲು ಶಾಸಕರು ವಿಶೇಷ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ನಮ್ಮ ಸಂಸ್ಕöÈತಿ ಪರಂಪರೆ ಇತಿಹಾಸ ಗಮನಿಸಿದಾಗ ಮಠ ಮಾನ್ಯಗಳು ಜಾಗೃತಿ ಮೂಡಿಸುವ ಮೂಲಕ ಸಂಸ್ಕöÈತಿ ಉಳಿಸುವ ಪ್ರಯತ್ನ ಮಾಡುತ್ತ ಬಂದಿವೆ. ಮಠಗಳು ಪೂಜೆ, ಧಾರ್ಮಿಕ ಸಭೆಗಳ ಮೂಲಕ ಮನಸ್ಸನು ಶುದ್ಧಗೊಳಿಸುವ ಕೆಲಸ ಮಾಡುವ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡಿವೆ.

ಜಡೆ ಸಂಸ್ಥಾನ ಮಠದ ಸಿದ್ಧವೃಷಭೇಂದ್ರ ಸ್ವಾಮೀಜಿ ನಾಡಿನಾದ್ಯಂತ ಮಠಗಳನ್ನು ಕಟ್ಟಿ ಧಾರ್ಮಿಕ ಕ್ರಾಂತಿ ನಡೆಸಿದ್ದರು.

ಬಸವಣ್ಣನವರ ಕನಸಿನ ಸಮಾನತೆಯ ಸಮಾಜ ಕಟ್ಟಲು ಹಾನಗಲ್ಲ ಕುಮಾರ ಪ್ರಭುಗಳು ಮುಂದಾಗಿದ್ದಲ್ಲದೆ ೧೯ನೇ ಶತಮಾನದಲ್ಲಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ಜತೆಗೆ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಜ್ಞಾನ ಬಿತ್ತಿದ್ದರು. ಜನರು ಹಿಂದಿನ ಪರಂಪರೆ ಸಂಸ್ಕöÈತಿ ಮರೆತು

ಇಂದು ಧ್ವೇಷ ಅಸೂಯೆಗಳಲ್ಲಿ ಮುಳಗಿದ್ದರಿಂದ ಸಂಕಷ್ಟಗಳು ಎದುರಾಗಿದ್ದು, ಇನ್ನಾದರೂ ಆತ್ಮವಲೋಕ ಮಾಡಿಕೊಳ್ಳಬೇಕು. ಸಮಾಜದಲ್ಲಿ ಧರ್ಮಸಭೆಗಳು ನಿರಂತರ ನಡೆದು ಸಮಾನತೆ ಬಿತ್ತಬೇಕು ಎಂದರು.

ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ನಾಡಿನ ಜನರ ಶಾಂತಿ, ನೆಮ್ಮದಿ, ಸಂಸ್ಕöÈತಿಗೆ ಮಠಗಳ ಕೊಡುಗೆ ಅನನ್ಯ ಎಂದರು.

ಜಡೆ ಸಂಸ್ಥಾನ ಮಠದ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ, ಘೋಡಗೆರೆ ವಿರಕ್ತಮಠದ ಪ್ರಭುಲಿಂಗ ಸ್ವಾಮೀಜಿ, ಕೂಸನೂರು ತಿಪ್ಪಯ್ಯಸ್ವಾಮಿ ಆಶ್ರಮದ ಜ್ಯೋತಿರ್ಲಿಂಗಾನAದ ಸ್ವಾಮೀಜಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಭದ್ರಪ್ಪ ಗುಡ್ಡಪ್ಪ ಪಾಟೀಲ, ಉಪಾಧ್ಯಕ್ಷ ಪ್ರಕಾಶಗೌಡ ವೀರನಗೌಡ ಪಾಟೀಲ, ಪಿಡಿಒ ಜಿ.ಟಿ.ಮುನಿ, ಇಂಜಿನಿಯರ್ ಮಲ್ಲೇಶಪ್ಪ ಬಳೆಗಾರ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಭಕ್ತರು, ಗ್ರಾಮಸ್ಥರಿದ್ದರು.