ಶಾಂತಿ, ನೆಮ್ಮದಿಗೆ ಧಾರ್ಮಿಕ ಕಾರ್ಯ ಅಗತ್ಯ

| Published : May 10 2024, 11:45 PM IST

ಶಾಂತಿ, ನೆಮ್ಮದಿಗೆ ಧಾರ್ಮಿಕ ಕಾರ್ಯ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜಾಗತೀಕರಣ ಹಾಗೂ ಅಧುನೀಕರಣದ ಭರಾಟೆಯಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಂರಕ್ಷಣೆ ಅಗತ್ಯವಾಗಿದೆ. ನಿಜವಾದ ಮಾನವೀಯತೆ, ಅನುಕಂಪವು ಇಲ್ಲದಂತಹ ವಾತಾವರಣ ನಿರ್ಮಾಣಗೊಳ್ಳುತ್ತಿದೆ

ಕನ್ನಡಪ್ರಭ ವಾರ್ತೆ ಕೋಲಾರಧಾರ್ಮಿಕ ಕಾರ್ಯಗಳನ್ನು ನಿರಂತರವಾಗಿ ಮಾಡುವುದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ತಿಳಿಸಿದರು.ತಾಲೂಕಿನ ಕೆಂದಟ್ಟಿ ಗ್ರಾಮದಲ್ಲಿ ಶುಕ್ರವಾರ ಅಭಯ ಆಂಜನೇಯಸ್ವಾಮಿಯ ನೂತನ ದೇವಾಲಯದ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ನಿರಂತರ ಧರ್ಮಾಚರಣೆಯಿಂದ ಸಮನ್ವಯತೆ, ಸಹಬಾಳ್ವೆಯಿಂದ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.ಧಾರ್ಮಿಕ ಮೌಲ್ಯ ಕಾಪಾಡಿ

ಇವತ್ತಿನ ಜಾಗತೀಕರಣ ಹಾಗೂ ಅಧುನೀಕರಣದ ಭರಾಟೆಯಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಂರಕ್ಷಣೆ ಅಗತ್ಯವಾಗಿದೆ. ನಿಜವಾದ ಮಾನವೀಯತೆ, ಅನುಕಂಪವು ಇಲ್ಲದಂತಹ ವಾತಾವರಣ ನಿರ್ಮಾಣಗೊಳ್ಳುತ್ತಿದ್ದು, ಧಾರ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳು ಜನರಿಂದ ಕಣ್ಮರೆಯಾದರೆ ಧರ್ಮದ ಮೌಲ್ಯಗಳು ಹಾಗೂ ಸಂಸ್ಕೃತಿ ಉಳಿಯಲಾರದು. ಬದುಕಿನಲ್ಲಿ ನೆಮ್ಮದಿಗೆ ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕು ಎಂದರು.

ಕುಸಿಯುತ್ತಿರುವ ನೈತಿಕ ಮೌಲ್ಯ

ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಸಮಾಜದಲ್ಲಿ ಮಾನವೀಯತೆ ಹಾಗೂ ನೈತಿಕ ಮೌಲ್ಯಗಳು ನಾಶವಾಗುತ್ತಿವೆ ಹಿಂದಿನ ಕಾಲದ ಜನರಲ್ಲಿ ತೃಪ್ತಿಯಿತ್ತು. ಇಂದು ಎಷ್ಟಿದ್ದರೂ ಸಾಲದಾಗಿದೆ. ಮಠಾಧಿಪತಿಗಳಿಂದ ಹಿಡಿದು ಸಾಮಾನ್ಯ ಪ್ರಜೆಯವರೆಗೂ ಯಾರಲ್ಲೂ ನೆಮ್ಮದಿಯಿಲ್ಲ. ಆಸೆಯೇ ತುಂಬಿ ತುಳುಕುತ್ತಿದೆ ಎಂದರು.

ದೇವರು ಎಲ್ಲರಿಗೂ ಒಬ್ಬನೇಇವತ್ತು ದೇವರನ್ನು ಒಂದು ಜಾತಿ ಸಮುದಾಯಗಳಿಗೆ ಅದರಲ್ಲೂ ಒಂದು ಪಕ್ಷಕ್ಕೆ ಸೀಮಿತವಾಗೊಳಿಸಲು ಹೊರಟಿದ್ದಾರೆ. ಆದರೆ ದೇವರು ಎಲ್ಲರಿಗೂ ಒಬ್ಬನೇ ಎಂಬುದನ್ನು ಮನುಷ್ಯನೇ ಮರೆತಿದ್ದಾನೆ. ಜ್ಞಾನ ಸಂಪತ್ತು, ವಿವೇಕದ ಸಂಪತ್ತು, ಧರ್ಮದ ಸಂಪತ್ತನ್ನು ದೇವರಿಂದ ಪಡೆದಿದ್ದೇವೆ. ಆದರೆ, ಭೌತಿಕ ಜಗತ್ತಿನ ಆಕರ್ಷಣೆಗೆ ಒಳಪಟ್ಟು ಅದೆಲ್ಲವನ್ನು ಮರೆತು ಹಿಂಸೆ ಅನುಭವಿಸುವಂತಾಗಿದೆ ಎಂದು ವಿಷಾದಿಸಿದರು.ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಇದ್ದರು.