ಸಾರಾಂಶ
ತುಂಗಭದ್ರಾ ಜಲಾಶಯದ ಉಳಿದ 32 ಕ್ರಸ್ಟ್ ಗೇಟ್‌ಗಳ ಪರಿಶೀಲನೆ ನಡೆಸಬೇಕಿದೆ. ಗೇಟ್‌ಗಳ ಬದಲಾವಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಒದಗಿಸಬೇಕಿದೆ ಎಂದು ತಜ್ಞ ಕನ್ನಯ್ಯ ನಾಯ್ಡು ಹೇಳಿದರು.
ಹೊಸಪೇಟೆ: ತುಂಗಭದ್ರಾ ಜಲಾಶಯದ ಉಳಿದ 32 ಕ್ರಸ್ಟ್ ಗೇಟ್‌ಗಳ ಪರಿಶೀಲನೆ ನಡೆಸಬೇಕಿದೆ. ಗೇಟ್‌ಗಳ ಬದಲಾವಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಒದಗಿಸಬೇಕಿದೆ ಎಂದು ತಜ್ಞ ಕನ್ನಯ್ಯ ನಾಯ್ಡು ಹೇಳಿದರು.
ಜಲಾಶಯದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೇಟ್ ಆಯುಷ್ಯ 45 ವರ್ಷ ಇರುತ್ತದೆ. ಇದೀಗ ಜಲಾಶಯಕ್ಕೆ 70 ವರ್ಷವಾಗಿದೆ. ಎಲ್ಲ ರೀತಿಯ ನಿರ್ವಹಣೆ ಮಾಡಿದ್ದೇವೆ. ಇದೀಗ ಹೊಸ ಪ್ರಯತ್ನ ಮಾಡಿ ನೀರು ನಿಲ್ಲಿಸುತ್ತೇವೆ. ಇದು ತಾತ್ಕಾಲಿಕ ಕೆಲಸ ಆಗಿದೆ. ನೀರು ಕಡಿಮೆಯಾದ ಮೇಲೆ ಮತ್ತೊಮ್ಮೆ ಗೇಟ್ ಕೂಡಿಸಲಾಗುವುದು. ವಯಸ್ಸಾದ ಮುದಕರಿಗೂ ಹಾಗೂ ಯುವಕನಿಗೂ ವ್ಯತ್ಯಾಸ ಇದೆ. ಹಾಗೇ ಡ್ಯಾಂ ಗೇಟ್‌ಗಳಿಗೆ ವಯಸ್ಸಾಗಿದೆ. ವಯಸ್ಸಾಗಿದ್ದಕ್ಕೆ ಡ್ಯಾಂ ಗೇಟ್ ಕಿತ್ತು ಹೋಗಿದೆ. ಉಳಿದ 32 ಗೇಟ್‌ಗಳನ್ನೂ ಪರಿಶೀಲನೆ ಮಾಡಬೇಕು ಎಂದು ತಿಳಿಸಿದರು.ಜಲಾಶಯದಿಂದ ಭಾರೀ ಪ್ರಮಾಣದನೀರು: ಹಂಪಿಯ ಮಂಟಪಗಳು ಮುಳುಗಡೆ
ಹೊಸಪೇಟೆ: ತುಂಗಭದ್ರಾ ಜಲಾಶಯದ 29 ಗೇಟ್‌ಗಳಿಂದ 1ಲಕ್ಷ 9 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತಿದ್ದು, ಹಂಪಿಯ ಪ್ರಮುಖ ಸ್ಮಾರಕಗಳು ಮುಳುಗಡೆ ಆಗಿದ್ದು, ಹಂಪಿಯಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಹಂಪಿಯ ಪುರಂದರ ದಾಸರ ಮಂಟಪ, ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಜನಿವಾರ ಮಂಟಪ, ಕೋಟಿಲಿಂಗ, ಚಕ್ರತೀರ್ಥ, ಕಾಲು ಸೇತುವೆ ಸೇರಿದಂತೆ ಪ್ರಮುಖ ಸ್ಮಾರಕಗಳು ಮುಳುಗಡೆ ಆಗಿವೆ. ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕು ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.