ಕಲೋತ್ಸವ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

| Published : Nov 01 2024, 12:06 AM IST

ಕಲೋತ್ಸವ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಅರೇಹಳ್ಳಿಯ ಮಲ್ನಾಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ ೨೦೨೪-೨೫ನೇ ಸಾಲಿನ ಕಲೋತ್ಸವ ಸ್ಪರ್ಧೆಯಲ್ಲಿ ಅರೇಹಳ್ಳಿಯ ಅಂಬೇಡ್ಕರ್ ನಗರದಲ್ಲಿರುವ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ನಾನಾ ಸ್ಥಾನಗಳನ್ನು ಪಡೆಯುವುದರ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಜಾನಪದ ನೃತ್ಯ ೬ , ಕ್ವಿಜ್ ೨, ಕವ್ವಾಲಿ ೬ ವಿದ್ಯಾರ್ಥಿಗಳು ಸೇರಿದಂತೆ ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಭಾಗವಹಿಸಿ ಒಟ್ಟು ೨೭ ಪದಕಗಳನ್ನು ವಿದ್ಯಾರ್ಥಿಗಳು ಪಡೆಯುವುದರೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಅರೇಹಳ್ಳಿಯ ಮಲ್ನಾಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ ೨೦೨೪-೨೫ನೇ ಸಾಲಿನ ಕಲೋತ್ಸವ ಸ್ಪರ್ಧೆಯಲ್ಲಿ ಅರೇಹಳ್ಳಿಯ ಅಂಬೇಡ್ಕರ್ ನಗರದಲ್ಲಿರುವ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ನಾನಾ ಸ್ಥಾನಗಳನ್ನು ಪಡೆಯುವುದರ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಜಾನಪದ ನೃತ್ಯ ೬ , ಕ್ವಿಜ್ ೨, ಕವ್ವಾಲಿ ೬ ವಿದ್ಯಾರ್ಥಿಗಳು ಸೇರಿದಂತೆ ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಭಾಗವಹಿಸಿ ಒಟ್ಟು ೨೭ ಪದಕಗಳನ್ನು ವಿದ್ಯಾರ್ಥಿಗಳು ಪಡೆಯುವುದರೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾರೆ.

ಈ ವಿದ್ಯಾರ್ಥಿಗಳನ್ನು ಶಾಲಾ ವ್ಯವಸ್ಥಾಪಕ ಫಾ.ಕಿರಣ್ ಮೆಲ್ವಿನ್, ಮುಖ್ಯ ಶಿಕ್ಷಕ ರಂಜಿತ್ ಕುಮಾರ್ ಕೆ.ಎಸ್, ಶಿಕ್ಷಕರಾದ ಸುಮಿತ ಕೀರ್ತಿ, ನಿರ್ಮಲ, ಚಂದ್ರು, ಜ್ಯೋತಿ, ಗ್ರೇಷಿಯನ್ ಮೆನೆಜಸ್, ಸಂಗೀತ ಶಿಕ್ಷಕಿ ಗೌರಿ ಹೆಗಡೆ ಅಭಿನಂದಿಸಿದ್ದಾರೆ.

ವಿಜೇತರ ವಿವರ:೧. ಚೈತನ್ಯ ಎಸ್.ಆರ್.ಮತ್ತು ತಂಡ -ಜಾನಪದ ನೃತ್ಯ (ಪ್ರ) ೨.ಪ್ಲೆವಿನ್ -ಮಿಮಿಕ್ರಿ (ಪ್ರ) ೩. ಪೆಲ್ಸ್‌ಟನ್ - ಆಶು ಭಾ?ಣ (ಪ್ರ) ೪.ಮೊಹಮ್ಮದ್ ಬಿಲಾಲ್- ಅರೇಬಿಕ್ ಧಾರ್ಮಿಕ ಪಠಣ (ಪ್ರ) ,೫. ದುಂಬಿನಿ -ಭಗವದ್ಗೀತೆ ಧಾರ್ಮಿಕ ಪಠಣ(ದ್ವಿ), ೬.ಅಫ್ಸಾನಾ ಬಾನು-ಕನ್ನಡ ಪ್ರಬಂಧ (ದ್ವಿ),೭.ಆಯೇ? ಸಿದ್ಧಿಕಾ-ಹಿಂದಿ ಭಾಷಣ (ದ್ವಿ),೮.ಯಶಸ್ವಿನಿ ಹಾಗೂ ಪೆಲ್ಸ್‌ಟನ್ -ಕ್ವಿಜ್ (ದ್ವಿ),೯. ಆದಿತ್ಯ-ಚಿತ್ರಕಲೆ (ದ್ವಿ), ೧೦.ಪೆಲ್ಸ್‌ಟನ್- ಚರ್ಚಾ ಸ್ಪರ್ಧೆ(ದ್ವಿ), ೧೧.ಜಾಯ್ಸಟನ್- ಜನಪದ ಗೀತೆ(ದ್ವಿ), ೧೨.ಫಿದಾ ಮತ್ತು ತಂಡ- ಕವ್ವಾಲಿ (ತೃ),೧೩.ಭವ್ಯ- ಭಾವಗೀತೆ(ತೃ), ೧೪.ಜ್ಞಾನೇಶ್-ಕವನ ವಾಚನ (ತೃ), ೧೫.ಯಶಸ್ವಿನಿ-ಭರತನಾಟ್ಯ(ತೃ), ೧೬.ಸಿಯೋನ್ ಜೈಸನ್ ಡಿಕುನ್ಹಾ- ಇಂಗ್ಲೀಷ್‌ ಭಾಷಣ(ತೃ).