ಸೆ.17 ರಂದು ಹೈದರಾಬಾದ್ ಕರ್ನಾಟಕ ವಿಮೋಚಾ ದಿನವೂ ನಮ್ಮ ಪ್ರದೇಶದ ಇತಿಹಾಸ ಹೋರಾಟ ಮತ್ತು ಜನರ ಹಕ್ಕುಗಳಿಗಾಗಿ ಸಂಘಟನೆ ನೆನಪಿಸುವ ಮಹತ್ವದ ದಿನ. ಈ ದಿನದ ಸಂದೇಶ ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ಗೌಡ ವಿಭೂತಿಹಳ್ಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಸೆ.17 ರಂದು ಹೈದರಾಬಾದ್ ಕರ್ನಾಟಕ ವಿಮೋಚಾ ದಿನವೂ ನಮ್ಮ ಪ್ರದೇಶದ ಇತಿಹಾಸ ಹೋರಾಟ ಮತ್ತು ಜನರ ಹಕ್ಕುಗಳಿಗಾಗಿ ಸಂಘಟನೆ ನೆನಪಿಸುವ ಮಹತ್ವದ ದಿನ. ಈ ದಿನದ ಸಂದೇಶ ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ಗೌಡ ವಿಭೂತಿಹಳ್ಳಿ ಹೇಳಿದರು.ಯಾದಗಿರಿಯಲ್ಲಿ ಗುರುವಾರ ನಡೆದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರೆವೇರಿಸಿ ಅವರು ಮಾತನಾಡಿದರು.
ಹೈದರಾಬಾದ್ ಕರ್ನಾಟಕ ವಿಮೋಚನೆಗೆ ಹೋರಾಡಿದ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಮೂಲಕ ಸ್ವಾತಂತ್ರ್ಯದ ಬೆಳಕು ನೀಡಿದ ಎಲ್ಲಾ ಹೋರಾಟಗಾರರನ್ನು ಸ್ಮರಿಸಿಕೊಳ್ಳಬೇಕೆಂದರು. ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಭಾರತದ ಒಕ್ಕೂಟಕ್ಕೆ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಂದಿನ ಗೃಹ ಸಚಿವ ವಲ್ಲಭಾಯಿ ಪಟೇಲ್ ನಿಜಾಮರ ಆಡಳಿತದಲ್ಲಿದ ಸಂಸ್ಥಾನವು ಭಾರತ ಸ್ವಾತಂತ್ರ‍್ಯ ನಂತರ ವಿಲೀನಗೊಳ್ಳಲು ನಿರಾಕರಿಸಿತ್ತು. ಭಾರತ ಸರ್ಕಾರವು 1948 ಸೆ. 17ರಂದು ಆಪರೇಷನ್ ಪೋಲೋ ಮೂಲಕ ಹೈದರಾಬಾದ್ ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ಸೇರಿಸಿತ್ತು. ಹೈದರಾಬಾದ್ ನಿಜಾಮನ ಆಡಳಿತ ಅಂತ್ಯವಾಯಿತು. ಈ ಕಾರಣಕ್ಕೆ ಭಾರತದ ಗೃಹ ಮಂತ್ರಿಗಳಾದ ಸರದಾರ್ ವಲ್ಲಭಾಯಿ ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕರೆಯುತ್ತಾರೆ ಎಂದು ಹೇಳಿದರು.ಬಿಜೆಪಿ ಹಿರಿಯ ಮುಖಂಡರಾದ ರಾಚನಗೌಡ ಮುದ್ನಾಳ, ಮಾಜಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್, ಮಾಜಿ ರಾಜ್ಯ ಉಪಾಧ್ಯಕ್ಷ ನಾಗರತ್ನಾ ಕುಪ್ಪಿ, ಮಾಜಿ ಅಲೆಮಾರಿ ನಿಗಮದ ಅಧ್ಯಕ್ಷ ದೇವೇಂದ್ರನಾಥ ನಾದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಕುರುಕುಂದಾ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಖಂಡಪ್ಪ ದಾಸನ, ಜಿಲ್ಲಾ ಬಿಜೆಪಿ ವಕ್ತಾರರಾದ ಹಣಮಂತ ಇಟಗಿ, ಭೀಮನಗೌಡ ಕ್ಯಾತನಾಳ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ನಗರ ಪ್ರಧಾನ ಕಾರ್ಯದರ್ಶಿ ರಮೇಶ್ ದೊಡ್ಮನಿ, ಮಹಿಳಾ ಮೋರ್ಚಾ ಅಧ್ಯಕ್ಷ ಸುನಿತಾ ಚೌಹಾನ್, ರಾಜ್ಯ ಕಾರ್ಯಕಾರಣಿ ಸದಸ್ಯರಾದ ವೀಣಾ ಮೋದಿ, ನಗರಸಭೆ ಉಪಾಧ್ಯಕ್ಷರದ ಪ್ರಭಾವತಿ ಕಲಾಲ್, ಎಷ್ಟು ಬೇಗಂ, ಚಂದ್ರಕಲಾ, ಸ್ನೇಹಾ, ನಗರಸಭೆ ಮಾಜಿ ಸದಸ್ಯರಾದ ಸ್ವಾಮೀದೇವ್ ದಾಸನಕೇರಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀಧರ್ ಸಾಹುಕಾರ್ ವೆಂಕಟರೆಡ್ಡಿ ಅಬ್ಬೆತುಮ್ಕೂರ್ ಗೋಪಾಲ್ ದಾಸನಕೇರಿ, ಲಕ್ಷ್ಮಿಪುತ್ರ ಮಾಲಿ ಪಾಟೀಲ್, ದೇವಿಂದ್ರಪ್ಪ ಯರಗೋಳ, ಮಲ್ಲಿಕಾರ್ಜುನ್ ವನಿಗೇರ, ಶರಣಗೌಡ ಐಕೂರ, ಚಂದ್ರಶೇಖರ್ ಕಡೆಸೂರ್, ಮೌನೇಶ್ ಬೆಳಗೇರಿ, ಅಸಾದ್ ಚಾವುಸ್, ಶಂಕರ್ ಸೋನಾರ್, ಆಂಜನೇಯ ಬಬಲಾದಿ, ಭೀಮಬಾಯಿ, ಸಲೋಮನ್ ಯಡ್ಡಳ್ಳಿ ಮುಂತಾದರು ಉಪಸ್ಥಿತರಿದ್ದರು. ಅದೇ ಸಮಾರಂಭದಲ್ಲಿ ವಿಶ್ವಗುರು ವಿಶ್ವಕರ್ಮ ಜಯಂತಿಯನ್ನು ಆಚರಣೆ ಮಾಡಲಾಯಿತು.