ಸಾರಾಂಶ
ಕನ್ನಡಪ್ರಭ ವಾರ್ತೆ ಕಾರಟಗಿ
ಸ್ವಾತಂತ್ರ್ಯೋತ್ಸವ ಎಂಬುದು ನಮ್ಮ ಹೆಮ್ಮೆ. ಈ ಶುಭ ಸಂದರ್ಭದಲ್ಲಿ ಎಲ್ಲ ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆ ಮಾಡುವುದು ನಮ್ಮ ಜವಾಬ್ದಾರಿ ಎಂದು ತಾಪಂ ಯೋಜನಾಧಿಕಾರಿ ರಾಘವೇಂದ್ರ ಹೇಳಿದರು.ತಾಪಂ ಕಚೇರಿಯಲ್ಲಿ ೭೮ನೇ ಸ್ವಾತಂತ್ರ್ಯದ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮ ನಂತರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಲಿದಾನ ದಿನದ ಅಂಗವಾಗಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಸಲ್ಲಿಸಲಾಯಿತು.ಈ ಸಂದರ್ಭ ತಾಪಂ ಸಹಾಯಕ ನಿರ್ದೇಶಕಿ ವೈ. ವನಜಾ, ಲೆಕ್ಕ ಸಹಾಯಕ ಬಸವರಾಜ್, ಕೆಡಿಪಿ ನಾಮ ನಿರ್ದೇಶಿತ ಸದಸ್ಯರು, ಜಿಲ್ಲಾ ಹಾಗೂ ತಾಲೂಕು ಗ್ಯಾರಂಟಿ ಯೋಜನೆಗಳ ಪದಾಧಿಕಾರಿಗಳು, ವಿವಿಧ ಯೋಜನೆಗಳ ವಿಷಯ ನಿರ್ವಾಹಕರು, ನರೇಗಾ ಹಾಗೂ ತಾಪಂ ಸಿಬ್ಬಂದಿ ಇದ್ದರು.
ವಿವಿಧಡೆ:ಇಲ್ಲಿನ ಪುರಸಭೆಯಲ್ಲಿ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಸದಸ್ಯರಾದ ಎಚ್.ಈಶಪ್ಪ, ಬಸವರಾಜ ಕೊಪ್ಪದ್, ಸೋಮಶೇಖರ ಬೇರಗಿ, ಪದ್ಮಾವತಿ ನಾಗರಾಜ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.ಇಲ್ಲಿನ ಐತಿಹಾಸಿಕ ವೆಂಕಟೇಶ್ವರ ದೇವಸ್ಥಾನದ ಮುಂದಿನ ಬಯಲುರಂಗ ಮಂದಿರದ ಬಳಿ ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಸದಸ್ಯರು, ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
ಸಮುದಾಯ ಆರೋಗ್ಯ ಕೇಂದ್ರ:ವೈದ್ಯಾಧಿಕಾರಿ ಡಾ. ಶಕುಂತಲಾ ಪಾಟೀಲ್ ಆಸ್ಪತ್ರೆಯ ಆವರಣದಲ್ಲಿ ಧ್ವಜಾರೋಹಣ ಮಾಡಿದರು. ವೈದ್ಯರಾದ ಡಾ. ವೀರಭದ್ರಗೌಡ ಪಾಟೀಲ್, ಡಾ. ನಾಗರಾಜ, ಡಾ. ವೀರಣ್ಣ, ಡಾ. ಪ್ರಿಯಾಂಕ, ಡಾ. ಅವಿನಾಶ್, ಡಾ. ಮಧುಸೂದನ್ ಹುಲಗಿ, ರಮೇಶ್ ಇಲ್ಲೂರು, ಸಿಬ್ಬಂದಿ ಇದ್ದರು. ವಿಶೇಷ ಎಪಿಎಂಸಿಯಲ್ಲಿ ಕೃಷಿ ಉತ್ಪನ ಮಾರುಕಟ್ಟೆಯ ಸಹಾಯಕ ಕಾರ್ಯದರ್ಶಿ ಹರೀಶ್ ಪತ್ತಾರ್ ಧ್ವಜಾರೋಹಣ ನೇರವರಿಸಿದರು.ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಬಸವರಾಜ ದಢೇಸೂಗೂರು ಧ್ವಜಾರೋಹಣ ನೆರವೇರಿಸಿದರು. ಮಂಜುನಾಥ ಮಸ್ಕಿ, ರತ್ನ ಕುಮಾರಿ, ಹುಲಿಗೆಮ್ಮ ನಾಯಕ, ಅಮರೇಶ, ತಿಪ್ಪಣ್ಣ ನಾಯಕ, ಶಿವಪೂಜಿ ಶರಣಪ್ಪ ಇತರರಿದ್ದರು.
ಆರ್.ಕೆ.ಡಿ.ಸಿ.ಸಿ ಬ್ಯಾಂಕ್:ಬ್ಯಾಂಕ್‌ನ ನಿರ್ದೇಶಕ ಶರಣೇಗೌಡ ಕೋತ್ತನೂರು ಧ್ವಜಾರೋಹಣ ಮಾಡಿದರು. ಬ್ಯಾಂಕನ ಮುಖ್ಯ ವ್ಯವಾಸ್ಥಾಪಕಿ ನಾಗರತ್ನ ಪಟ್ಟಣಶೆಟ್ಟಿ, ಅರಳಿ ಚೆನ್ನಬಸವ ಸಿಬ್ಬಂದಿ ಇದ್ದರು.ರೈತ ಸಂರ್ಪಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ನಾಗರಾಜ ರ್‍ಯಾವಳದ್ ಧ್ವಜಾರೋಹಣ ನೇರವೆರಿಸಿದರು. ಸಹಾಯಕ ಕೃಷಿ ಅಧಿಕಾರಿ ಭೀರಪ್ಪ ರೈತ ಅನುವುಗಾರರು ಇತ್ತರರು ಇದ್ದರು.ರಾಮನಗರ:
ಇಲ್ಲಿನ ೧೪ನೇ ವಾರ್ಡ್‌ನ ರಾಮನಗರದಲ್ಲಿನ ಉಮರ್ ಫಾರುಖ್ ಮಸೀದಿಯಲ್ಲಿ ಅದ್ಧೂರಿಯಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಮುಸ್ಲಿಂ ಮುಖಂಡರು, ರಾಮನಗರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು. ಈ ವೇಳೆ ಶಾಲಾ ಮಕ್ಕಳಿಗೆ ಮಸೀದಿಯಿಂದ ಉಚಿತವಾಗಿ ನೋಟ್ ಬುಕ್ ವಿತರಿಸಲಾಯಿತು.ಪಾಲಿಟೆಕ್ನಿಕ್ ಕಾಲೇಜ್, ಕೆಪಿಎಸ್ ಶಾಲೆ, ಜೆಸ್ಕಾಂ ಕಚೇರಿ ಸೇರಿದಂತೆ ಟ್ಯಾಕ್ಸಿ ಚಾಲಕರ ಸಂಘ, ವರ್ತಕರ ಸಂಘದಿಂದ ಧ್ವಜಾರೋಹಣ ನಡೆಸಲಾಯಿತು.