ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆ ನಮ್ಮ ಜವಾಬ್ದಾರಿ

| Published : Aug 16 2025, 12:00 AM IST

ಸಾರಾಂಶ

ಸ್ವಾತಂತ್ರ್ಯದ ಹಾದಿ ಹೂವಿನ ಮೆತ್ತೆಯಾಗಿರಲಿಲ್ಲ. ಅದೆಷ್ಟೋ ಮಹನೀಯರ ತ್ಯಾಗ, ಬಲಿದಾನ, ಹೋರಾಟದ ಫಲವಾಗಿ ಲಭಿಸಿದ ಬಿಡುಗಡೆ ದಿನ ಇದು. ದೇಶವನ್ನು ಸ್ವತಂತ್ರಗೊಳಿಸಲು ಅದೆಷ್ಟೋ ಮಹನೀಯರು ತಮ್ಮ ಬದುಕನ್ನೇ ಗಂಧದಂತೆ ತೇಯ್ದಿದ್ದಾರೆ.

ಕಾರಟಗಿ:

ಸ್ವಾತಂತ್ರ್ಯೋತ್ಸವ ಎಂಬುದು ನಮ್ಮ ಹೆಮ್ಮೆ. ಈ ಶುಭ ಸಂದರ್ಭದಲ್ಲಿ ಎಲ್ಲ ಸ್ವಾತಂತ್ರ್ಯ ಸೇನಾನಿಗಳ ಸ್ಮರಿಸುವುದು ನಮ್ಮ ಜವಾಬ್ದಾರಿ ಎಂದು ತಾಲೂಕು ಪಂಚಾಯತಿ ಇಒ ಲಕ್ಷ್ಮೀದೇವಿ ಹೇಳಿದರು.

ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಸ್ವಾತಂತ್ರ್ಯದ ಹಾದಿ ಹೂವಿನ ಮೆತ್ತೆಯಾಗಿರಲಿಲ್ಲ. ಅದೆಷ್ಟೋ ಮಹನೀಯರ ತ್ಯಾಗ, ಬಲಿದಾನ, ಹೋರಾಟದ ಫಲವಾಗಿ ಲಭಿಸಿದ ಬಿಡುಗಡೆ ದಿನ ಇದು. ದೇಶವನ್ನು ಸ್ವತಂತ್ರಗೊಳಿಸಲು ಅದೆಷ್ಟೋ ಮಹನೀಯರು ತಮ್ಮ ಬದುಕನ್ನೇ ಗಂಧದಂತೆ ತೇಯ್ದಿದ್ದಾರೆ. ರಕ್ತವನ್ನು ಬೆವರಂತೆ ಬಸಿದು ದೇಶಕ್ಕಾಗಿ ಬದುಕು ಮುಡಿಪಾಗಿಟ್ಟಿದ್ದಾರೆ, ಪ್ರಾಣವನ್ನೇ ಭಾರತಮಾತೆಗೆ ಅರ್ಪಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಒಂದೊಂದು ಕ್ಷಣವನ್ನು ನೆನಪಿಸಿಕೊಳ್ಳುವಾಗಲೂ ದೇಶ ಪ್ರೇಮದ ಕಿಚ್ಚು ನಮ್ಮಲ್ಲಿ ಅಧಿಕವಾಗುತ್ತಲೇ ಸಾಗುತ್ತದೆ. ತಮ್ಮ ಉಸಿರು ಉಸಿರಿನಲ್ಲೂ ಸ್ವಾತಂತ್ರ್ಯದ ಕೆಚ್ಚಿನೊಂದಿಗೆ ಮುನ್ನುಗ್ಗಿದ್ದ ಇಂತಹ ಸಾಹಸಿಗಳ ಫಲವಾಗಿಯೇ ನಾವಿಂದು ಸ್ವಾತಂತ್ರ್ಯದ ಸವಿ ಅನುಭವಿಸುತ್ತಿದ್ದೇವೆ ಎಂದರು.

ಈ ವೇಳೆ ತಾಪಂ ಯೋಜನಾಧಿಕಾರಿ ರಾಘವೇಂದ್ರ, ಸಹಾಯಕ ನಿರ್ದೇಶಕಿ ವೈ. ವನಜಾ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಅರಳಿ, ಸದಸ್ಯರಾದ ಸೋಮನಾಥ ದೊಡ್ಡಮನಿ, ಶಕುಂತಲಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲೂಕು ಅಧ್ಯಕ್ಷ ದೇವಪ್ಪ ಭಾವಿಕಟ್ಟಿ, ಕೆಡಿಪಿ ಸದಸ್ಯರಾದ ದವಲ್‌ಸಾಬ್, ಬಸವರಾಜ ಅಂಗಡಿ, ಶರಣಪ್ಪ, ಬಸವರಾಜ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರು, ತಾಪಂ ವಿವಿಧ ಯೋಜನೆಗಳ ವಿಷಯ ನಿರ್ವಾಹಕರು, ನರೇಗಾ ಹಾಗೂ ಎನ್‌ಆರ್‌ಎಲ್‌ಎಂ ಸಿಬ್ಬಂದಿ ಇದ್ದರು.