ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಿಸುವುದು ಕರ್ತವ್ಯ: ಟಿ.ಆರ್.ಸೋಮಶೇಖರಯ್ಯ

| Published : Aug 18 2024, 01:50 AM IST

ಸಾರಾಂಶ

ತರೀಕೆರೆ, ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪಟ್ಟಣದ ಶೀ ಪ್ರಹಷಿ೯ತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್.ಸೋಮಶೇಖರಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ತರೀಕೆರೆ

ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪಟ್ಟಣದ ಶೀ ಪ್ರಹಷಿ೯ತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್.ಸೋಮಶೇಖರಯ್ಯ ಹೇಳಿದ್ದಾರೆ, ಪಟ್ಟಣದ ಶ್ರೀ ಪ್ರಹಷಿ೯ತ ವಿದ್ಯಾ ಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ 78ನೇ ಸ್ವಾತಂತ್ರ್ಯೋತ್ಸವ ಕಾಯ೯ಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕೆ ತಮ್ಮ ಜೀವನ ಮುಡಿಪಾಗಿಟ್ಟ ಮಹ್ಮಾತ ಗಾಂಧೀಜಿ ದೇಶ ಕಂಡಂತಹ ಅಪ್ರತಿಮ ನಾಯಕರು, ಅಹಿಂಸೆ, ಶಾಂತಿ ಮೂಲಕ ಇಡೀ ಬ್ರಿಟಿಷ್ ಸಾಮ್ರಾಜ್ಯವನ್ನು ಅಲುಗಾಡಿಸಿದ್ದರು. ಜೀವನದ್ದುದ್ದಕ್ಕೂ ಶಾಂತಿ ಅಹಿಂಸೆಯನ್ನೇ ಮೂಲ ಮಂತ್ರ ವನ್ನಾಗಿಸಿಕೂಂಡು ಸರಳವಾಗಿ ಬದುಕಿದ್ದರು. ಗಾಂಧೀಜಿ ಅವರ ತತ್ವ ಆದಶ೯ಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಗುರಿ ಅಳವಡಿಸಿಕೊಂಡಾಗ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದು ತಿಳಿಸಿದರು. ಮುಖ್ಯ ಶಿಕ್ಷಕಿ ವಿದ್ಯಾ ಮಾತನಾಡಿ ಕಾಂತ್ರಿವೀರ ಸಂಗೂಳ್ಳಿ ರಾಯಣ್ಣ ಅವರ ಹುಟ್ಟು ಹಾಗೂ ಬಲಿದಾನ ದೇಶದ ಇತಿಹಾಸದಲ್ಲಿ ಹೆಚ್ಚು ಮಹತ್ವ ಪಡೆದಿದೆ. ಏಕೆಂದರೆ 15-08-1798 ಹುಟ್ಟಿದ ದಿನ, ಸ್ವಾತಂತ್ರ್ಯೋತ್ಸವ, ಹಾಗೂ 26-01-1831ಬಲಿ ದಾನಗೈದ ದಿನ. ಅನೇಕ ಮಹಾನ್ ವ್ಯಕ್ತಿಗಳಾದ ಮಹಾತ್ಮ ಗಾಂಧೀಜಿ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಝಾನ್ಸಿರಾಣಿ ಲಕ್ಷೀ ಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಬೆಳವಾಡಿ ಮಲ್ಲಮ್ಮ ಮತ್ತಿತರರು ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದಾರೆ ಅದರ ಫಲವಾಗಿ ಇಂದು ನಾವು ನೆಮ್ಮದಿ ಜೀವನ ಸಾಗಿಸುತ್ತಿದ್ದೇವೆ ಎಂದು ಹೇಳಿದರು. ರಾಷ್ಟ್ರೀಯ ಜಾಗೃತಿ ಅಭಿಯಾನ ಸಮಿತಿ ಆಯೋಜಿಸದ್ದ ಗೀತಗಾಯನ ಮತ್ತು ಭಾಷಣ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಜಯಗಳಿಸಿದವರಿಗೆ ಸಮಿತಿ ನೀಡಿದ ಅಭಿನಂದನಾ ಪತ್ರ ಹಾಗೂ ಬಹುಮಾನ ನೀಡಲಾಯಿತು ಎಂದು ಶಾಲಾ ಆಡಳಿತಾಧಿಕಾರಿ ಟಿ.ಎಸ್.ಅನೂಪ್ ತಿಳಿಸಿದರು. ವಿದ್ಯಾರ್ಥಿ ಪ್ರಜ್ಞಾ, ಹೇಮಾವತಿ ಶಂಕರ್, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.16ಕೆಟಿಆರ್.ಕೆ.10ಃ ತರೀಕೆರೆಯಲ್ಲಿ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.