ಲಿಂಗೈಕ್ಯ ಉಭಯ ಜಗದ್ಗುರುಗಳ ಸ್ಮರಣೆ

| Published : Oct 25 2025, 01:00 AM IST

ಸಾರಾಂಶ

ಶ್ರೀ ಶೈಲ ಜಗದ್ಗುರು ಲಿಂಗೈಕ್ಯ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ 14ನೇ ವಾರ್ಷಿಕ ಪುಣ್ಯಸ್ಮರಣೋತ್ಸವ, ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 39ನೇ ವರ್ಷದ ಪುಣ್ಯಾರಾಧನೆ ಪ್ರಯುಕ್ತ ಇಲ್ಲಿನ ಪಿ.ಬಿ.ರಸ್ತೆಯಲ್ಲಿರುವ ಶ್ರೀಶೈಲ ಮಠದಲ್ಲಿ ಶುಕ್ರವಾರ ಬೆಳಿಗ್ಗೆ ಪಂಚಾಚಾರ್ಯ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದಾವಣಗೆರೆ: ಶ್ರೀ ಶೈಲ ಜಗದ್ಗುರು ಲಿಂಗೈಕ್ಯ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ 14ನೇ ವಾರ್ಷಿಕ ಪುಣ್ಯಸ್ಮರಣೋತ್ಸವ, ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 39ನೇ ವರ್ಷದ ಪುಣ್ಯಾರಾಧನೆ ಪ್ರಯುಕ್ತ ಇಲ್ಲಿನ ಪಿ.ಬಿ.ರಸ್ತೆಯಲ್ಲಿರುವ ಶ್ರೀಶೈಲ ಮಠದಲ್ಲಿ ಶುಕ್ರವಾರ ಬೆಳಿಗ್ಗೆ ಪಂಚಾಚಾರ್ಯ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಓಂಕಾರ ಶಿವಾಚಾರ್ಯ ಸ್ವಾಮೀಜಿ, ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು.

ಶ್ರೀಶೈಲ ಮಠದ ಸಂಸ್ಕೃತಿ ಪಾಠಶಾಲೆ ಮಕ್ಕಳು, ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಪುಣ್ಯಾರಾಧನಾ ಸೇವಾ ಸಮಿತಿಯ ಎಸ್.ಜಿ.ಉಳುವಯ್ಯ, ಕೆ.ಎಂ.ಪರಮೇಶ್ವರಪ್ಪ, ಎಂ.ಬನ್ನಯ್ಯ ಸ್ವಾಮಿ, ಟಿ.ಎಂ.ವಿನಾಯಕ, ವಿರುಪಾಕ್ಷಯ್ಯ ಹಿರೇಮಠ, ಎಂ.ಎಚ್.ಪಾಟೀಲ್ ಹರಿಹರ, ಟಿ.ಎಂ.ಕರಿಬಸಯ್ಯ, ಬಿರಾದಾರ್, ಶಿವಕುಮಾರ ಶೆಟ್ಟರ್, ಬಿಎಂಜಿ ವೀರೇಶ, ಮಲ್ಲಿಕಾರ್ಜುನ ತ್ಯಾವಣಿಗೆ, ದ್ರಾಕ್ಷಾಯಣಮ್ಮ ಅಂದಪ್ಪ, ಸುವರ್ಣಮ್ಮ, ಗೌರಮ್ಮ, ಪುಷ್ಪಾ, ಸುವರ್ಣ, ಗೌರಮ್ಮ ತುಮ್ಮಿನಕಟ್ಟಿ, ನೀಲಮ್ಮ, ಭಕ್ತರು ಭಾಗವಹಿಸಿದ್ದರು.

ಧ್ವಜಾರೋಹಣದ ನಂತರ ಶ್ರೀಶೈಲ ಜಗದ್ಗುರು ಡಾ.ಪಂಡಿತಾರಾಧ್ಯ ಸ್ವಾಮೀಜಿಯಿಂದ ಇಷ್ಟಲಿಂಗ ಮಹಾಪೂಜಾ ಕಾರ್ಯಕ್ರಮ ನಡೆಯಿತು.