ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ವಿವಿಧ ಕಡೆಗಳಲ್ಲಿ ಪಾದಚಾರಿ ರಸ್ತೆ ಒತ್ತುವರಿ ತೆರವು ಮುಂದುವರಿದಿದ್ದು, ದಕ್ಷಿಣ, ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆ ಸಿಬ್ಬಂದಿ 9.40 ಕಿಲೋ ಮೀಟರ್ ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡಿದ್ದಾರೆ.ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 4.60 ಕಿ.ಮೀ. ಪಾದಚಾರಿ ರಸ್ತೆಯಲ್ಲಿ ಒತ್ತುವರಿ ತೆರವು ಮಾಡಲಾಗಿದೆ. ಜಯನಗರ ವಿಭಾಗದಲ್ಲಿ 9ನೇ ಕ್ರಾಸ್ ರಸ್ತೆಯಲ್ಲಿ 0.5 ಕಿ.ಮೀ, ಪದ್ಮನಾಭನಗರ ಭಾಗದಲ್ಲಿ 14ನೇ ಮೇನ್ ರಸ್ತೆಯಲ್ಲಿ 1.00 ಕಿ.ಮೀ, ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಸುಭಾಷ್‌ನಗರ ಮೇನ್ ರಸ್ತೆಯಲ್ಲಿ 1.00 ಕಿ.ಮೀ, ಬೊಮ್ಮನಹಳ್ಳಿ (HSR ವಿಭಾಗ)ದಲ್ಲಿ 19ನೇ ಮೇನ್ ರಸ್ತೆಯಲ್ಲಿ (ಮುತ್ಹಳ್ಳಿ ಹೋಟೆಲ್‌ನಿಂದ ORR ವರೆಗೆ) 1.20 ಕಿ.ಮೀ ತೆರವು ಮಾಡಲಾಗಿದೆ.
ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 5 ಕಿ.ಮೀ.ಪಾದಚಾರಿ ರಸ್ತೆಯಲ್ಲಿ ಒತ್ತುವರಿ ತೆರವು ಮಾಡಲಾಗಿದೆ. ಬ್ಯಾಟರಾಯನಪುರ ವಿಭಾಗದ ಕೋಗಿಲು–ಕಟ್ಟಿಗೆನಹಳ್ಳಿ ಮುಖ್ಯ ರಸ್ತೆ (ಬಿಬಿಎಂಪಿ ಕಚೇರಿಯಿಂದ ಕಟ್ಟಿಗೆನಹಳ್ಳಿವರೆಗೆ) – 2.00 ಕಿ.ಮೀ., ಸರ್ವಜ್ಞನಗರ ವಿಭಾಗ ಕಮ್ಮನಹಳ್ಳಿ ಮುಖ್ಯ ರಸ್ತೆ (ಇಂಡಿಯನ್ ಆಯಿಲ್‌ನಿಂದ ಸರ್ವೀಸ್ ರಸ್ತೆ ತನಕ) – 2.00 ಕಿ.ಮೀ. ಯಲಹಂಕ ವಿಭಾಗ, ರೈತರ ಸಂತೆ ರಸ್ತೆ - 1 ಕಿಮೀ ಸೇರಿ ಒಟ್ಟು 5 ಕಿಲೋ ಮೀಟರ್ ರಸ್ತೆ ಒತ್ತುವರಿ ತೆರವು ಮಾಡಲಾಗಿದೆ.