ಬಿಬಿಎಂಪಿ ಪೌರಭವನ ನವೀಕರಣ ಜೂನ್‌ಗೆ ಪೂರ್ಣ

| Published : May 19 2024, 01:54 AM IST

ಸಾರಾಂಶ

ನಾಡಪ್ರಭು ಕೆಂಪೇಗೌಡ ಪೌರಸಭಾಂಗಣದ ನವೀಕರಣ ಕಾಮಗಾರಿ ಜೂನ್‌ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ 2 ವರ್ಷಗಳಿಂದ ಬಿಬಿಎಂಪಿ ಆವರಣದಲ್ಲಿರುವ ನಡೆಯುತ್ತಿರುವ ನಾಡಪ್ರಭು ಕೆಂಪೇಗೌಡ ಪೌರಸಭಾಂಗಣದ ನವೀಕರಣ ಕಾಮಗಾರಿ ಜೂನ್‌ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ.

ಸುಮಾರು ₹10 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಇದೀಗ ಹೆಚ್ಚುವರಿ ಎರಡು ಕೋಟಿ ರು. ವೆಚ್ಚವಾಗಿದೆ. ಹೈಟೆಕ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಪ್ರತಿ ಸದಸ್ಯರ ಆಸನದಲ್ಲಿ ಮೈಕ್ ಅಳವಡಿಕೆ ಜತೆಗೆ ಇಡೀ ಸಭಾಂಗಣಕ್ಕೆ ಸೌಂಡ್ ಪ್ರೂಫ್ ಅಕೌಸ್ಟಿಕ್ಸ್ ಹಾಗೂ ಸಿಸಿ ಕ್ಯಾಮೆರಾ ಕೂಡ ಅಳವಡಿಕೆಯಾಗಲಿದೆ. ಕೌನ್ಸಿಲ್ ಸಭೆ ವೀಕ್ಷಿಸಲು ಸಾರ್ವಜನಿಕರಿಗೆ ಹಾಗೂ ಮಾಧ್ಯಮದವರಿಗೆ ಪ್ರತ್ಯೇಕ ಅಸನದ ವ್ಯವಸ್ಥೆ ಮಾಡಲಾಗುತ್ತಿದೆ.

ಜೂನ್‌ 15ರ ವೇಳೆ ಸಭಾಂಗಣದ ಒಳಭಾಗದ ಬಹುತೇಕ ಕಾಮಗಾರಿ ಪೂರ್ಣಗೊಳ್ಳಲಿದೆ. ಸಭಾಂಗಣದ ಹೊರ ಭಾಗದಲ್ಲಿ ಸುಣ್ಣ ಬಣ್ಣ ಸೇರಿದಂತೆ ಮೊದಲಾದ ಕಾಮಗಾರಿಗೆ ಮತ್ತೊಂದು ವಾರದ ಕಾಲವಾಕಾಶ ಬೇಕಾಗಲಿದ್ದು, ಜೂನ್‌ ಅಂತ್ಯದ ವೇಳೆ ಸಭಾಂಗಣ ಸಂಪೂರ್ಣವಾಗಿ ಸಿದ್ಧವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.300ಕ್ಕೂ ಅಧಿಕ ಆಸನ

ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆಯಿಂದ ವಾರ್ಡ್‌ ಸಂಖ್ಯೆ 198ರಿಂದ 225ಕ್ಕೆ ಹೆಚ್ಚಿಸಲಾಗಿದೆ. ಇದುವರೆಗೂ ಪಾಲಿಕೆ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಶಾಸಕರು, ಸಂಸದರು, ಪರಿಷತ್ ಸದಸ್ಯರನ್ನು ಸೇರಿ ಒಟ್ಟು 270 ಮಂದಿ ಕುಳಿತುಕೊಳ್ಳಲು ಕೌನ್ಸಿಲ್ ಸಭಾಂಗಣದಲ್ಲಿ ಅವಕಾಶವಿತ್ತು. ಈಗ 320 ಸದಸ್ಯರು ಉಳಿತುಕೊಳ್ಳುವ ರೀತಿಯಲ್ಲಿ ಕೌನ್ಸಿಲ್ ಕಟ್ಟಡ ವಿಸ್ತರಣೆಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.