ಸಡಗರದ ರೇಣುಕಾ ಯಲ್ಲಮ್ಮದೇವಿ ಜಾತ್ರೋತ್ಸವ

| Published : May 24 2024, 12:53 AM IST

ಸಡಗರದ ರೇಣುಕಾ ಯಲ್ಲಮ್ಮದೇವಿ ಜಾತ್ರೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದ ಬಸವ ನಗರದಲ್ಲಿರುವ ರೇಣುಕಾ ಯಲ್ಲಮ್ಮದೇವಿ ಜಾತ್ರಾಮಹೋತ್ಸವ ಗುರುವಾರ ಸಡಗರದಿಂದ ಜರುಗಿತು. ದೇವಿಗೆ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ ನೆರವೇರಿತು. ಜನತೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ದೇವಿಯ ದರ್ಶನ ಪಡೆದು ತಮ್ಮ ಹರಕೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಬಸವ ನಗರದಲ್ಲಿರುವ ರೇಣುಕಾ ಯಲ್ಲಮ್ಮದೇವಿ ಜಾತ್ರಾಮಹೋತ್ಸವ ಗುರುವಾರ ಸಡಗರದಿಂದ ಜರುಗಿತು. ದೇವಿಗೆ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ ನೆರವೇರಿತು. ಜನತೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ದೇವಿಯ ದರ್ಶನ ಪಡೆದು ತಮ್ಮ ಹರಕೆ ಸಲ್ಲಿಸಿದರು.

ಬೆಳಗ್ಗೆ ಜಾತ್ರಾ ಮಹೋತ್ಸವದ ಅಂಗವಾಗಿ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಿಂದ ರೇಣುಕಾ ಯಲ್ಲಮ್ಮದೇವಿ ಪಲ್ಲಕ್ಕಿ ಉತ್ಸವವು ಕುಂಭಮೇಳ, ಜೋಗಮ್ಮಗಳ ಜೌಡಕಿ ಕುಣಿತ, ಡೊಳ್ಳು ಹಾಗೂ ತಳೇವಾಡದ ಹಣಮಂತ ಭಜಂತ್ರಿಯವರ ಕರಡಿ ಮಜಲು ತಂಡದೊಂದಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ದೇವಸ್ಥಾನಕ್ಕೆ ಆಗಮಿಸಿತು. ಪಲ್ಲಕ್ಕಿ ಉತ್ಸವವು ದೇವಸ್ಥಾನಕ್ಕೆ ಆಗಮಿಸಿದ ನಂತರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ, ತೊಟ್ಟಿಲು ಕಾರ್ಯಕ್ರಮ ಜರುಗಿತು.

ಪಲ್ಲಕ್ಕಿ ಉತ್ಸವದಲ್ಲಿ ಶರಣಪ್ಪ ಬೆಲ್ಲದ, ಬಸವರಾಜ ಟಕ್ಕಳಕಿ, ಹಣಮಂತ ಹತ್ತಿ, ಮಹಾಂತೇಶ ಹಂಜಗಿ, ಬಸವರಾಜ ಕಾಮನಕೇರಿ, ರಮೇಶ ಪವಾರ, ಸಂಗಮೇಶ ದೊಡ್ಡಮನಿ, ಕೊಟೆಪ್ಪ ಬಿರಾದಾರ, ಮಹೇಶ ಸಾಲವಾಡಗಿ, ಭೀಮು ಗೊಳಸಂಗಿ, ಶಿವು ಜೀರ, ಭೀಮಶಿ ಮದರಕಿ, ಲಕ್ಷ್ಮೀಬಾಯಿ ಬೆಲ್ಲದ, ಉಮಕ್ಕ ಹತ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಜಾತ್ರಾಮಹೋತ್ಸವದಂಗವಾಗಿ ರಾಯಭಾಗ ತಾಲೂಕಿನ ಆಲಖನೂರಿನ ಮಲ್ಲಿಕಾರ್ಜುನ ನಾಟ್ಯ ಸಂಘದಿಂದ ಮಗ ಹೋದರೂ ಮಾಂಗಲ್ಯ ಬೇಕು ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.