ಸಾರಾಂಶ
ಯಲ್ಲಮ್ಮ ದೇವಿಯ ಉತ್ಸವ ಮೂರ್ತಿ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ನಡೆಸಿ ರಥದಲ್ಲಿ ಕೂಡಿಸಿ ನಂತರ ಪದಗಟ್ಟೆಯವರೆಗೂ ಲಕ್ಷಾಂತರ ಭಕ್ತರು ರಥವನ್ನು ಎಳೆಯುವ ಮೂಲಕ ಜಾತ್ರೆ ಸಂಪನ್ನವಾಯಿತು.
ಮಾನ್ವಿ: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ನೀರಮಾನ್ವಿ ಗ್ರಾಮದಲ್ಲಿ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆ ಹಿನ್ನೆಲೆ ಗುರುವಾರ ಸಂಜೆ ಅದ್ಧೂರಿ ರಥೋತ್ಸವ ನಡೆಯಿತು.
ದೇವಸ್ಥಾನದಲ್ಲಿ ಯಲ್ಲಮ್ಮ ದೇವಿಯ ಉತ್ಸವ ಮೂರ್ತಿ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ನಡೆಸಿ ರಥದಲ್ಲಿ ಕೂಡಿಸಿ ನಂತರ ಪದಗಟ್ಟೆಯವರೆಗೂ ಲಕ್ಷಾಂತರ ಭಕ್ತರು ರಥವನ್ನು ಎಳೆಯುವ ಮೂಲಕ ಜಾತ್ರೆಯನ್ನು ವೈಭವದಿಂದ ನಡೆಸಿಕೊಟ್ಟರು.ರಾಜ್ಯ ಸೇರಿದಂತೆ ನೆರೆಯ ಮಹಾರಾಷ್ಟ್ರ, ಅಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಒಂದು ಲಕ್ಷಕ್ಕಿಂತ ಹೆಚ್ಚು ಭಕ್ತರು ರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದುಕೊಂಡು ರಥಕ್ಕೆ ಹೂ, ಹಣ್ಣು ಸಮರ್ಪಿಸಿದರು.
ದೇವಸ್ಥಾನದ ಆಡಳಿತಾಧಿಕಾರಿ ತಹಸೀಲ್ದಾರ್ ಜಗದೀಶ್ ಚೌರ್, ಕಾರ್ಯದರ್ಶಿ ಚರಣಸಿಂಗ್, ಸೇರಿದಂತೆ ದೇವಸ್ಥಾನದ ಆರ್ಚಕರು ಹಾಗೂ ಗ್ರಾಮಸ್ಥರು ಮುಖಂಡರು ಭಾಗವಹಿಸಿದರು.