ಸೌಹಾರ್ಧತೆಗೆ ಅಡಿಪಾಯ ಹಾಕಿದ್ದ ರೇಣುಕಾಚಾರ್ಯರು

| Published : Mar 24 2024, 01:35 AM IST

ಸೌಹಾರ್ಧತೆಗೆ ಅಡಿಪಾಯ ಹಾಕಿದ್ದ ರೇಣುಕಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ವೀರಶೈವ ಧರ್ಮದ ಮೂಲ ಪುರುಷರಾದ ರೇಣುಕಾಚಾರ್ಯರು ಸಕಲ ಜನಾಂಗದ ಶ್ರೆಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ

ಮುಂಡರಗಿ: ಪಟ್ಟಣದ ತಹಸೀಲ್ದಾರ್‌ ಕಚೇರಿ ಸಭಾಭವನದಲ್ಲಿ ಶನಿವಾರ ತಾಲೂಕಾಡಳಿತ ವತಿಯಿಂದ ತಹಸೀಲ್ದಾರ ಅಧ್ಯಕ್ಷತೆಯಲ್ಲಿ ಸರ‍‍ಳವಾಗಿ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಧನಂಜಯ ಮಾಲಗತ್ತಿ ಮಾತನಾಡಿ, ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶ ನೀಡುವ ಮೂಲಕ ಸಾಮರಸ್ಯ ಸೌಹಾರ್ಧತೆಗೆ ಅಡಿಪಾಯ ಹಾಕಿದ್ದಾರೆ. ಇದೀಗ ಚುನಾವಣಾ ನೀತಿಸಂಹಿತೆ ಇರುವುದರಿಂದ ಅದ್ಧೂರಿ ಕಾರ್ಯಕ್ರಮಕ್ಕೆ ಅವಕಾಶವಿರುವುದಿಲ್ಲ. ಮುಂಬರುವ ವರ್ಷಗಳಲ್ಲಿ ತಾಲೂಕಾಡಳಿತದ ಸಹಕಾರದೊಂದಿಗೆ ಅದ್ಧೂರಿಯಾಗಿ ಆಚರಿಸೋಣ ಎಂದರು.

ಎಸ್.ಬಿ. ಹಿರೇಮಠ ಮಾತನಾಡಿ, ವಿಶ್ವ ಬಂಧುತ್ವ ಸಂದೇಶ ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಚಿಂತೆನೆಗಳು ಸರ್ವ ಸಮುದಾಯಕ್ಕೂ ಅನ್ವಯಿಸುತ್ತವೆ. ವೀರಶೈವ ಧರ್ಮದ ಮೂಲ ಪುರುಷರಾದ ರೇಣುಕಾಚಾರ್ಯರು ಸಕಲ ಜನಾಂಗದ ಶ್ರೆಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದರು.

ಪ್ರಭಾವತಿ ಬೆಳವಣಕಿಮಠ ಮಾತನಾಡಿ, ಜಾತಿ, ಮತ, ಪಂಥಗಳನ್ನು ಮೀರಿ ಸರ್ವ ಜನಾಂಗದವರ ಅಭ್ಯುದಯಕ್ಕಾಗಿ ಕೊಟ್ಟ ಸಂದೇಶ ಎಂದಿಗೂ ಮರೆಯಲಾಗುವುದಿಲ್ಲ. ಮಾನವೀಯ ಆದರ್ಶ ಮಾಲ್ಯ ಎತ್ತಿ ಹಿಡಿದ ಕೀರ್ತಿ ಶ್ರೀರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.

ವಿಶ್ರಾಂತ ಶಿಕ್ಷಕ ಪಿ.ಜಿ. ಹಿರೇಮಠ ಉಪಾನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಎಸ್.ಎಚ್. ಬಿಚ್ಚಾಲಿ, ಬಸಯ್ಯ ಹಿರೇಮಠ, ವಿ.ಜೆ. ಹಿರೇಮಠ, ಶರಣಯ್ಯ ಹಿರೇಮಠ, ಅಜಯ್ ಚುರ್ಚಿಹಾಳಮಠ, ಜಗದೀಶ ಪತ್ರಿಮಠ, ಶೇಖರಯ್ಯ ಬೀಕ್ಷದ, ಶರಣಯ್ಯ ಅಳವುಂಡಿಮಠ, ವಿನಾಯಕ ಗಂಧದ, ಶಿವಮೂರ್ತಿ ಅಳವುಂಡಿಮಠ, ಈಶ್ವರ ಹಿರೇಮಠ, ಎಂ.ಎಂ. ಮರುಳಾರಾಧ್ಯ, ಗುರುಲಿಂಗಯ್ಯ ಕೊಳ್ಳಿಮಠ, ಹಾಲ್ಲಯ್ಯ ಹಿರೇಮಠ, ಷಡಕ್ಷರಯ್ಯ ಅಳವುಂಡಿಮಠ, ಶಿವು ಹಿರೇಮಠ, ಈಶ್ವರಯ್ಯ ಗೊಂಡಬಾಳಮಠ, ನಾಗಯ್ಯ ಹಿರೇಮಠ, ಶರಣಯ್ಯ ಹಿರೇಮಠ, ಜ್ಯೋತಿ ಹಿರೇಮಠ, ಶಾಂತಾ ಮಠಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.