ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರುಶ್ರೀಜಗದ್ಗುರು ರೇಣುಕಾಚಾರ್ಯರು ಧರ್ಮ ಸಂರಕ್ಷಣೆಗಾಗಿ ಜಗದಲ್ಲಿ ಶಿವಜ್ಞಾನದ ಬೆಳಕನ್ನು ಬೀರಿದ್ದಾರೆ ಎಂದು ಸಿಂಧನೂರಿನ ಗಿಣಿವರದ ವೇ.ಮೂ. ಶಿವಾಚಾರ್ಯ ಶಾಸ್ತ್ರಿಗಳು ಹಿರೇಮಠ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ,ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಯುಗಮಾನೋತ್ಸವ ಸಮಾರಂಭದಲ್ಲಿ ಬುಧವಾರ ನೀಡಿದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ದ್ವಾಪರಯುಗದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯರಾಗಿ, ಕಲಿಯುಗದಲ್ಲಿ ಶ್ರೀಜಗದ್ಗುರು ರೇವಣಸಿದ್ಧರಾಗಿ ಅವತರಿಸಿ ವೀರಶೈವ ಧರ್ಮ ಸಂಸ್ಥಾಪಕರಾಗಿ, ಯುಗಪ್ರವರ್ತಕರಾಗಿ ಧರ್ಮ ಸಂರಕ್ಷಣೆಗಾಗಿ ಜಗದಲ್ಲಿ ಶಿವಜ್ಞಾನದ ಬೆಳಕನ್ನು ಬೀರಿವುದುರ ಜೊತೆಗೆ ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಜಗದ್ಗುರು ಶ್ರೀ ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.ಸಾನಿಧ್ಯ ವಹಿಸಿದ್ದ 108 ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ರೇಣುಕಾ ಚಾರ್ಯರು ಕೇವಲ ವೀರಶೈವ ಸಮಾಜಕ್ಕೆ ಮಾತ್ರ ಸೀಮಿತವಾದವರಲ್ಲ. ಇಡೀ ಮನುಕುಲಕ್ಕೆ ಸನ್ಮಾರ್ಗವನ್ನು ನೀಡಿದವರಾಗಿದ್ದಾರೆ. ಅವರು ಸಮಾಜಕ್ಕೆ ನೀಡಿದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಗದ್ಗುರು ರೇಣುಕಾಚಾರ್ಯರು ಕಲಿಯುಗದಲ್ಲಿ ಮಾತ್ರವಲ್ಲದೆ ಕೃತಾಯುಗ, ತ್ರೇತಾಯುಗ, ದ್ವಾಪರ ಯುಗದಲ್ಲಿ ಜನಸಿ, ನಂತರ ಕಲಿಯುಗದಲ್ಲಿ ಜನಸಿದ ಮಹಾತ್ಮರಾಗಿದ್ದಾರೆ. ಕಲಿಯುಗದಲ್ಲಿ ಜನಿಸಿ ರೇಣುಕಾಚಾರ್ಯರು ಕೇವಲ ವೀರಶೈವ ಸಮಾಜವನ್ನಷ್ಟೆ ಸ್ಥಾಪನೆ ಮಾಡಿಲ್ಲ. ಇಡೀ ಮನುಕುಲದ ಉಳಿತಿಗಾಗಿ ಸಂದೇಶಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.ಗ್ರೇಡ್-2 ತಹಶೀಲ್ದಾರ್ ಭೀಮರಾಯ ಮಾತನಾಡಿ, ರೇಣುಕಾಚಾರ್ಯರ ಜೀವನ ತತ್ವ, ಸಿದ್ಧಾಂತಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ರೇಣುಕಾಚಾರ್ಯರು ಸಾರಿದ್ದಾರೆ. ಎಲ್ಲ ಧರ್ಮದವರು ಸಾಮರಸ್ಯದಿಂದ ಬದುಕಬೇಕು. ಭಾರತದ ಪುಣ್ಶಭೂಮಿಯಲ್ಲಿ ಹಲವಾರು ಧರ್ಮಗಳು ಜನ್ಮ ಪಡೆದು ಮಾನವರ ಐಹಿಕ ಉದ್ಧಾರಕ್ಕೆ ಮತ್ತು ಅಲೌಕಿಕ ಪ್ರಾಪ್ತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿವೆ ಎಂದರು.ಕಾರ್ಯಕ್ರಮಕ್ಕೂ ಮುಂಚೆ ನಗರ ಮಂಗಳವಾರಪೇಟೆ ಹಿರೇಮಠದಿಂದ ಬೈಪಾಸ್‌ವರೆಗೆ ಮೆರವಣಿಗೆ ತೆರಳಿ, ನಂತರ ಬೈಪಾಸ್ ರಸ್ತೆಯ ಜಗದ್ಗುರು ರೇಣುಕಾಚಾರ್ಯ ವೃತ್ತದಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ಬೈಕ್ ರ‍್ಯಾಲಿ ಮೂಲಕ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಜರುಗಿತು. ಈ ಸಂದರ್ಭದಲಿ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯರು, ಮಂಗಳವಾರಪೇಟೆ ಹಿರೇಮಠದ ಸಂಗಮೇಶ್ವರ ಶಿವಾಚಾರ್ಯರು,ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಶರಣ ಭೂಪಾಲ ನಾಡಗೌಡ ಸೇರಿ, ಪ್ರಮುಖ ಮುಖಂಡರು,ಯುವಕರು, ಮಹಿಳೆಯರು-ಮಕ್ಕಳು ಸೇರಿ ಇತರರು ಇದ್ದರು.
ಮುದಗಲ್ ಪಟ್ಟಣದಲ್ಲಿ ಶ್ರೀಜಗದ್ಗುರು ಜಯಂತಿಮುದಗಲ್: ಪಟ್ಟಣದ ಪುರಸಭೆ ಕಾರ್ಯಲಯಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿನ್ನು ಬುಧವಾರ ಆಚರಿಸಲಾಯಿತು.ಜಯಂತಿ ಹಿನ್ನೆಲೆಯಲ್ಲಿ ಪುರಸಭೆ ಕಚೇರಿಯ ಸದಸ್ಯರು,ಅಧಿಕಾರಿ,ಸಿಬ್ಬಂದಿ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದರು. ಇದೇ ವೇಳೆ ಸದಾನಂದಯ್ಯ ಹಿರೇಮಠ ಅವರು ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ರೇಣುಕಾಚಾರ್ಯ ಹಿರೇಮಠ, ಮಹೇಶ ವಸ್ತ್ರದ, ಸಂಗಯ್ಯಸ್ವಾಮಿ, ಉಮೇಶ ರೇವಳಮಠ,ಶಶಿಧರ ಕಂಚಿಮಠ, ಸುರೇಂದ್ರಗೌಡ ಪಾಟೀಲ್,ಲಿಂಗಪ್ಪ ಹಣಗಿ, ಸದಸ್ಯ ಗುಂಡಪ್ಪ ಗಂಗಾವತಿ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ತಮ್ಮಣ್ಣ ಗುತ್ತೇದಾರ, ಮಹಂತೇಶ ಪಾಟೀಲ್,ಶಿವಪ್ಪ ಸುಂಕದ, ಅಮರೇಶ,ಮಲ್ಲಣ್ಣ ಮಾಟೂರ,ಮಹಿಬೂಬಸಾಬ,ಅಧಿಕಾರಿ,ಸಿಬ್ಬಂದಿ, ಮುಖಂಡರು ಸೇರಿ ಇದ್ದರು.
ಸಿಂಧನೂರಿನಲ್ಲೂ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಸಿಂಧನೂರು: ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ತಾಲ್ಲೂಕಾಡಳಿತ ವತಿಯಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಬುಧವಾರ ಆಚರಿಸಲಾಯಿತು.ಮೂರುಮೈಲ್ ಕ್ಯಾಂಪಿನ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಬಂಗಾರಿ ಕ್ಯಾಂಪಿನ ಸಿದ್ದಾಶ್ರಮದ ಸದಾನಂದ ಶರಣರು, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ನಗರಸಭೆ ಉಪಾಧ್ಯಕ್ಷೆ ಮಂಜುಳಾ ಪ್ರಭುರಾಜ್, ಮುಖಂಡರಾದ ರಾಜಶೇಖರ ಪಾಟೀಲ್, ಅಶೋಕಗೌಡ ಗದ್ರಟಗಿ, ರಾಜುಗೌಡ ಬಾದರ್ಲಿ, ಅಮರಯ್ಯಸ್ವಾಮಿ ಅಲಬನೂರು, ಅಭಿಷೇಕ ನಾಡಗೌಡ, ಮಲ್ಲನಗೌಡ ಮಲ್ಕಾಪುರ, ರವಿಗೌಡ ಪನ್ನೂರು, ಪಂಪಯ್ಯಸ್ವಾಮಿ ಸಾಲಿಮಠ, ಲಕ್ಷ್ಮಿ ಪತ್ತಾರ, ಮಲ್ಲನಗೌಡ ಮಾವಿನಮಡ್ಗು, ರಾಮನಗೌಡ, ಎಂ.ಎಸ್.ರೆಡ್ಡಿ, ಸೈಯ್ಯದ್ ಆಸೀಫ್, ವೀರಭದ್ರಯ್ಯಸ್ವಾಮಿ, ಪ್ರಭುರಾಜ, ಚನ್ನಬಸಯ್ಯಸ್ವಾಮಿ ಹಿರೇಮಠ ಸೇರಿದಂತೆ ಅನೇಕರು ಇದ್ದರು.
ಕವಿತಾಳದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿಕವಿತಾಳ: ಪಟ್ಟಣ ಸೇರಿದಂತೆ ವಿವಿಧಡೆ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಆಚರಿಸಲಾಯಿತು.ಇಲ್ಲಿನ ಪ.ಪಂ.ಯಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರಶಾಂತ ಕುಮಾರ, ರಾಘವೇಂದ್ರ, ರಾಮು, ಮಾರುತಿ, ವೆಂಕಟೇಶ, ದರ್ವೇಶ್ ಸಬ್, ಕಲಿಫ್ ಸಾಬ್ ಇನ್ನಿತರರು ಉಪಸ್ಥಿತರಿದ್ದರುಲ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಆಚರಿಸಲಾಯಿತು.