ಕಿಕ್ಕೇರಿ ಗ್ರಾಪಂ ಉಪಾಧ್ಯಕ್ಷರಾಗಿ ರೇಣುಕಮ್ಮ ಅವಿರೋಧ ಆಯ್ಕೆ

| Published : Mar 13 2025, 12:52 AM IST

ಸಾರಾಂಶ

ಕಿಕ್ಕೇರಿ ಗ್ರಾಪಂನ ಹಿಂದಿನ ಉಪಾಧ್ಯಕ್ಷೆ ಜ್ಯೋತಿ ದಯಾನಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ರೇಣುಕಮ್ಮ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸದಸ್ಯೆ ಎಂ.ವಿ.ರೇಣುಕಮ್ಮ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಉಪಾಧ್ಯಕ್ಷೆ ಜ್ಯೋತಿ ದಯಾನಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ರೇಣುಕಮ್ಮ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯಾದರು.

ಗ್ರಾಪಂನ ಒಟ್ಟು 16 ಸದಸ್ಯರಲ್ಲಿ ನಾಲ್ವರು ಸದಸ್ಯರು ಗೈರಾಗಿದ್ದರು. ಚುನಾವಣಾಧಿಕಾರಿಯಾಗಿ ಸಿಡಿಪಿಒ ಅರುಣ್‌ಕುಮಾರ್, ಸಹ ಚುನಾವಣಾಧಿಕಾರಿಯಾಗಿ ತಾಪಂ ವ್ಯವಸ್ಥಾಪಕ ಅನಿಲ್‌ಬಾಬು, ಪಿಡಿಒ ಚಲುವರಾಜು ಕಾರ್ಯ ನಿರ್ವಹಿಸಿದರು.

ಈ ವೇಳೆ ಅಧ್ಯಕ್ಷ ಕೆ.ಆರ್. ಕೃಷ್ಣ, ಸದಸ್ಯರಾದ ಎಸ್.ಕೆ.ಬಾಲಕೃಷ್ಣ, ಕೆ.ಆರ್.ರಾಜೇಶ್, ಕೆ.ಜಿ. ಪುಟ್ಟರಾಜು, ಕೆ.ಬಿ. ಚಂದ್ರಶೇಖರ್, ಭಾರತಿ ಪ್ರಕಾಶ್, ಸಿ.ಬಿ. ಸರಸ್ವತಿ, ಸಿ.ಎಲ್. ಜ್ಯೋತಿ, ಪದ್ಮಾವತಿ, ಬಿ.ತಾಯಮ್ಮ, ಮುಖಂಡರಾದ ಅನಂತು, ಗೋವಿಂದರಾಜು ಇದ್ದರು.

ಪಂಡಿತಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಶ್ರೀನಿವಾಸ್ ಅವಿರೋಧ ಆಯ್ಕೆ

ಮಳವಳ್ಳಿ:

ತಾಲೂಕಿನ ಪಂಡಿತಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾದರು.

ಪಂಚಾಯ್ತಿ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಶ್ರೀನಿವಾಸ್ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗೋಪಿನಾಥ್ ಘೋಷಿಸಿದರು.

ನೂತನ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ನನ್ನ ಆಯ್ಕೆಗೆ ಕಾರಣರಾದ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಎಲ್ಲ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರ ಸಹಕಾರದಿಂದ ಪಂಚಾಯ್ತಿ ವ್ಯಾಪ್ತಿಯ 7 ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ ಮಾತನಾಡಿ, ಸದಸ್ಯರ ಸಹಕಾರದಿಂದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಮಾರ್ಗದರ್ಶನದಿಂದ ಆಯ್ಕೆ ಮಾಡಿದ್ದು, ನೂತನ ಅಧ್ಯಕ್ಷ ಶ್ರೀನಿವಾಸ್ 14 ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕು ಎಂದು ಸೂಚಿಸಿದರು.

ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ಮಹದೇವಮ್ಮ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾದೇಶ್, ಮುಖಂಡರಾದ ಬಿ.ಕೆ.ರವೀಂದ್ರ ಕುಮಾರ್, ವೆಂಕಟರಾಜು, ಸುರೇಶ್, ಸಿದ್ದರಾಜು, ಕೆಂಚಪ್ಪ ಹಾಗೂ ಗ್ರಾಪಂ ಸದಸ್ಯರು ಪಾಲ್ಗೊಂಡಿದ್ದರು.