ಅವಮಾನಿತ ವರ್ಗಗಳನ್ನು ಪ್ರೀತಿಸಿದ ರೇಣುಕರು

| Published : Mar 13 2025, 12:46 AM IST

ಸಾರಾಂಶ

ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟಿನಿಂದ ಬುಧವಾರ ನಗರದಲ್ಲಿ ಭಕ್ತಿ, ಸಡಗರದಿಂದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರುಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟಿನಿಂದ ಬುಧವಾರ ನಗರದಲ್ಲಿ ಭಕ್ತಿ, ಸಡಗರದಿಂದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು. ಬಿ.ಎಚ್.ರಸ್ತೆಯ ಶಿವಶ್ರೀ ಬ್ಯಾಂಕ್ ಬಳಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶಾಸಕ ಜಿ.ಬಿಜ್ಯೋತಿಗಣೇಶ್ ಭಾಗವಹಿಸಿ ಪೂಜೆ ಸಲ್ಲಿಸಿದರು.ಜಗದ್ಗುರು ಪಂಚಾಚಾರ್ಯ ಟ್ರಸ್ಟ್ ಅಧ್ಯಕ್ಷ ಟಿ.ಆರ್.ಸದಾಶಿವಯ್ಯ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ತತ್ವಗಳು ಇಂದಿನ ಸಮಾಜದ ಸಮಾನತೆಗೆ, ಧಾರ್ಮಿಕ ಸಾಮರಸ್ಯಕ್ಕೆ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ದಾರಿದೀಪದಂತಿವೆ. ರೇಣುಕಾಚಾರ್ಯರು ಶೈವ ತತ್ವ ಶಾಸ್ತ್ರವನ್ನು ಜನಸಾಮಾನ್ಯರಿಗೆ ಪರಿಚಯಿಸಿ ಅದನ್ನು ಜೀವನದ ಭಾಗವನ್ನಾಗಿ ಮಾಡಿದ ಮಹಾ ಶರಣರು ಎಂದು ಹೇಳಿದರು.ರೇಣುಕಾಚಾರ್ಯರು ತಮ್ಮ ವಚನಗಳ ಮೂಲಕ ತತ್ವಗಳನ್ನು ಜನರಿಗೆ ತಿಳಿಸಿಕೊಟ್ಟರು. ಅವರ ವಚನಗಳು ಜನರಿಗೆ ಶ್ರಮ, ಭಕ್ತಿ, ನೈತಿಕತೆ ಮತ್ತು ಸಮಾನತೆಯನ್ನು ಸಾರಿವೆ. ಅವಮಾನಿತ ವರ್ಗಗಳನ್ನು ಪ್ರೀತಿಸಿ ಅವರಿಗೆ ತತ್ವ ಶಾಸ್ತ್ರ ಹಾಗೂ ಧಾರ್ಮಿಕ ಶಿಕ್ಷಣ ನೀಡಿದರು. ಲಿಂಗಾಯತ ಧರ್ಮದ ಮೂಲತ: ಸಿದ್ಧಾಂತಗಳನ್ನು ಪ್ರತಿಪಾದಿಸಲು ಮತ್ತು ಶೈವ ಪರಂಪರೆಯನ್ನು ಬಲಪಡಿಸಲು ಅವರು ತಮ್ಮಜೀವನವನ್ನು ಮೀಸಲಾಗಿಟ್ಟಿದ್ದರು ಎಂದು ಟಿ.ಆರ್.ಸದಶಿವಯ್ಯ ಹೇಳಿದರು.ಶಿವಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್.ಎಸ್.ಭಸ್ಮಾಂಗಿ ರುದ್ರಯ್ಯ, ಉಪಾಧ್ಯಕ್ಷ ಕೆ.ಎಸ್.ಉಮೇಶ್‌ಕುಮಾರ್, ಸಹಕಾರ್ಯದರ್ಶಿ ಜಿ.ಎಸ್.ಸಿದ್ಧರಾಜು, ಖಜಾಂಚಿ ಬಿ.ಎಸ್.ಕರುಣಾಕರ್, ಮುಖಂಡರಾದ ಜಿ.ಹೆಚ್.ಪರಮಶಿವಯ್ಯ, ಎಸ್.ಜೆ.ರುದ್ರಪ್ರಕಾಶ್, ಆರ್.ಎಂ.ವಿಜಯಕುಮಾರ್, ಜಿ.ಸಿ.ವಿರೂಪಾಕ್ಷ, ಕರುಣಾರಾಧ್ಯ, ವಿಜಯಕುಮಾರ್, ವೈ.ಕೆ.ಜ್ಯೋತಿ, ಟಿ.ಎಸ್.ರೇಣುಕುಮಾರ್, ಆರ್.ಎಸ್.ಪ್ರಭು, ನಟರಾಜು, ವೀರಭದ್ರಸ್ವಾಮಿ, ಎಸ್.ಮಂಜುನಾಥ್, ಎಸ್.ಹರೀಶ್, ಓಂಕಾರಸ್ವಾಮಿ, ಡಿ.ಆರ್.ಸತೀಶ್, ಪೂರ್ಣಿಮಾ ಮೊದಲಾದವರು ಭಾಗವಹಿಸಿದ್ದರು. ಇದರ ಅಂಗವಾಗಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.