ಗಂಧದ ಗುಡಿ ಬಳಗದಿಂದ ಶಾಲೆ ದುರಸ್ತಿ

| Published : May 16 2024, 12:49 AM IST

ಸಾರಾಂಶ

ಬಾಳೆಹೊನ್ನೂರು: ಖಾಂಡ್ಯ ಶೌರ್ಯ ವಿಪತ್ತು ಘಟಕದ ಸಹಯೋಗಲ್ಲಿ ಬೆಂಗಳೂರಿನ ಗಂಧದ ಗುಡಿ ಬಳಗದಿಂದ ಸರ್ಕಾರಿ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದಡಿ ಬುಧವಾರ ಬಿದರೆ ಗ್ರಾಪಂ ವ್ಯಾಪ್ತಿಯ ಗುಂಡಿಹೊಂಬಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲಾಯಿತು.

ಬಾಳೆಹೊನ್ನೂರು: ಖಾಂಡ್ಯ ಶೌರ್ಯ ವಿಪತ್ತು ಘಟಕದ ಸಹಯೋಗಲ್ಲಿ ಬೆಂಗಳೂರಿನ ಗಂಧದ ಗುಡಿ ಬಳಗದಿಂದ ಸರ್ಕಾರಿ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದಡಿ ಬುಧವಾರ ಬಿದರೆ ಗ್ರಾಪಂ ವ್ಯಾಪ್ತಿಯ ಗುಂಡಿಹೊಂಬಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲಾಯಿತು.ಶಾಲೆ ಕಟ್ಟಡಕ್ಕೆ ಬಣ್ಣ ಬಳಿಯುವ ಜೊತೆಗೆ ಗೋಡೆ ಮತ್ತು ನೆಲದ ಸಿಮೆಂಟ್ ಕಿತ್ತು ಹೋಗಿರುವುದನ್ನು ಸಹ ದುರಸ್ತಿ ಮಾಡಲಾಯಿತು. ಖಾಂಡ್ಯ ಶೌರ್ಯ ವಿಪತ್ತು ಘಟಕದ ಸಂಯೋಜಕ ಚಂದ್ರಶೇಖರ್ ರೈ, ಸ್ವಯಂ ಸೇವಕರಾದ ಯೋಗೀಶ್ ಆಚಾರ್ಯ, ವಿ.ಸಿ.ರಘುಪತಿ, ಗಂಧದ ಗುಡಿ ಬಳಗದ ಜಿಲ್ಲಾಧ್ಯಕ್ಷ ಮಂಜುನಾಥ್, ಶಿಕ್ಷಕ ಬಿ.ಡಿ.ಚಂದ್ರೇಗೌಡ, ಅಂಗನವಾಡಿ ಸಹಾಯಕಿ ಮಮತಾ ಮತ್ತಿತರರು ಇದ್ದರು.

೧೫ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಗುಂಡಿಹೊಂಬಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿವಿಧ ಕಾಮಗಾರಿಗಳನ್ನು ಬೆಂಗಳೂರಿನ ಗಂಧದ ಗುಡಿ ಬಳಗದಿಂದ ನಡೆಸಲಾಯಿತು.