ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆನಿಮ್ಮ ಕಲಿಕೆಯನ್ನ ಕಷ್ಟಪಟ್ಟು ಕಲಿಯದೆ ಇಷ್ಟಪಟ್ಟು ಕಲಿಯಬೇಕು ತಹಸೀಲ್ದಾರ್ ಶ್ರೀನಿವಾಸ್ ಹೇಳಿದರು.ತಾಲೂಕಿನ ಅಂತರಸಂತೆ ಪ್ರೌಢಶಾಲೆ ಮತ್ತು ಜ್ಯೂನಿಯರ್ ಕಾಲೇಜಿನಲ್ಲಿ 10ನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ದತೆ ಸಲುವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕುರಿತು ಅವರು ಮಾತನಾಡಿದರು.ವರ್ಷಪೂರ್ತಿ ಕಷ್ಟಪಟ್ಟು ಓದಿರುತ್ತೀರಾ, ಆದರೆ ಪರೀಕ್ಷೆ ಸಮಯದಲ್ಲಿ ಆತುರದಿಂದ ಅಥವಾ ಗಾಬರಿಯಿಂದ ತಡವರಿಸಿಕೊಂಡು ತಪ್ಪಾಗಿ ಉತ್ತರ ಬರೆದರೆ ನೀವು ವರ್ಷಪೂರ್ತಿ ಶ್ರಮ ಹಾಕಿ ಕಲಿತ ವಿಷಯಗಳು ವ್ಯರ್ಥವಾಗುತ್ತವೆ. ಆದ್ದರಿಂದ ನೀವು ಪ್ರತಿಕ್ಷಣ ಪ್ರತಿದಿನ ಶ್ರದ್ಧೆ ಮತ್ತು ಆಸಕ್ತಿಯಿಂದ ಹಾಗೂ ಲವಲವಿಕೆಯಿಂದ ಕಲಿಯಬೇಕು ಎಂದರು.ಜೀವಿಕ ಉಮೇಶ್ ಮಾತನಾಡಿ, ನೀವು ಓದಿದರೆ ಸಾಲದು ಓದಿದ್ದನ್ನ ಸರಿಯಾಗಿ ಮನನ ಮಾಡಿಕೊಳ್ಳಬೇಕು ಅದಕ್ಕಾಗಿ ನೀವು ನಿಮ್ಮ ದೈನಂದಿನ ದಿನಚರಿ ಮಾಡಿಕೊಳ್ಳಬೇಕು, ಬೆಳಗ್ಗೆಯಿಂದ ರಾತ್ರಿ ಮಲಗುವ ತನಕ ಸಮಯವನ್ನು ಸರಿಯಾಗಿ ವಿನಿಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.ಮೈಸೂರು ಡಯಟ್ ಪ್ರಾಂಶುಪಾಲ ನಾಗರಾಜಯ್ಯ. ಮುಖ್ಯಶಿಕ್ಷಕಿ ಸುಂದ್ರಮ್ಮ, ಪ್ರಾಂಶುಪಾಲ ಮೈನಾ, ಶಿಕ್ಷಕರಾದ ಮಧುಕುಮಾರ್, ರಮೇಶ್, ಸಾವಿತ್ರಿ, ಸಾವಿತ್ರಿ, ಲೋಹಿತ್, ಅನಿತಾ, ಸೌಮ್ಯ, ಪೋಷಕ ಮಂಡಳಿ ಅಧ್ಯಕ್ಷ ಎನ್. ಗಣೇಶ, ನಾಗರಾಜ್ ಇದ್ದರು.--------------