ಸಾರಾಂಶ
ಎಟಿಎಂ ಬಳಸುವಾಗ ಜಾಗ್ರತೆ ವಹಿಸಬೇಕು. ಎಟಿಎಂ ಹಣ ತೆಗೆಯುವ ವೇಳೆ ಯಾರ ಕೈಯಲ್ಲೂ ಎಟಿಎಂ ಕಾರ್ಡ್ ಕೊಡುವುದು, ಪಾಸ್ವರ್ಡ್ ಹಂಚಿಕೊಳ್ಳವುದು ಮಾಡಬಾರದು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಜ್ಞಾನದಿಂದ ಉತ್ತಮ ಜೀವನ ನಿರ್ಮಾಣ ಸಾಧ್ಯವಾಗುತ್ತದೆ ಎಂದು ನಿಪ್ಪಾಣಿಯ ಬಸವೇಶ್ವರ ನಗರ ಪೊಲೀಸ್ ಠಾಣೆ ಪಿಎಸ್‌ಐ ರಮೇಶ ಪವಾರ ಹೇಳಿದರು.ನಿಪ್ಪಾಣಿಯಲ್ಲಿ ಕ್ರೆಡಿಟ್ ಆಕ್ಸಸ್ ಗ್ರಾಮೀಣ ಲಿಮಿಟೆಡ್ ಸಂಸ್ಥೆ ಆಯೋಜಿಸಿದ್ದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಎಂಬ ವಿಷಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಎಟಿಎಂ ಬಳಸುವಾಗ ಜಾಗ್ರತೆ ವಹಿಸಬೇಕು. ಎಟಿಎಂ ಹಣ ತೆಗೆಯುವ ವೇಳೆ ಯಾರ ಕೈಯಲ್ಲೂ ಎಟಿಎಂ ಕಾರ್ಡ್ ಕೊಡುವುದು, ಪಾಸ್ವರ್ಡ್ ಹಂಚಿಕೊಳ್ಳವುದು ಮಾಡಬಾರದು. ಸಂಘ ಹಾಗೂ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದರೆ ಭವಿಷ್ಯದಲ್ಲೂ ಸುಲಭವಾಗಿ ಸಾಲ ಸಿಗುತ್ತದೆ. ಬಾಕಿ ಬಿಟ್ಟರೆ ಮುಂದಿನ ದಿನಗಳಲ್ಲಿ ಸಾಲ ಸಿಗುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿಯ ರೀಜನಲ್ ವ್ಯವಸ್ಥಾಪಕ ರವಿ ಎಸ್.ಎನ್. ಮಾತನಾಡಿ, ಕ್ರೆಡಿಟ್ ಆಕ್ಸಸ್ ಗ್ರಾಮೀಣ ಲಿಮಿಟೆಡ್ ಸಂಸ್ಥೆ ಕಳೆದ 26 ವರ್ಷಗಳಿಂದ ದೇಶದ 16 ರಾಜ್ಯಗಳಲ್ಲಿ 2,114 ಶಾಖೆಗಳ ಮೂಲಕ 46 ಲಕ್ಷ ಬಡ ಕುಟುಂಬಗಳಿಗೆ ಹಣಕಾಸು ನೆರವು ನೀಡುತ್ತಿದೆ. ಬೆಂಗಳೂರಿನ ಅವಲಹಳ್ಳಿಯಲ್ಲಿ ಕೇವಲ ಆರು ಸದಸ್ಯರಿಂದ ಪ್ರಾರಂಭವಾದ ಈ ಸಂಸ್ಥೆ ಇಂದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದೆ. ಸರ್ಕಾರದ ಕಚೇರಿಗಳು, ಅಂಗನವಾಡಿ ಕೇಂದ್ರಗಳು, ಆಸ್ಪತ್ರೆಗಳಿಗೆ ಪೀಠೋಪಕರಣಗಳನ್ನು ನೀಡಿದೆ ಎಂದರು. ವಿಜಯ ವಾಗ್ಮೂರಿ ಬ್ಯಾಂಕ್ ವ್ಯವಹಾರಗಳ ಕುರಿತು ಮಾಹಿತಿಯನ್ನು ನೀಡಿದರು. ಉಮೇಶ್ ಬಿ.ಕೆ, ಜ್ಯೋತಿ, ಮಾಯಾ, ಪ್ರಶಾಂತ ಸಿಬ್ಬಂದಿ ಹಾಗೂ ಗ್ರಾಮೀಣ ಕೂಟದ ಸದಸ್ಯರು ಪಾಲ್ಗೊಂಡಿದ್ದರು.ಮಂಜಪ್ಪ ನಡುವಿನಮನಿ ಸ್ವಾಗತಿಸಿದರು, ಅಮಿತ ಹಲಸೂರ ನಿರೂಪಿಸಿದರು. ಮೆಹಬೂಬ ಸಹೇಬ ವಂದಿಸಿದರು.