ಕಾರ್ಖಾನೆ ಬೆಳವಣಿಗೆಗೆ ಆಡಳಿತ ಮಂಡಳಿ ಕೈ ಸ್ವಚ್ಛವಾಗಿರಲಿ

| Published : Sep 23 2025, 01:06 AM IST

ಕಾರ್ಖಾನೆ ಬೆಳವಣಿಗೆಗೆ ಆಡಳಿತ ಮಂಡಳಿ ಕೈ ಸ್ವಚ್ಛವಾಗಿರಲಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನೆ ಮಾಡಲು ಹೊಸ ಹೊಸ ತಳಿಗಳನ್ನು ಬಳಸಿ ಕಬ್ಬು ಬೆಳೆಯಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಆಡಳಿತ ಮಂಡಳಿ ಕೈ ಸ್ವಚ್ಛ ಇದ್ದರೆ ಸಹಕಾರಿ ಸಕ್ಕರೆ ಕಾರ್ಖಾನೆಗಳು ಉತ್ತಮವಾಗಿ ನಡೆಯುತ್ತವೆ. ಆದರೆ ಖಾಸಗಿ ಸಕ್ಕರೆ ಕಾರ್ಖಾನೆ ಮಾದರಿಯಲ್ಲಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯರು ಮತ್ತು ಕಾರ್ಖಾನೆ ರೂವಾರಿ ಡಾ.ಪ್ರಭಾಕರ ಕೋರೆ ಹೇಳಿದರು.

ಚಿಕ್ಕೋಡಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ 57ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ರೈತರು ಕಾರ್ಖಾನೆಗೆ ಉತ್ತಮ ಕಬ್ಬು ಕಳಿಸಿದರೆ ಕಾರ್ಖಾನೆಗಳು ಉತ್ತಮವಾಗಿ ನಡೆಯುತ್ತವೆ. ರೈತರ ಕಬ್ಬು ತೂಕ ಮಾಡಲು ಅಟೋಮೆಟಿಕ್ ಮಷೀನ್‌ ಅಳವಡಿಸಲಾಗಿದೆ. ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನೆ ಮಾಡಲು ಹೊಸ ಹೊಸ ತಳಿಗಳನ್ನು ಬಳಸಿ ಕಬ್ಬು ಬೆಳೆಯಬೇಕೆಂದರು.

ವಿಧಾನ ಪರಿಷತ್ ಮಾಜಿ ಸದಸ್ಯರು ಮತ್ತು ಕಾರ್ಖಾನೆ ನಿರ್ದೇಶಕ ಮಹಾಂತೇಶ ಕವಟಗಿಮಠ ಮಾತನಾಡಿ, ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಸಹಕಾರಿ ರಂಗದಲ್ಲಿ ಈ ಕಾರ್ಖಾನೆಯು ರೈತರ ವಿಶ್ವಾಸ ಗಳಿಸಿದೆ. ರೈತರ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಡುತ್ತಿದೆ. ಸರ್ಕಾರದ ಆದೇಶ ಪಾಲನೆ ಮಾಡಿ ರೈತರ ಕಾಮದೇನುವಾಗಿ ಕೆಲಸ ಮಾಡುತ್ತದೆ. ರೈತರು ಮತ್ತು ಕಾರ್ಮಿಕರ ವಿಶ್ವಾಸ ಉಳಿಸಿಕೊಂಡು ಡಾ.ಕೋರೆಯವರ ಮುಂದಾಲೋಚನೆ ಅನುಗುಣವಾಗಿ ಸಕ್ಕರೆ ಉತ್ಪಾದನೆ ಜೊತೆಗೆ ಕಾರ್ಖಾನೆ ಸದಸ್ಯರಿಗೆ ಜೀವವಿಮೆ ಕೊಡಲಾಗುತ್ತದೆ ಎಂದರು.

ರಾಷ್ಟ್ರೀಯ ಸಕ್ಕರೆ ಮಹಾಮಂಡಳದ ನಿರ್ದೇಶಕ ಅಮಿತ ಕೋರೆ ಮಾತನಾಡಿ, 3 ಕೋಟಿ ಲೀಟರ ಎಥೆನಾಲ್ ತಯಾರು ಮಾಡಲಾಗಿದೆ. ಡಿಜಿಟಲ್ ವೇಬ್ರಿಜ್ ಮಾಡಲಾಗಿದೆ. ಇದು ಕರ್ನಾಟಕದಲ್ಲಿ ಮೊದಲ ಪ್ರಯೋಗವಾಗಿದ್ದು ರೈತರಿಗೆ ಅನುಕೂಲವಾಗಲಿದೆ. ಕಿಸಾನ್‌ ಬಜಾರದಿಂದ ಹೆಚ್ಚು ಲಾಭವಾಗಿದೆ. 20 ಶಾಖೆ ಮಾಡುವ ಸಂಕಲ್ಪ ಇದೆ ಎಂದರು.

ವೇದಿಕೆ ಮೇಲೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ನಿರ್ದೇಶಕರಾದ ಅಜೀತ ದೇಸಾಯಿ, ಮಹಾವೀರ ಮಿರ್ಜೆ, ಸಂದೀಪ ಪಾಟೀಲ, ಭರತೇಶ ಬಣವನೆ, ಚೇತನ ಪಾಟೀಲ, ನಂದಕುಮಾರ ನಾಶಿಪೂಡಿ, ಮಹಾವೀರ ಕಾತ್ರಾಳೆ, ಅಣ್ಣಾಸಾಹೇಬ ಇಂಗಳೆ, ಕಾನೂನು ಸಲಹೆಗಾರ ದಿನೇಶ ಪಾಟೀಲ ಇದ್ದರು. ಹಿರಿಯ ನಿರ್ದೇಶಕ ಅಣ್ಣಾಸಾಹೇಬ ಪಾಟೀಲ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಆರ್.ಬಿ.ಖಂಡಗಾವಿ ವಾರ್ಷಿಕ ವರದಿ ಮಂಡಿಸಿದರು. ಕಾರ್ಮಿಕ ಕಲ್ಯಾಣಾಧಿಕಾರಿ ಹಕಾರೆ ನಿರೂಪಿಸಿದರು. ಚೇತನ ಪಾಟೀಲ ವಂದಿಸಿದರು.