ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 19 ಶಾಖೆಗಳನ್ನು ಹೊಂದಿದ್ದು, ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ ₹2.62 ಕೋಟಿ ಲಾಭಗಳಿಸಿ, ಶೇರುದಾರರಿಗೆ ಶೇ.25ರಷ್ಟು ಲಾಭಾಂಶ ವಿತರಿಸಿ ಪ್ರಗತಿಯತ್ತ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ ಗೌಡಪ್ಪ ತಡಸನವರ ಹೇಳಿದರು.ತಾಲೂಕಿನ ನಾಗನೂರ ಪಟ್ಟಣದ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ 31ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷೆತೆ ವಹಿಸಿ ಅವರು ಮಾತನಾಡಿದರು. ಸಂಘದ ಸಾಲಗಾರರಿಗೆ ವಿಮೆ ಸೌಲಭ್ಯ ಒದಗಿಸಿದ್ದು ಹಾಗೂ ಸದಸ್ಯರ ಮಕ್ಕಳ ಮದುವೆಗೆ ಹಾಗೂ ಸದಸ್ಯರು ಮರಣ ಹೊಂದಿದರೆ ಸಹಾಯ ಮಾಡಲಾಗುತ್ತಿದೆ ಎಂದರು.
300 ಶೇರುದಾರರಿಂದ ಆರಂಭಗೊಂಡ ಸಹಕಾರಿಯು ಸದ್ಯ 12,323 ಶೇರುದಾರನ್ನು ಹೊಂದಿ ₹97.30 ಲಕ್ಷ ಶೇರು ಬಂಡವಾಳ, ₹13.29 ಕೋಟಿ ನಿಧಿಗಳನ್ನು ಹೊಂದಿ, ₹32.06 ಕೋಟಿ ಹೂಡಿಕೆ ಮಾಡಿ, ₹140.91 ಕೋಟಿ ಠೇವು ಸಂಗ್ರಹಿಸಿ ವಿವಿಧ ತೇರನಾದ ₹116.81 ಕೋಟಿ ಸಾಲ ವಿತರಿಸಿ, ಒಟ್ಟು ₹158.14 ಕೋಟಿ ದುಂಡಿವ ಬಂಡವಾಳ ಹೊಂದಿ ₹1299 ಕೋಟಿ ವ್ಯವಹಾರ ನಡೆಸಿದೆ ಎಂದ ತಿಳಿಸಿದರು.ಬೆಟಗೇರಿ ಶಾಖೆ ಸ್ವಂತ ಕಟ್ಟಡ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಅರಬಾವಿಮಠ ಶಾಖೆಗೆ ನಿವೇಶನ ಖರೀದಿ ಮಾಡಿದ್ದು ಮತ್ತು ತುಕ್ಕಾನಟ್ಟಿ, ಕುಲಗೋಡ, ಹುಲಕುಂದ. ಶಾಖೆಗಳಿಗೆ ಶೀಘ್ರದಲ್ಲಿ ನಿವೇಶನ ಖರೀದಿಸಲಾಗುವುದು. ಸುಮಾರು ₹2 ಕೋಟಿ ವೆಚ್ಚದಲ್ಲಿ ಪ್ರಧಾನ ಕಚೇರಿ ಕಟ್ಟಡ ನವೀಕರಿಸಲಾಗುವುದು ಎಂದರು.
ಮಾಜಿ ಸಚಿವ ಹಾಗೂ ಬರ್ಡ್ಸ್ ಸಂಸ್ಥೆ ಅಧ್ಯಕ್ಷ ಆರ್.ಎಂ.ಪಾಟೀಲ, ಉತ್ತಮ ವಾತವರಣ ನಿರ್ಮಾಣ ಮಾಡುಲು ಸಹಕಾರಿಯ ಪ್ರತಿಯೊಬ್ಬ ಸದಸ್ಯರು ಒಂದೊಂದು ಸಸಿ ನೆಟ್ಟು ಪಾಲನೆ ಪೋಷಣೆ ಮಾಡಬೇಕೆಂದರು.ಸುಣಧೋಳಿಯ ಶಿವಾನಂದ ಶ್ರೀ ಮತ್ತು ಹಡಗಿನಾಳದ ಮುತ್ತೆಶ್ವರ ಶ್ರೀ, ಲೆಕ್ಕ ಪರೀಶೋಧಕ ಸೈದಪ್ಪ ಗದಾಡಿ ಮಾತನಾಡಿ, ಸಹಾಕಾರಿ ಸಂಘಗಳು ದೇವಾಲಯ ಇದಂತೆ. ಗ್ರಾಹಕರು ಪಡೆದ ಸಾಲವನ್ನು ಸರಿಯಾಗಿ ಸದುಪಯೋಗಿಸಿಕೊಂಡು ಸಕಾಲದಲ್ಲಿ ಮರು ಪಾವತಿ ಮಾಡಬೇಕು ಎಂದರು.
ಸಭೆಯಲ್ಲಿ ರೈತರನ್ನು ಹಾಗೂ ಸಹಕಾರಿ ಆದರ್ಶ ಶಾಖೆ, ಉತ್ತಮ ವ್ಯವಸ್ಥಾಪಕ, ಗುಮಾಸ್ತ, ಸಿಪಾಯಿ, ಪಿಗ್ಮೀ ಸಂಗ್ರಹಕಾರರನ್ನು ಸನ್ಮಾನಿಸಿದರು. ಎಸ್ಎಸ್ಎಲ್‌ಸಿ ಪರಿಕ್ಷೇಯಲ್ಲಿ ಹೆಚ್ಚು ಅಂಕ ಪಡದ ವಿದ್ಯಾರ್ಥಿಗಳಿಗೆ ಸತ್ಕರಿಸಿ ಪ್ರೋತ್ಸಾಹಧನ ನೀಡಿ ಗೌರವಿಸಿದರು.ವೇದಿಕೆಯಲ್ಲಿ ಸಹಕಾರಿ ಉಪಾಧ್ಯಕ್ಷ ಶಿವಲಿಂಗಪ್ಪಾ ಗೋಟೂರ, ನಿರ್ದೇಶಕರಾದ ವೆಂಕಪ್ಪ ಪೂಜೇರಿ, ಮಲ್ಲಪ್ಪ ಬಂಡಿ, ರುದ್ರಪ್ಪ ಬಾಗೋಜಿ, ಸುಬಾಸ ಸಣ್ಣಕ್ಕಿ, ಶಿವಾನಂದ ದಡ್ಡಿ, ರಾಮಪ್ಪ ಪದ್ದಿ, ಕೆಂಪಣ್ಣಾ ನಿಡಸೋಸಿ, ಶ್ರೇಯಾಂಶ ಮೆಳವಂಕಿ, ದುಂಡಪ್ಪ ಬೆಳಕೂಡ, ವಿಠ್ಠಲ ಬೆಳಕೂಡ, ಬಾಳಪ್ಪ ಬಡಕುಂದ್ರಿ, ರಾಮನಗೌಡ ತಡಸನವರ, ಕೆಂಪಣ್ಣ ಕರಿಹೊಳಿ, ರತ್ನಾ ಪಾಟೀಲ, ಜಯಶ್ರೀ ಕರಿಹೊಳಿ, ಬಿಡಿಸಿಸಿ ಬ್ಯಾಂಕ್ ನಿವೃತ್ತ ಶಾಖಾ ವ್ಯವಸ್ಥಾಪಕ ಬಾಳಗೌಡ ಪಾಟೀಲ, ವಿವಿಧ ಶಾಖೆ ಸಲಹಾ ಸಮಿತಿ ಸುಭಾಸ ಮರ್ದಿ, ಈಶ್ವರಪ್ಪ ಸೋಗಲದ, ಮಲ್ಲಪ್ಪ ಕಂಬಿ, ಅಶೋಕ ಬಂಡಿವಡ್ಡರ, ಸಿದ್ದು ಕೋಟಗಿ, ಮಹಾದೇವ ಪತ್ತಾರ, ತಮ್ಮಣ್ಣಾ ಹುಂಡೆಕಾರ, ಶಿವಕುಮಾರ ಜಕಾತಿ, ಗಿರಿಗೌಡ ಪಾಟೀಲ, ವಿಠ್ಠಲ ಕುಕನೂರ, ಈರಪ್ಪ ಸಪ್ತಸಾಗರ, ಬಸವರಾಜ ಬಸೀಡೀಣಿ, ಪ್ರವೀಣ ಕೊಪ್ಪದ, ಭಗವಂತ ಪಾಟೀಲ, ರಾವಸಾಬ ಜಾಧವ, ಬಸವರಾಜ ಜಮಖಂಡಿ, ಅಪ್ಪಣ್ಣ ಇಂಚಲಕರಂಜಿ ಇದ್ದರು.
ಮಯೂರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ರೈತ ಗೀತೆ ಪ್ರಸ್ತುತಪಡಿಸಿದರು. ರಮೇಶ ಕಂಬಿ ವಾರ್ಷಿಕ ವರದಿ ಮಂಡಿಸಿದರು. ಯರಗಟ್ಟಿ ಶಾಖೆ ಸಲಹಾ ಸಮಿತಿ ಸದಸ್ಯ ರುದ್ರಪ್ಪ ಸಿಂಗಾರಿಗೋಪ್ಪ ನಿರೂಪಿಸಿ, ಪ್ರಧಾನ ವ್ಯವಸ್ಥಾಪಕ ಪ್ರಕಾಶ ಅಂಗಡಿ ಸ್ವಾಗತಿಸಿ ವಂದಿಸಿದರು.