ಕಬ್ಬು ಸಾಗಣೆ ವಾಹನಗಳಿಗೆ ರಿಪ್ಲೇಕ್ಟರ್ ಕಡ್ಡಾಯ

| Published : Nov 21 2023, 12:45 AM IST

ಕಬ್ಬು ಸಾಗಣೆ ವಾಹನಗಳಿಗೆ ರಿಪ್ಲೇಕ್ಟರ್ ಕಡ್ಡಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕಬ್ಬು ಸಾಗಣೆಯ ವೇಳೆ ವಾಹನದ ಹಿಂಬದಿಗೆ ಕಡ್ಡಾಯವಾಗಿ ರಿಪ್ಲೇಕ್ಟರ್ ಅಳವಡಿಸಬೇಕು. ವಾಹನಗಳಲ್ಲಿ ಏರು ಧ್ವನಿಯಲ್ಲಿ ಹಾಡುಗಳನ್ನು ಹಾಕಿ ಕರ್ಕಷ್ ಸೌಂಡ್ ಮಾಡಬಾರದು. ಇದರಿಂದ ಹಿಂಬದಿ ವಾಹನಗಳಿಗೆ ತೊಂದರೆಯಾಗುತ್ತದೆ. ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದ ವಾಹನ ಹಾಗೂ ಚಾಲಕನ ಮೇಲೆ ಕ್ರಮ ಅನಿವಾರ್ಯ.

ಕನ್ನಡಪ್ರಭ ವಾರ್ತೆ ಕಾಗವಾಡ

ವೇಗದ ಚಾಲನೆಯಿಂದ ಪ್ರತಿನಿತ್ಯ ಅಫಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಅಫಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕಬ್ಬು ಸಾಗಣೆಯ ವಾಹನಗಳ ಹಿಂಬದಿಯಲ್ಲಿ ಎಲ್ಲರು ಕಡ್ಡಾಯವಾಗಿ ರಿಪ್ಲೇಕ್ಟರ್ ಅಳವಡಿಸಬೇಕು ಎಂದು ಕಾಗವಾಡ ಪಿಎಸ್‌ಐ ಎಂ.ಬಿ.ಬಿರಾದಾರ ಹೇಳಿದರು.

ಅವರು ಸೋಮವಾರ ಕಾಗವಾಡ ಉಗಾರ ಪಟ್ಟಣದಲ್ಲಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ವಾಹನಗಳ ಚಾಲಕರ, ಅಧಿಕಾರಿಗಳ ಹಾಗೂ ಆಡಳಿತ ಮಂಡಳಿಯವರ ಜೊತೆ ಸಭೆ ನಡೆಸಿ, ವಾಹನ ಚಾಲಕರಿಗೆ ತಿಳುವಳಿಕೆ ನೀಡಿದರು. ಕಬ್ಬು ಸಾಗಣೆಯ ವೇಳೆ ವಾಹನದ ಹಿಂಬದಿಗೆ ಕಡ್ಡಾಯವಾಗಿ ರಿಪ್ಲೇಕ್ಟರ್ ಅಳವಡಿಸಬೇಕು. ವಾಹನಗಳಲ್ಲಿ ಏರು ಧ್ವನಿಯಲ್ಲಿ ಹಾಡುಗಳನ್ನು ಹಾಕಿ ಕರ್ಕಷ್ ಸೌಂಡ್ ಮಾಡಬಾರದು. ಇದರಿಂದ ಹಿಂಬದಿ ವಾಹನಗಳಿಗೆ ತೊಂದರೆಯಾಗುತ್ತದೆ. ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದ ವಾಹನ ಹಾಗೂ ಚಾಲಕನ ಮೇಲೆ ಕ್ರಮ ಅನಿವಾರ್ಯ ಎಂಬ ಖಡಕ್ ಸೂಚನೆ ನೀಡಿದರು.

ಕಾಗವಾಡ ತಾಲೂಕಿನ ಮೂರು ಸಕ್ಕರೆ ಕಾರ್ಖಾನೆಗಲ್ಲಿ ವಾಹನ ಚಾಲಕರಿಗೂ ಅಫಘಾತ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ ಎಂದು ಬಿರಾದಾರ ತಿಳಿಸಿದರು.

ಈ ವೇಳೆ ಪಿಎಸ್‌ಐ ಎಂ.ಬಿ. ಬಿರಾದಾರ, ಕ್ರೈಂ ಪಿಎಸ್‌ಐ ಸುರೇಶ ಮಂಟೂರ, ಎಎಸ್‌ಐ ಬಸವರಾಜ ರಿಜಕನವರ, ಸಿಬ್ಬಂದಿ ಸುರೇಶ ನಂದಿವಾಲೆ, ಸಂತೋಷ ಕಾಂಬಳೆ, ರವಿ ಗಸ್ತಿ, ರವಿ ನಿಜಗುಣಿ, ಬೀರಪ್ಪಾ ಪೂಜಾರಿ ಸೇರಿ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಹಾಗೂ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಇದ್ದರು.