ವರದಿ ಫಲಶೃತಿ: ಶಾಸಕರಿಂದ ಬಸ್ ನಿಲ್ದಾಣದ ಪರಿಶೀಲನೆ

| Published : Aug 06 2024, 12:34 AM IST

ಸಾರಾಂಶ

ಕೊಪ್ಪ, ಪಟ್ಟಣದ ಮುಖ್ಯ ಬಸ್ ನಿಲ್ದಾಣ ನಿರ್ವಹಣೆ ಇಲ್ಲದೆ ಸಂಪೂರ್ಣ ಹದೆಗೆಟ್ಟಿದ್ದು ಕನ್ನಡಪ್ರಭ ಪತ್ರಿಕೆಯ ಜು.೨೩ರ ಸಂಚಿಕೆಯಲ್ಲಿ ಪ್ರಯಾಣಿಕರಿಗೆ ಸುರಕ್ಷಿತವಲ್ಲದ ತಾಣ ಕೊಪ್ಪ ಬಸ್ ನಿಲ್ದಾಣ ಎಂಬ ವರದಿಯನ್ನು ಪತ್ರಿಕೆ ಪ್ರಕಟಿಸಿತ್ತು. ಪತ್ರಿಕಾ ವರದಿ ಮತ್ತು ಪ.ಪಂ.ಯ ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಕೆ.ಆರ್.ಡಿ.ಇ.ಎಲ್. ಅಧ್ಯಕ್ಷ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಭಾನುವಾರ ಬಸ್ ನಿಲ್ದಾಣಕ್ಕೆ ತೆರಳಿ ಬಸ್ ನಿಲ್ದಾಣ ಮತ್ತು ಅಂಗಡಿ, ಹೋಟೇಲ್ ಮಳಿಗೆಗಳನ್ನು ಪರಿಶೀಲನೆ ನಡೆಸಿದರು.

ಪ್ರತಿನಿಧಿಗಳು, ಸಾರ್ವಜನಿಕರ ಮನವಿಗೆ ಸ್ಪಂದನೆ

ಕನ್ನಡಪ್ರಭ ವಾರ್ತೆ, ಕೊಪ್ಪ

ಪಟ್ಟಣದ ಮುಖ್ಯ ಬಸ್ ನಿಲ್ದಾಣ ನಿರ್ವಹಣೆ ಇಲ್ಲದೆ ಸಂಪೂರ್ಣ ಹದೆಗೆಟ್ಟಿದ್ದು ಕನ್ನಡಪ್ರಭ ಪತ್ರಿಕೆಯ ಜು.೨೩ರ ಸಂಚಿಕೆಯಲ್ಲಿ ಪ್ರಯಾಣಿಕರಿಗೆ ಸುರಕ್ಷಿತವಲ್ಲದ ತಾಣ ಕೊಪ್ಪ ಬಸ್ ನಿಲ್ದಾಣ ಎಂಬ ವರದಿಯನ್ನು ಪತ್ರಿಕೆ ಪ್ರಕಟಿಸಿತ್ತು. ಪತ್ರಿಕಾ ವರದಿ ಮತ್ತು ಪ.ಪಂ.ಯ ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಕೆ.ಆರ್.ಡಿ.ಇ.ಎಲ್. ಅಧ್ಯಕ್ಷ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಭಾನುವಾರ ಬಸ್ ನಿಲ್ದಾಣಕ್ಕೆ ತೆರಳಿ ಬಸ್ ನಿಲ್ದಾಣ ಮತ್ತು ಅಂಗಡಿ, ಹೋಟೇಲ್ ಮಳಿಗೆಗಳನ್ನು ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಪ.ಪಂ. ಮುಖ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಸೋರುತ್ತಿರುವ ಬಸ್‌ನಿಲ್ದಾಣದ ಮೇಲ್ಛಾವಣಿ, ಬೀಳುವ ಹಂತಕ್ಕೆ ತಲುಪಿದ ಕಂಬಗಳು, ಅಂಗಡಿ ಹೋಟೆಲ್ ಮಳಿಗೆಗಳು ಹಾಗೂ ಕಿತ್ತು ಹೋಗಿರುವ ಟೈಲ್‌ ಗಳನ್ನು ಸರಿಪಡಿಸಿ ಕೂಡಲೇ ದುರಸ್ತಿಗೊಳಿಸುವಂತೆ ಕ್ರಮ ವಹಿಸಬೇಕೆಂದು ಮುಖ್ಯಾಧಿಕಾರಿಗಳಿಗೆ ತಿಳಿಸಿದರು. ಶಾಸಕರ ಸೂಚನೆಯಂತೆ ಇನ್ನೆರಡು ದಿನಗಳಲ್ಲಿ ದುರಸ್ತಿ ಕಾರ್ಯ ಆರಂಭಿಸುವುದಾಗಿ ಪ.ಪಂ. ಮುಖ್ಯಾಧಿಕಾರಿ ಚಂದ್ರಕಾಂತ್ ತಿಳಿಸಿದರು.

ಪ.ಪಂ. ಸದಸ್ಯರಾದ ವಿಜಯ್ ಕುಮಾರ್, ರಶೀದ್, ಮೈತ್ರಾ ಗಣೇಶ್, ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಜೊತೆಯಲ್ಲಿದ್ದರು.