ಸಾರಾಂಶ
ಮಲೇಬೆನ್ನೂರು: ಸೆ.೨೩ ಪೌರ ಕಾರ್ಮಿಕರ ದಿನಾಚರಣೆಯಾಗಿದ್ದು, ಅವರ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಪ್ರಸ್ತುತ ಅವರ ಸೇವೆ ವೈಜ್ಞಾನಿಕವಾಗಿ ಬದಲಾವಣೆಯಾಗಿದೆ ಎಂದು ಮುಖ್ಯಾಧಿಕಾರಿ ಎಚ್.ಎನ್. ಭಜಕ್ಕನವರ ಹೇಳಿದರು. ಪುರಸಭೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಾರ್ಮಿಕರಿಗೆ ದಿನಗೂಲಿ ಹಾಗೂ ಸಮಾನ ವೇತನ ನೀಡಲಾಗುತ್ತಿದೆ. ಸರ್ಕಾರ ಸೂಚನೆಯಂತೆ ೨೦೧೭ರಿಂದ ಅಗತ್ಯವಿರುವ ಕಾರ್ಮಿಕರ ನೇಮಕಕ್ಕೆ ಸರ್ಕಾರ ಸೂಚನೆ ನೀಡಿದೆ ಎಂದರು.
೭೦೦ ಜನಸಂಖ್ಯೆ ಒಬ್ಬ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಮಲೇಬೆನ್ನೂರಿನಲ್ಲಿ ೩೫ ಪೌರ ಕಾರ್ಮಿಕರ ಅಗತ್ಯವಿದೆ. ಹಾಲಿ ೧೭ ಕಾರ್ಮಿಕರು ಕರ್ತವ್ಯನಿರ್ವಹಿಸುತ್ತಿದ್ದಾರೆ. ಉಳಿದ ೧೮ ಪೌರಕಾರ್ಮಿಕರ ನೇಮಕ ಮಾಡಿಕೊಳ್ಳಲು ಸದಸ್ಯರ ಸಭಾ ನಡಾವಳಿಯೊಂದಿಗೆ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಸಲಾಗುವುದು ಎಂದರು.ಪುರಸಭಾ ಸದಸ್ಯರಾದ ಸುಧಾ, ವಿಜಯಲಕ್ಷ್ಮೀ, ಸಾಬೀರ್ ಅಲಿ, ಬಿ.ಸಿದ್ದೇಶ್, ನಯಾಜ್, ಗೌಡರ ಮಂಜಣ್ಣ ಪೌರ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡರು.
ಪುರಸಭೆ ಉಪಾಧ್ಯಕ್ಷೆ ನಪ್ಸಿಯಾ ಬಾನು ಸಭೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸದಸ್ಯ ಯೂಸೂಫ್ ಖಾನ್, ಸುರೇಶ್, ಪರಿಸರ ಎಂಜಿನಿಯರ್ ಉಮೇಶ್ ಸಭೆಯಲ್ಲಿ ಮಾತನಾಡಿದರು. ನೌಕರರ ಸಂಘದ ಅಧ್ಯಕ್ಷ ಕೀಜರ್ ಅಲಿ ಖಾನ್, ಉಪಾಧ್ಯಕ್ಷ ಹಾಲೇಶಪ್ಪ, ಶಿವರಾಜ್ ಕೂಸಗಟ್ಟಿ, ಅವಿನಾಶ್ ಹಾಜರಿದ್ದರು.ಕಾರ್ಮಿಕರಿಗೆ ಕ್ರೀಡಾ ಚಟುವಟಿಕೆ ನಡೆಸಿ ಬಹುಮಾನ ವಿತರಿಸಲಾಯಿತು. ಪೌರ ಕಾರ್ಮಿಕರನ್ನು ಗೌರವಿಸಲಾಯಿತು.
- - - (** ಈ ಫೋಟೋ ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಬಹುದು) -೨೩-ಎಂಬಿಆರ್೨:ಮಲೇಬೆನ್ನೂರು ಪುರಸಭೆ ಸಭಾಂಗಣದಲ್ಲಿ ಸೋಮವಾರ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಗೌರವಿಸಲಾಯಿತು. ಮುಖ್ಯಾಧಿಕಾರಿ ಎಚ್.ಎನ್. ಭಜಕ್ಕನವರ, ಉಪಾಧ್ಯಕ್ಷೆ ನಪ್ಸಿಯಾ ಬಾನು, ಸದಸ್ಯರಾದ ಸುಧಾ, ವಿಜಯಲಕ್ಷ್ಮೀ, ಸಾಬೀರ್ ಅಲಿ, ಬಿ. ಸಿದ್ದೇಶ್ ಇತರರು ಇದ್ದರು.