ಸಾರಾಂಶ
ರಾಷ್ಟ್ರೀಯ ಹಬ್ಬಗಳು ದೇಶ ಬಾಂಧವರಲ್ಲಿ ದೇಶ ಭಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಜೊತೆಗೆ ಸಂಭ್ರಮ ತುಂಬುವಂತೆ ಮಾಡುತ್ತವೆ ಎಂದು ಮನಗೂಳಿ ಹೆಸ್ಕಾಂ ಇಲಾಖೆಯ ಕಿರಿಯ ಅಭಿಯಂತರ ಚನ್ನಗೌಡ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ದೇಶದಲ್ಲಿ ಸಂವಿಧಾನ ಜಾರಿಯಾದ ಜ.೨೬, ೧೯೫೦ ದಿನವು ವಿಶ್ವದ ದೊಡ್ಡ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲು ಹಾಕಿದ ಸುದಿನವಾಗಿದೆ ಎಂದು ಮನಗೂಳಿ ಹೆಸ್ಕಾಂ ಇಲಾಖೆಯ ಕಿರಿಯ ಅಭಿಯಂತರ ಚನ್ನಗೌಡ ಪಾಟೀಲ ಹೇಳಿದರು.ತಾಲೂಕಿನ ಮನಗೂಳಿ ಹೆಸ್ಕಾಂ ಇಲಾಖೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೭೫ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಬ್ಬಗಳು ದೇಶ ಬಾಂಧವರಲ್ಲಿ ದೇಶ ಭಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಜೊತೆಗೆ ಸಂಭ್ರಮ ತುಂಬುವಂತೆ ಮಾಡುತ್ತವೆ. ವಿವಿಧತೆಯಲ್ಲಿ ಏಕತೆಯನ್ನು ಇಡೀ ಜಗತ್ತಿಗೆ ಸಾರಿದ ದೇಶ ನಮ್ಮದು. ಇಂತಹ ಹೆಮ್ಮೆಯ ದೇಶದಲ್ಲಿ ನಾವೆಲ್ಲರೂ ಒಂದಾಗಿ ದೇಶದ ಪ್ರಗತಿಗೆ ಮುಂದಾಗಬೇಕು ಎಂದರು.
ಧ್ವಜಾರೋಹಣ ನೆರವೇರಿಸಿದ ಶಾಖೆಯ ಸಹಾಯಕ ಅಭಿಯಂತರ ಪರಶುರಾಮ ಉಕ್ಕಲಿ, ಸಿಬ್ಬಂದಿ ಸುರೇಶ ಕಲ್ಲೂರ, ಶ್ರೀಮಂತ ನಾಗರಾಳ ಸಂವಿಧಾನದ ಮಹತ್ವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಮನಗೂಳಿಯ ೩೩ ಕೆವಿ ಸ್ಟೇಶನ್ ಜೆಇ ಶರಣು ಗೊಳಸಂಗಿ, ಸಿಬ್ಬಂದಿ ರಾಜಶೇಖರ ಹೊಸಮನಿ, ಪವಾಡೆಪ್ಪ ಗಾಣಿಗೇರ, ಪೂಜಾ ಮನಗೂಳಿ, ಶಿವಾನಂದ ಸಜ್ಜನ, ರಮೇಶ ಹಾವಣ್ಣನವರ, ಅಶೋಕ ಬಳಗಾನೂರ, ಅಶೋಕ ತೆಲಗಿ, ಶ್ರೀಧರ ಲಮಾಣಿ, ಪ್ರಶಾಂತ ಬಿರಾದಾರ ಇತರರು ಇದ್ದರು.