ಹಡಪದ ಅಪ್ಪಣ್ಣ ಸಮಾಜದ ಭವನಕ್ಕಾಗಿ ಭೂಮಿಗೆ ಮನವಿ

| Published : Feb 05 2024, 01:49 AM IST

ಸಾರಾಂಶ

ಬೀದರ್‌ ತಾಲೂಕಿನ ಚಿಕ್ಕಪೇಟ್‌ದಲ್ಲಿಯ ಸರ್ಕಾರಿ ಜಮೀನು ಅಥವಾ ನಗರ ವ್ಯಾಪ್ತಿಯ ಸರ್ಕಾರಿ 2 ಎಕರೆಯಷ್ಟು ಜಮೀನಾಗಲಿ ಸಮಾಜದ ಸಮುದಾಯ ಭವನಕ್ಕಾಗಿ ಮಂಜೂರು ಮಾಡಿದರೆ ಬೀದರ್‌ನಲ್ಲಿ ವಾಸವಾಗಿರುವ ಸಮಾಜದ ಜನರಿಗೆ ಅನುಕೂಲವಾಗುತ್ತದೆ ಎಂದು ಸಮಾಜದ ಮುಖಂಡರು ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್‌

ಬೀದರ್ ತಾಲೂಕಿನ ಚಿಕ್ಕಪೇಟ್‌ದಲ್ಲಿರುವ ಸರ್ವೇ ನಂ.61ರಲ್ಲಿಯ ಸರ್ಕಾರಿ ಜಮೀನಿನಲ್ಲಿ 2 ಎಕರೆ ಜಮೀನಾಗಲಿ ಅಥವಾ ಬೀದರ್ ನಗರ ವ್ಯಾಪ್ತಿಯ 2 ಎಕರೆ ಸರ್ಕಾರಿ ಜಮೀನಾಗಲಿ ಹಡಪದ ಅಪ್ಪಣ್ಣ ಸಮಾಜದ ಸಮುದಾಯ ಭವನ, ವಸತಿ ನಿಲಯ, ಶಾಲಾ ಕಾಲೇಜುಗಳು, ಮಂದಿರ ಸ್ಥಾಪೀಸುವುದಕ್ಕಾಗಿ ಮಂಜೂರು ಮಾಡಬೇಕೆಂದು ಹಡಪದ ಅಪ್ಪಣ್ಣ ಸಮಾಜ ಸಂಘವು ಮನವಿ ಮಾಡಿದೆ.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಸಮಾಜ ಸಂಘದ ಜಿಲ್ಲಾಧ್ಯಕ್ಷ ಎಚ್ ಪ್ರಭುರಾವ ತರನಳ್ಳಿ ವಕೀಲರ ನೇತೃತ್ವದಲ್ಲಿ ಬೀದರ್‌ನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ, ಹಡಪದ ಸಮಾಜ ಬೀದರ್‌ ಜಿಲ್ಲೆಯಲ್ಲಿ ಸಾಕಷ್ಟು ಜನಸಂಖ್ಯೆಯಲ್ಲಿದ್ದು, ಅದರಲ್ಲಿ ವಿಶೇಷವಾಗಿ ಸಿಎಂಸಿ ಕಾಲೋನಿ ಮೈಲೂರು, ಗಾಂಧಿ ನಗರ ಮೈಲೂರು, ಅಗ್ರಿಕಲ್ಚರ್ ಕಾಲೋನಿ ಮೈಲೂರು ಮತ್ತು ಸಮೀಪದ ಇತರೆ ಕಾಲೋನಿಗಳಲ್ಲಿ ಸುಮಾರು 6000 ರಷ್ಟು ಜನರು ವಾಸವಾಗಿರುತ್ತಾರೆ.

ಬೀದರ್‌ ತಾಲೂಕಿನ ಚಿಕ್ಕಪೇಟ್‌ದಲ್ಲಿಯ ಸರ್ಕಾರಿ ಜಮೀನು ಅಥವಾ ನಗರ ವ್ಯಾಪ್ತಿಯ ಸರ್ಕಾರಿ 2 ಎಕರೆಯಷ್ಟು ಜಮೀನಾಗಲಿ ಸಮಾಜದ ಸಮುದಾಯ ಭವನಕ್ಕಾಗಿ ಮಂಜೂರು ಮಾಡಿದರೆ ಬೀದರ್‌ನಲ್ಲಿ ವಾಸವಾಗಿರುವ ಸಮಾಜದ ಜನರಿಗೆ ಅನುಕೂಲವಾಗುತ್ತದೆ ಎಂದರು.

ಬೀದರ್ ನಗರವು ಜಿಲ್ಲೆಯ ಕೇಂದ್ರ ಸ್ಥಾನವಾಗಿದ್ದು, ಇಲ್ಲಿಯವರೆಗೆ ಹಡಪದ ಸಮಾಜದವರ ಯಾವುದೇ ತರಹದ ಸಮುದಾಯ ಭವನವಾಗಲಿ, ಮಂದಿರವಾಗಲಿ, ವಸತಿ ನಿಲಯವಾಗಲಿ, ಶಾಲಾ ಕಾಲೇಜುಗಳಾಗಲಿ ಇರಲಾರದಕ್ಕಾಗಿ ತೊಂದರೆಯಾಗುತ್ತಿದೆ. ಅದಕ್ಕಾಗಿ ಸಮುದಾಯ ಭವನ, ವಸತಿ ನಿಲಯ, ಶಾಲಾ-ಕಾಲೇಜು, ಮಂದಿರ ನಿರ್ಮಾಣ, ಮಾಡುವುದಕೋಸ್ಕರ 2-ಎಕರೆ ಜಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮಾಜ ಸಂಘದ ಕಾರ್ಯದರ್ಶಿ ಶರಣಪ್ಪಾ ಚಂದನಹಳ್ಳಿ ಹಾಗೂ ಹಣಮಂತರಾವ ಹುಣಜಿ, ಬೀದರ್‌ ತಾಲೂಕು ಅಧ್ಯಕ್ಷ ಸುಭಾಶ ಹಳ್ಳಿಖೇಡ (ಕೆ) ಇದ್ದರು.