ಸಾರಾಂಶ
ಹಿಂದುಳಿದ ಸಮಾಜವಾದ ನದಾಫ್, ಪಿಂಜಾರ್ ಅಭಿವೃದ್ದಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸುವ ಕಾರ್ಯವನ್ನು ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಮಾಡಬೇಕು
ಲಕ್ಷ್ಮೇಶ್ವರ: ನದಾಫ್, ಪಿಂಜಾರ್ ಅಭಿವೃದ್ದಿ ನಿಗಮಕ್ಕೆ ಪ್ರತ್ಯೇಕ ಅನುದಾನ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ನದಾಫ್, ಪಿಂಜಾರ್ ಸಂಘದ ಲಕ್ಷ್ಮೇಶ್ವರ ತಾಲೂಕಾಧ್ಯಕ್ಷ ರಮಜಾನ್‌ಸಾಬ ನದಾಫ್ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಸೋಮವಾರ ಪಟ್ಟಣದ ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮವಾಸಿ ಅವರಿಗೆ ಲಕ್ಷ್ಮೇಶ್ವರ ತಾಲೂಕು ನದಾಫ್, ಪಿಂಜಾರ್ ಸಂಘದ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿದರು.ಕರ್ನಾಟಕ ರಾಜ್ಯಾದ್ಯಂತ ನದಾಫ್, ಪಿಂಜಾರ್ ಸಮಾಜದಲ್ಲಿ ಸುಮಾರು 25 ಲಕ್ಷ ಜನರಿದ್ದು, ಆರ್ಥಿಕ. ಸಾಮಾಜಿಕ, ಶೈಕ್ಷಣಿಕ. ರಾಜಕೀಯ ಹಾಗೂ ಔದ್ಯೋಗಿಕವಾಗಿ ಹಿಂದುಳಿದ ಸಮಾಜವಾಗಿದ್ದರಿಂದ ಸಮಾಜದ ಅಭಿವೃದ್ದಿಗಾಗಿ ಹಿಂದೆ ಇದ್ದ ಬಿಜೆಪಿ ಸರ್ಕಾರ ಪಿಂಜಾರ್, ನದಾಫ್ ಸೇರಿದಂತೆ 13 ಉಪ ಪಂಗಡಗಳಿಗೆ ನದಾಫ್, ಪಿಂಜಾರ್ ಅಭಿವೃದ್ದಿ ನಿಗಮ ಸ್ಥಾಪನೆ ಮಾಡುವ ಮೂಲಕ ಹಿಂದುಳಿದ ಸಮಾಜಕ್ಕೆ ನೈತಿಕ ಬೆಂಬಲ ನೀಡುವ ಕಾರ್ಯ ಮಾಡಿತ್ತು. ಹಿಂದುಳಿದ ಸಮಾಜವಾದ ನದಾಫ್, ಪಿಂಜಾರ್ ಅಭಿವೃದ್ದಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸುವ ಕಾರ್ಯವನ್ನು ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಮಾಡಬೇಕು ಎಂದು ಹೇಳಿದರು.
ಈ ವೇಳೆ ಎಂ.ಎಂ. ಗಾಡಗೋಳಿ ಮಾತನಾಡಿದರು. ಶರೀಫ್ ನದಾಫ್, ಕಲಂದರ ನದಾಫ್, ಹುಸೇನಸಾಬ ನದಾಫ್, ಖಾಜಿರಬಿ ನದಾಫ್, ಅಲ್ಲೀಸಾಬ್ ನದಾಫ್, ನಜೀರ್‌ಸಾಬ್ ನದಾಫ್, ಶರೀಫಸಾಬ್ ನದಾಫ್, ಹಜರುದ್ದೀನ ಅತ್ತಿಗೇರಿ, ದಾದಾಖಲಂದರ ನದಾಫ್, ಅಬ್ದುಲ್‌ರಜಾಕ್ ಗಾಡಗೋಳಿ, ಸೈನಾಜಬಿ ನದಾಫ್, ಶೈರಾ ಅಲ್ಲಾಭಕ್ಷ ನದಾಫ್, ಹಾಲೋಸಾಬ ನದಾಫ್, ಚಮನಸಾಬ್ ನದಾಫ್, ಮಾಬುಸಾಬ ನದಾಫ್, ಬಾಬುಸಾಬ ನದಾಫ್ ಸೇರಿದಂತೆ ಅನೇಕರು ಇದ್ದರು.