ಚನ್ನರಾಯಪಟ್ಟಣ: ಯೋಗ ಕೇಂದ್ರದ ಕಾರ್ಯ ಚಟುವಟಿಕೆಗಳು ನಿರಂತರವಾಗಿ ನಡೆಯಲು ಸ್ಥಳ ಅವಕಾಶ ನೀಡಬೇಕಾಗಿ ಶಾಸಕ ಸಿ. ಎನ್. ಬಾಲಕೃಷ್ಣ ಅವರನ್ನು ಭೇಟಿ ಮಾಡಿ ಪಟ್ಟಣದ ಆರಾಧ್ಯ ಯೋಗ ಕೇಂದ್ರ ಗೆಳೆಯರ ಬಳಗದ ವತಿಯಿಂದ ಮನವಿ ಮಾಡಲಾಯಿತು.

ರಾಜ್ಯದ ಹಲವಾರು ಕಡೆ ಯೋಗ ಕೇಂದ್ರಗಳಿದ್ದು ಸಮಾಜದ ಸುಸ್ಥಿತಿಗೆ ಯೋಗಿಗಳ ಸದೃಢ ದೇಹ ಹಾಗೂ ಮಾನಸಿಕ ಸದೃಢತೆಗೆ ಹಾಗೂ ಸಮಾಜದ ಇತರೆ ಚಟುವಟಿಕೆಗಳ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಡಬೇಕೆಂದು ಸಂಘವು ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ ಪಟ್ಟಣದಲ್ಲಿ ಉತ್ತಮ ಸ್ಥಳವನ್ನು ಗುರುತಿಸಿ ಶೀಘ್ರದಲ್ಲೇ ಯೋಗ ಕೇಂದ್ರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.