ವಸತಿ ಸೌಲಭ್ಯ ಕಲ್ಪಿಸಿಕೊಡಲು ಮನವಿ

| Published : Apr 28 2025, 12:46 AM IST

ಸಾರಾಂಶ

ತಾಲೂಕಿನ ಬ್ಯಾಡನೂರು ದೊಡ್ಡಹಟ್ಟಿ ಹಾಗೂ ನಲಿಗಾನಹಳ್ಳಿಯ ವಸತಿ ರಹಿತ ಕಡುಬಡವರಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾಜಿ ಸಚಿವ ವೆಂಕಟರಮಣಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ಬ್ಯಾಡನೂರು ದೊಡ್ಡಹಟ್ಟಿ ಹಾಗೂ ನಲಿಗಾನಹಳ್ಳಿಯ ವಸತಿ ರಹಿತ ಕಡುಬಡವರಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾಜಿ ಸಚಿವ ವೆಂಕಟರಮಣಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಿವೇಶನ ಹಾಗೂ ವಸತಿಗಳಿಲ್ಲದ ಬಡವರ ಸಮಸ್ಯೆ ಕುರಿತು ಭಾನುವಾರ ಪೂಜಾರಪ್ಪ ಹಾಗೂ ಇವರ ನೇತೃತ್ವದ 30ಕ್ಕಿಂತ ಹೆಚ್ಚು ರೈತ ಮುಖಂಡರು ತಾಲೂಕಿನ ಹನುಮಂತನಹಳ್ಳಿಯ ತೋಟದ ಮನೆಗೆ ತೆರಳಿ ವಸತಿ ಹೀನ ಬಡವರ ಸಮಸ್ಯೆ ಕುರಿತು ಬಗ್ಗೆ ಮಾಜಿ ಸಚಿವ ವೆಂಕಟರಮಣಪ್ಪ ಅವರ ಗಮನ ಸೆಳೆದರು ಮನವಿ ಮಾಡಿದರು.

ಬಳಿಕ ಮಾತನಾಡಿ ಶಾಸಕ ವೆಂಕಟೇಶ್‌ ಅವರ ಗಮನಕ್ಕೆ ತರುವ ಮೂಲಕ ಸಮಸ್ಯೆ ಬಗೆ ಹರಿಸಿಕೊಡುವಂತೆ ಮಾಜಿ ಸಚಿವರಲ್ಲಿ ಮನವಿ ಮಾಡಿದ್ದು ಈ ಎರಡು ಗ್ರಾಮದ ವಸತಿ ಹೀನರಿಗೆ ಕೂಡಲೇ ಕಂದಾಯ ಇಲಾಖೆಯಿಂದ ಹಕ್ಕುಪತ್ರ ಹಾಗೂ ತಾಪಂ ಮತ್ತು ಗ್ರಾಪಂ ಯೋಜನೆಗಳ ಅಡಿಯಲ್ಲಿ ಮನೆ ಮಂಜೂರಾತಿ ಕಲ್ಪಿಸಿ ಬಡವರಿಗೆ ಅಶ್ರಯ ಕಲ್ಪಿಸುವಂತೆ ಮನವಿ ಪತ್ರ ಸಲ್ಲಿಸಿದ್ದೇವೆ. ಇದಕ್ಕೆ ಮಾಜಿ ಸಚಿವ ವೆಂಕಟರಮಣಪ್ಪ ಪೂರಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದರು. ಈ ವೇಳೆ ರೈತ ಸಂಘದ ಅಧ್ಯಕ್ಷ ಶಿವು. ಜಿಲ್ಲಾ ಕಾರ್ಯದರ್ಶಿ ರಾಮಾಂಜಿನಪ್ಪ, ಚಿತ್ತಪ್ಪ, ಸದಾಶಿವಪ್ಪ, ರಾಮಪ್ಪ, ಹೊಸಕೋಟೆ ಗೋಪಾಲ್‌, ನರಸಿಂಹಪ್ಪ ರಾಮಾಂಜಿನೇಯ, ನಾಗರಾಜಪ್ಪ, ವೀರಭದ್ರಪ್ಪ ಇತರರಿದ್ದರು.