ಸಾರಾಂಶ
ಹಿರೇಕೆರೂರು ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ ಹಾಗೂ ವಿವಿಧ ಬೇಡಿಕೆ ಈಡೇರಿಸಲು ಅಗ್ರಹಿಸಿ ತಾಲೂಕು ನಿವೃತ್ತ ನೌಕರರ ಸಂಘ ಹಾಗೂ ಗ್ರಾಹಕರ ವೇದಿಕೆ ವತಿಯಿಂದ ಪಟ್ಟಣದ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ಅನಿಲಕುಮಾರ ಮೂಲಕ ಮುಖ್ಯ ಕಚೇರಿಗೆ ಮನವಿ ನೀಡಿದರು.
ಹಿರೇಕೆರೂರು: ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ ಹಾಗೂ ವಿವಿಧ ಬೇಡಿಕೆ ಈಡೇರಿಸಲು ಅಗ್ರಹಿಸಿ ತಾಲೂಕು ನಿವೃತ್ತ ನೌಕರರ ಸಂಘ ಹಾಗೂ ಗ್ರಾಹಕರ ವೇದಿಕೆ ವತಿಯಿಂದ ಪಟ್ಟಣದ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ಅನಿಲಕುಮಾರ ಮೂಲಕ ಮುಖ್ಯ ಕಚೇರಿಗೆ ಮನವಿ ನೀಡಿದರು.
ತಾಲೂಕು ನಿವೃತ್ತ ನೌಕರರ ಸಂಘದ ಕೋಶಾಧ್ಯಕ್ಷೆ ಎಂ.ಬಿ. ಸಾವಜ್ಜಿಯವರು ಮಾತನಾಡಿ, ಹಿರೇಕೆರೂರು ಪಟ್ಟಣದ ಸ್ಟೇಟ್ ಬ್ಯಾಂಕ್‌ನಲ್ಲಿ ಹೆಚ್ಚನ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿದ್ದು, ಇದಕ್ಕೆ ತಕ್ಕಂತೆ ಸಿಬ್ಬಂದಿ ಇಲ್ಲ. ಇದರಿಂದ ಗ್ರಾಹಕರು ಸಮಸ್ಯೆ ಎದುರಿಸುವಂತಾಗಿದೆ. ಬ್ಯಾಂಕ್‌ನಲ್ಲಿ ವಿವಿಧ ವಹಿವಾಟು ನಡೆಸಲು ಗಂಟೆಗಟ್ಟಲೇ ಕಾಯಬೇಕಾಗಿದೆ. ವೃದ್ಧರು, ಹಿರಿಯ ನಾಗರಿಕರು, ಅಂಗವಿಕಲರು, ಹಣ ಪಡೆಯಲು, ಠೇವಣಿ ಮಾಡಲು ಹೆಚ್ಚು ವೇಳೆ ಕಾಯುವ ಸ್ಥಿತಿ ಇದೆ. ವಿವಿಧ ವಹಿವಾಟಿನ ರೀತಿ ಗೊತ್ತಿರದ ಕೆಲವು ಗ್ರಾಹಕರಿಗೆ ಸಮರ್ಪಕವಾಗಿ ಮಾಹಿತಿ ರೆಯುತ್ತಿಲ್ಲ. ಹಣ ಪಡೆಯಲು ತ್ವರಿತಗತಿಯಲ್ಲಿ ಟೋಕನ್ ನೀಡುವ ವ್ಯವಸ್ಥೆ ಇಲ್ಲ. ಈ ಬ್ಯಾಂಕಿನಲ್ಲಿ ಮೂಲಸೌಕರ್ಯ ಹಾಗೂ ಸಿಬ್ಬಂದಿ ಕೊರತೆ ಇದ್ದು, ಮೇಲಧಿಕಾರಿಗಳು ಈ ಬಗ್ಗೆ ಕೂಡಲೇ ಗಮನ ಹರಿಸಿ ಜೂ ೧೫ರೊಳಗಾಗಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಬ್ಯಾಂಕ್ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ವಿ.ಎಸ್. ಪುರದ, ಎನ್.ಎಸ್. ಕುರಗುಂದಮಠ, ನಾಗನಗೌಡ ಎನ್. ನಿಂಗನಗೌಡ್ರ, ಕಲ್ಲಪ್ಪ ಬಾಳಿಕಾಯಿ, ಐ.ಜಿ. ಶಿರಿಗೌಡ್ರ, ಎಂ.ಬಿ. ಕಾಗಿನಲ್ಲಿ, ಜೆ.ವಿ. ಅಂಗಡಿ ಹಾಗೂ ಸಾರ್ವಜನಿಕರು, ಗ್ರಾಹಕರು ಇದ್ದರು,