ಸಾರಾಂಶ
ಹತ್ತಿಕುಣಿ ಹೋಬಳಿಯ ಯರಗೋಳ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ ಕರವೇ ವತಿಯಿಂದ ಜಿಲ್ಲಾ ಆರೋಗ್ಯಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಯಾದಗಿರಿ ತಾಲೂಕಿನ ಹತ್ತಿಕುಣಿ ಹೋಬಳಿಯ ಯರಗೋಳ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ ಕರವೇ ವತಿಯಿಂದ ಜಿಲ್ಲಾ ಆರೋಗ್ಯಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ತಾಲೂಕಿನಲ್ಲಿ ಬರುವ ಯರಗೋಳ ಗ್ರಾಮವು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮೇಲ್ದರ್ಜೆಗೇರಿಸಲು ಎಲ್ಲಾ ರೀತಿಯಿಂದ ಅನಿವಾರ್ಯತೆ ಹೊಂದಿದ್ದು, ಈ ಆರೋಗ್ಯ ಕೇಂದ್ರದಲ್ಲಿ ಮೂಲಭೂತ ಸೌಲಭ್ಯದ ಕೊರತೆ ಮತ್ತು ವೈದ್ಯರ ಹಾಗೂ ಸಿಬ್ಬಂದಿ ವರ್ಗದ ಅಭಾವದಿಂದ ಜನರಿಗೆ ತೊಂದರೆ ಉಂಟಾಗುತ್ತಿದೆಂದರು.
ಯರಗೋಳ ಗ್ರಾಮವು ಸುಮಾರು 20ರಿಂದ 22 ಸಾವಿರ ಜನಸಂಖ್ಯೆ ಹೋಂದಿರುವ ಜಿಲ್ಲಾ ಪಂಚಾಯತಿ ಕೇಂದ್ರವಾಗಿದ್ದು, ಸುತ್ತಮುತ್ತಲಿನ ಗ್ರಾಮಗಳಾದ ವಡ್ನಳ್ಳಿ, ಬಾಚವಾರ, ಚಂದನಾಯ್ಕ ತಾಂಡಾ, ಪುತ್ತುನಾಯ್ಕ ತಾಂಡಾ, ಹಾಗೂ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಕೆಲವು ಗ್ರಾಮಗಳ ಜನಸಾಮಾನ್ಯರಿಗೆ ಯರಗೋಳ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅವಂಲಬಿತವಾಗಿದ್ದಾರೆ ಇನ್ನೂ ಹೆಚ್ಚಿನರೀತಿಯ ಚಿಕಿತ್ಸೆಗೆ ಸುಮುದಾಯ ಆರೋಗ್ಯ ಕೇಂದ್ರ ಜರೂರಾಗಿದೆಂದು ಒತ್ತಾಯಿಸಿದರು.ಕರವೇ ತಾಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ ಮಾತನಾಡಿ, ಗ್ರಾಮೀಣರ ಗರ್ಭಿಣಿಯರ ತುರ್ತು ಹೆರಿಗೆಯಾಗಲಿ ಅಥವಾ ಚಿಕಿತ್ಸೆಗಳಿಗಾಗಲಿ ಈ ಭಾಗಕ್ಕೆ ಆ್ಯಂಬುಲೆನ್ಸ್ ವ್ಯವಸ್ಥೆ ತುಂಬಾ ಅನಿವಾರ್ಯತೆ ಇದೆ. ಈ ಗ್ರಾಮವು ರಾಷ್ಟ್ರ ಹೆದ್ದಾರಿಯನ್ನು ಹೊಂದಿದ್ದು, ಅಪಘಾತಗಳು ಸಂಭವಿಸಿದಾಗ ಯಾದಗಿರಿಯಿಂದ ಆ್ಯಂಬುಲೆನ್ಸ್ ಬರುವುದರಲ್ಲಿ ಜೀವ ಕಳೆದುಕೊಂಡಿವೆ. ಇನ್ನು ಮುಂದೆ ನಿರ್ಲಕ್ಷ್ಯ ಮಾಡದೆ ಯರಗೋಳ ಆಸ್ಪತ್ರೇಗೆ ಪ್ರತ್ಯೇಕ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲು ಆಗ್ರಹಿಸಿದರು.
ಯುವ ಘಟಕ ಜಿಲ್ಲಧ್ಯಕ್ಷರದ ವಿಶ್ವರಾಧ್ಯ ದಿಮ್ಮೆ, ಸಿದ್ದುನಾಯಕ ಹತ್ತಿಕುಣಿ ಸಲೀಂಪಾಶಾ, ಸುರೇಶ ಬೆಳಗುಂದಿ, ಯರಗೋಳ ಕಾರ್ಯಕರ್ತರಾದ ಸುಭಾಷ್ ಯರಗೋಳ, ಚನ್ನಬಸವ ಕನಕ, ಸಾಬಯ್ಯ, ಸೀನಪ್ಪ, ಮಲ್ಲು ಕೊಲ್ಕರ್, ಮಲ್ಲುನಾಯಕ, ಬಸ್ಸು ಸಂಕ್ರಡ್ಡಿ, ಶಾಣು ಕೋಳಿ, ರೆಡ್ಡಪ್ಪ ಬಡ್ಡಿ ಇತರರಿದ್ದರು.