ಸಾರಾಂಶ
ಹಿರೇಕೆರೂರು: ಬಣಜಿಗ ಸಮಾಜದ ವಿದ್ಯಾರ್ಥಿಗಳಿಗೆ, ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ೨ಎ, ೩ಎ., ಓಬಿಸಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಶಿರಸ್ತೇದಾರ ಎನ್.ಎಸ್. ಸೋನೆ ಅವರಿಗೆ ಮನವಿ ಸಲ್ಲಿಸಲಾಯಿತು.ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಲ್ಯಾಣಪ್ಪ (ಬಾಬಣ್ಣ) ಹಂಚಿನ ಮಾತನಾಡಿ, ನಮ್ಮ ಸಮಾಜದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ೨ಎ., ಹಾಗೂ ಉದ್ಯೋಗ ಮತ್ತು ಇತರೆ ಕೆಲಸಗಳಿಗಾಗಿ ೩ಎ., ಓಬಿಸಿ ಮೀಸಲಾತಿಯನ್ನು ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ನಮ್ಮನ್ನು ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಸೇರ್ಪಡೆ ಮಾಡಿದ್ದು, ಈಗಾಗಲೆ ನಿಮಗೆ ತಿಳಿದ ವಿಷಯವಾಗಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆ ಮತ್ತು ತಾಲೂಕುಗಳಲ್ಲಿ ೨ಎ., ೩ಎ.,ಮೀಸಲಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇನ್ನು ಮುಂದೆ ಈ ತಾಲೂಕಿನಲ್ಲಿ ಕೂಡಾ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ, ಯುವಕರಿಗೆ ಈ ಮೀಸಲಾತಿಯ ಪ್ರಮಾಣ ಪತ್ರ ನೀಡುವಂತೆ ಅವರು ಆಗ್ರಹಿಸಿದರು. ಮದ್ವೀರಶೈವ ಸಮಾಜದ ಅಧ್ಯಕ್ಷ ವೀರೂಪಾಕ್ಷಪ್ಪ ಹಂಪಾಳಿ, ಸಂಘದ ಪ್ರಧಾನ ಕಾರ್ಯದರ್ಶಿ ಉಮೇಶ ಹಳಕಟ್ಟಿ, ಗೌರವಾಧ್ಯಕ್ಷ ವೀರಪ್ಪ ಎಣ್ಣಿ, ಉಪಾಧ್ಯಕ್ಷ ಚಂದ್ರಪ್ಪ ಹಲವಾಲದ, ಸಹ ಕಾರ್ಯದರ್ಶಿ ಈರಣ್ಣ ಹಾದ್ರಿಹಳ್ಳಿ, ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ ಹಂಚಿ, ಗಿರೀಶ ಅಂಗರಗಟ್ಟಿ, ಮೃತ್ಯುಂಜಯ್ ಕೆಂಬಿ, ರೇಣುಕೇಶ ಮೊಗಲಿಶೆಟ್ಟರ, ನಾಗರಾಜ ನಲವಾಲದ, ಮುಖಂಡರಾದ ಸಿದ್ದಲಿಂಗೇಶ ಶೆಟ್ಟರ, ಇಂದುಧರ ಶೆಟ್ಟರ, ರುದ್ರೇಶ ಬೇತೂರ, ವಿಜಯಕುಮಾರ ಹಳಕಟ್ಟಿ, ಶುಭಾಕರ ಹಂಪಾಳಿ, ಪ್ರಕಾಶ ಹಂಪಾಳಿ, ವೀರೇಂದ್ರ ಶೆಟ್ಟರ, ರಾಜು ಆರಿಕಟ್ಟಿ, ಪ್ರವೀಣ ಹಂಪಾಳಿ, ಮಹಾಂತೇಶ ಕೋರಿ, ಪ್ರಕಾಶ ಮಾಲ್ವಿ, ಶಂಭುಲಿಂಗ ಮೊಗಲಿ, ಚಂದ್ರಣ್ಣ ಕಲ್ಯಾಣಿ, ಜಗದೀಶ ಕಲ್ಯಾಣಿ, ವಿನಾಯಕ ವಾಲಿ, ಮಂಜುನಾಥ ಕಂಪ್ಲಿ, ಚಂದ್ರಣ್ಣ ಹಾದ್ರಿಹಳ್ಳಿ, ಜಗದೀಶ ಶೆಟ್ಟರ, ರಾಕೇಶ ಶೆಟ್ಟರ, ನವೀನ್ ಕೋರಿ ಹಾಗೂ ಸಮಾಜದವರು ಇದ್ದರು.