ಸಾರಾಂಶ
ಹುಲೇಗುಡ್ಡ ಗ್ರಾಮದ ಸರ್ವೆ ನಂ.೨೪ರಲ್ಲಿರುವ ವಿಸ್ತೀರ್ಣ ೪.೦೬ ಎ.ಗು. ಸರ್ಕಾರಿ ಜಮೀನು ಇದೆ
ಯಲಬುರ್ಗಾ: ತಾಲೂಕಿನ ಹುಲೇಗುಡ್ಡ ಗ್ರಾಮದ ಸರ್ವೇ ನಂ.೨೪ರ ೪.೦೬ ಎ.ಗು ವಿಸ್ತೀರ್ಣದ ಸರ್ಕಾರಿ ಜಮೀನನ್ನು ತಲ್ಲೂರು ತಾಂಡಾ ರುದ್ರಭೂಮಿಗೆ ನೀಡಬಾರದೆಂದು ಹುಲೇಗುಡ್ಡ ಗ್ರಾಮಸ್ಥರು ಪಟ್ಟಣದ ತಹಸೀಲ್ದಾರ್ ಬಸವರಾಜ ತೆನ್ನಳ್ಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಹುಲೇಗುಡ್ಡ ಗ್ರಾಮದ ಸರ್ವೆ ನಂ.೨೪ರಲ್ಲಿರುವ ವಿಸ್ತೀರ್ಣ ೪.೦೬ ಎ.ಗು. ಸರ್ಕಾರಿ ಜಮೀನು ಇದೆ. ಅದರಲ್ಲಿ ಈಗಾಗಲೇ ಗೆದಗೇರಿ ಗ್ರಾಪಂ ಘನತಾಜ್ಯ ವಿಲೇವಾರಿಗೆ ಎರಡು ಎ.ಗು.ನೀಡಲಾಗಿದೆ. ಅಲ್ಲದೆ ಎಕರೆ ಜಮೀನನ್ನು ರುದ್ರಭೂಮಿಗೆ ಮೀಸಲಿರಿಸಲಾಗಿದೆ. ಅದಲ್ಲದೆ ಈಗ ತಲ್ಲೂರು ತಾಂಡಾಕ್ಕೆ ಒಂದು ಎಕರೆ ಜಮೀನನ್ನು ರುದ್ರಭೂಮಿಗೆ ನೀಡಲು ತಾಂಡಾದವರು ಮನವಿ ಸಲ್ಲಿಸಿದ್ದರಿಂದ ಹುಲೇಗುಡ್ಡ ಗ್ರಾಮದವರಿಗೆ ತೊಂದರೆಯಾಗುತ್ತದೆ. ಏಕೆಂದರೆ ಸರ್ಕಾರಿ ಜಮೀನು ೪.೦೬ ಎಕರೆ ಅಷ್ಟೇ ಉಳಿದಿದೆ. ಹುಲೇಗುಡ್ಡಕ್ಕೆ ಸರ್ಕಾರಿ ಪ್ರೌಢ ಶಾಲೆ ಮಂಜೂರಾಗಿದ್ದು, ಅದೇ ಜಮೀನನಲ್ಲಿ ಪ್ರೌಢಶಾಲೆ ಕಟ್ಟಡ ನಿರ್ಮಿಸಬೇಕೆಂದು ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ ಆದ್ದರಿಂದ ಈ ಜಮೀನನ್ನು ಪಕ್ಕದ ಹಳ್ಳಿಗಳಿಗೆ ನೀಡಬಾರದೆಂದು ಗ್ರಾಮಸ್ಥರಾದ ಬಾಳಪ್ಪ ಬಂಡ್ಲಿ, ವೆಂಕಪ್ಪಜುಟ್ಲರ್, ಮಂಜುನಾಥ ಕಲ್ಲೂರು, ಭೀಮಣ್ಣ ಮುರಡಿ, ಮುದಕಪ್ಪಕಂತಿ, ಶರಣಗೌಡ ಮಾಲಿಗೌಡ್ರ, ಹನುಮಪ್ಪ ಪೂಜಾರ, ದುರಗನಗೌಡ ಪಾಟೀಲ್, ಹಾಲಪ್ಪ ಹಾಲಳ್ಳಿ, ರಮೇಶ ಛತ್ರದ, ಕೆ.ಎಸ್. ಮಾಲಿಗೌಡ್ರ ಸೇರಿದಂತೆ ಮತ್ತಿತರರು ಮನವಿ ಮಾಡಿದರು.