ಸಾರಾಂಶ
ಕನ್ನಡಪ್ರಭವಾರ್ತೆ ಪಾವಗಡ
ಪಾವಗಡ ಸೇರಿದಂತೆ ಚಿತ್ರದುರ್ಗ ಜಿಲ್ಲೆ ಅತ್ಯಂತ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದು ಎರಡೇ ಸ್ಥಾನದಲ್ಲಿದೆ. ಇದನ್ನು ಅಳಿಸಲು ಮಹತ್ತರ ತೀರ್ಮಾನ ಕೈಗೊಂಡಿರುವುದಾಗಿ ಚಿತ್ರದುರ್ಗ ಲೋಕಸಭಾ ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.ತಾಲೂಕು ಜೆಡಿಎಸ್-ಬಿಜೆಪಿ ಪಕ್ಷದಿಂದ ಸೋಮವಾರ ಪಟ್ಟಣದ ಎಸ್‌ಎಸ್‌ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮತದಾರರಿಗೆ ಕೃತಜ್ಞತೆ ಸಮರ್ಪಣೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಈ ಭಾಗದ ನೀರಾವರಿ ಪ್ರಗತಿ ಹಿನ್ನಲೆಯಲ್ಲಿ ಭದ್ರಾಮೇಲ್ದಂಡೆ ಯೋಜನೆ ಅನುಷ್ಠಾನ ಕುರಿತು ಈಗಾಗಲೇ ಕೇಂದ್ರ ಸಚಿವರ ಜತೆ ಚರ್ಚಿಸಿದ್ದೇನೆ. ನೀರಾವರಿ ಸಚಿವರಾಗಿದ್ದ ವೇಳೆ ಭದ್ರಾ ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವಂತೆ ನಾನೇ ಕೇಂದ್ರಕ್ಕೆ ಒತ್ತಡ ಹೇರಿದ್ದೆ. ಈ ಯೋಜನೆ ಪ್ರಾರಂಭಕ್ಕೆ 2008ರಲ್ಲಿ 50ಕೋಟಿ ರು. ಹಣ ಎರಡು ಕಂತುಗಳಲ್ಲಿ ಬಿಡುಗಡೆಗೊಳಿಸಿದೆ. ಎರಡು ವರ್ಷ ಯೋಜನೆ ಪ್ರಗತಿ ಕಂಡಿದ್ದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಸರ್ಕಾರದಲ್ಲಿ ಹಣದ ಕೊರತೆಯಿಂದ ಭದ್ರಾಯೋಜನೆ ನೆನೆಗುದ್ದಿಗೆ ಬಿದ್ದಿದೆ. ಯೋಜನೆ ಪ್ರಗತಿಗೆ 5300ಕೋಟಿ ರು. ಹಣ ಬಿಡುಗಡೆ ಮತ್ತು ಮಹದಾಯಿ ಯೋಜನೆ ಕಾರ್ಯರಂಭಕ್ಕೆ ಬೊಮ್ಮಾಯಿ ಜತೆ ಕೇಂದ್ರ ಸಚಿವೆ ನಿರ್ಮಾಲ ಸೀತಾರಾಮ್‌ರಿಗೆ ಮನವಿ ಸಲ್ಲಿಸಲಾಗಿದೆ. ಭದ್ರಾ ಯೋಜನೆ ಪ್ರಗತಿ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಈ ಬಗ್ಗೆ ರಾಜ್ಯದ ಸಿಎಂಗೆ ಮನವಿ ಮಾಡಲಾಗಿದೆ ಎಂದರು. ನೀರಾವರಿ ರೈಲ್ವೆ ಹಾಗೂ ರಸ್ತೆ ಪ್ರಗತಿಗೆ ವಿಶೇಷ ಆದ್ಯತೆ ನೀಡಿದ್ದು ನನ್ನ ಅವಧಿಯೊಳಗೆ ಈ ಕೆಲಸ ಪೂರ್ಣಗೊಳಿಸಲು ಬದ್ದರಾಗಿರುವುದಾಗಿ ತಿಳಿಸಿದರು .ಜಿಲ್ಲೆಯ ಪ್ರಗತಿಗೆ ಹೆಚ್ಚು ಒತ್ತು ನೀಡಿದ್ದು ವಲಸೆ ತಪ್ಪಿಸಲು ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ತೆರೆಯಲು ಈಗಾಗಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಮನವಿ ಸಲ್ಲಿಸಿದ್ದೇನೆ. ಇದಕ್ಕೆ ಭೂಮಿ ಹಾಗೂ ಟ್ರಾನ್ಸ್‌ಪೊರ್ಟ್‌ಗೆ ರಸ್ತೆ ಹಾಗೂ ರೈಲ್ವೆ ಸಂಪರ್ಕದ ಅಗತ್ಯವಿದೆ ಎಂದರು. ಎಚ್ಡಿಕೆ ಹಾಗೂ ನಾನು ಸೇರಿ ಕೈಗಾರಿಕೆ ಸ್ಥಾಪನೆಗೆ ಬದ್ದರಾಗಿದ್ದೇವೆ. ಇಲ್ಲಿನ 15ಸಾವಿರ ಎಕರೆ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ವಿಸ್ತಾರವಾಗಿದ್ದು ಸ್ಥಳೀಯರಿಗೆ ಉದ್ಯೋಗ ಸೇರಿದಂತೆ ಜಮೀನುಕೊಟ್ಟ ರೈತರಿಗೆ ವಂಚನೆಯಾಗಿದೆ. ಶೇಷನ್ ಮುಗಿದ ಬಳಿಕ ಶಾಶ್ವತ ಯೋಜನೆಯ ಅಭಿವೃದ್ದಿ ಬಗ್ಗೆ ಚರ್ಚಿಸಲಿದ್ದೇವೆ. ಈ ಭಾಗದ ಸಮಸ್ಯೆ ಹಾಗೂ ಬೇಡಿಕೆ ನಿವಾರಣೆಗೆ ವಿಶೇಷ ಆಸಕ್ತಿವಹಿಸಲಾಗಿದೆ ಎಂದರು. ನನ್ನ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ಮೂಲಕ ಈ ಭಾಗದ ಎಂಟು ವಿಧಾನ ಕ್ಷೇತ್ರದಲ್ಲಿನ ಒಂದು ಲಕ್ಷ ನಲವತ್ತು ಸಾವಿರ ಹೆಕ್ಟೇರು ಪ್ರದೇಶವನ್ನು ಹಸಿರೀಕರಣಗೊಳಿಸಿ ಪಶು ಪಕ್ಷ ಸಕಲ ಜೀವ ರಾಶಿಗಳ ಆಹಾರ ಮತ್ತು ಕುಡಿವ ನೀರಿಗೆ ಅನುಕೂಲ ಕಲ್ಪಿಸುವ ಭರವಸೆ ವ್ಯಕ್ತಪಡಿಸಿದರು.ಮಾಜಿ ಶಾಸಕರಾದ ಕೆ,ಎಂ.ತಿಮ್ಮರಾಯಪ್ಪ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಆದೇಶದ ಹಿನ್ನಲೆಯಲ್ಲಿ ಈ ಭಾಗದ ಜೆಡಿಎಸ್ ಹಾಗೂ ಬಿಜೆಪಿಯ ಚುನಾವಣೆಯ ಉಸ್ತುವಾರಿವಹಿಸಿದ್ದು, ಈ ಹಿಂದೆ ಲೋಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಾವು ಬೆಂಬಲಿಸಲಿಲ್ಲ. ಆದರೆ ಈ ಬಾರಿ ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೆಲ್ಲ ಸೇರಿ ಪಕ್ಷದ ಸಂಘನೆಗೆ ಒತ್ತು ನೀಡಿದ್ದೇವೆ. ಎರಡು ಪಕ್ಷದ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಿದ ಪರಿಣಾಮ ತಾಲೂಕಿನಲ್ಲಿ 13ಸಾವಿರ ಅಂತರದ ಮತಗಳಿಂದ ತಾವು ಗೆಲವು ಸಾಧಿಸಲು ಸಾಧ್ಯವಾಗಿದೆ. ತಾಲೂಕಿನ ಪರವಾಗಿ ಕಾರಜೋಳರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ನೆನೆಗುದ್ದಿಗೆ ಬಿದ್ದ 7ಸಾವಿರ ಮನೆಮಂಜೂರಾತಿ ಸೇರಿದಂತೆ ತಾಲೂಕು ಪ್ರಗತಿಗೆ ವಿಶೇಷ ಆದ್ಯತೆ ಹಾಗೂ ನಮ್ಮ ಜನಪರ ಹೋರಾಟಕ್ಕೆ ತಮ್ಮ ಸಹಕಾರ ನೀಡುವಂತೆ ಮನವಿ ಮಾಡಿದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜಿನಪ್ಪೆ, ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ಎಸ್.ಶಿವಪ್ರಸಾದ್ ಮಾತನಾಡಿದರು.ಇದೇ ವೇಳೆ ಪೂಜಾರಪ್ಪ ನೇತೃತ್ವದ ರೈತ ಸಂಘ ಹಾಗೂ ದಲಿತಪರ ಸಂಘಟನೆಗಳಿಂದ ಕಾರಜೋಳರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಮುಖಂಡರಾದ ಎನ್.ತಿಮ್ಮಾರೆಡ್ಡಿ, ಎಸ್.ವಿ.ಗೋವಿಂದಪ್ಪ, ಬಲರಾಮರೆಡ್ಡಿ, ತಾ. ಜೆಡಿಎಸ್ ಅಧ್ಯಕ್ಷ ಎನ್.ಎ.ಈರಣ್ಣ, ಸೊಗಡು ವೆಂಕಟೇಶ್, ಬಿಜೆಪಿ ಅಧ್ಯಕ್ಷ ರಂಗಪ್ಪ, ಮುಖಂಡರಾದ ಗೋವಿಂದಬಾಬು, ಚನ್ನಮಲ್ಲಯ್ಯ, ಕೆ.ಆರ್.ಸುರೇಶ್ ಸ್ವಾಮಿ, ಡಾ.ಜಿ.ವೆಂಕಟರಾಮಯ್ಯ, ಕೋಟಗುಡ್ಡ ಆಂಜನೇಯಲು, ಅಕ್ಕಲಪ್ಪನಾಯ್ಡ್, ಕೂತ್ತೂರು ಕೆ.ಆರ್.ನಾಗೇಶ್ ಮಾಜಿ ಜಿಪಂನ ನರಸಿಂಹಪ್ಪ, ಎಂ.ಕೆ.ನಾರಾಯಣಪ್ಪ, ರವಿಶಂಕರನಾಯ್ಕ್, ಕೊತ್ತೂರು ಹನುಮಂತರಾಯಪ್ಪ, ಶಿವಕುಮಾರ್ ಸಾಕೇಲ್, ಅಂಜಿನನಾಯಕ, ರಾಮಾಂಜಿನರೆಡ್ಡಿ, ಗಡ್ಡಂ ತಿಮ್ಮರಾಜು, ಮನುಮಹೇಶ್, ವೆಟನರಿ ಉಗ್ರಪ್ಪ, ಸೊರನಹಳ್ಳಿ ಶ್ರೀನಿವಾಸ್, ಗಂಗಾಧರ್ ನಾಯ್ಡ್, ರವೀಂದ್ರರೆಡ್ಡಿ, ಮಂಜುನಾಥಚೌದರಿ, ಜಿ.ಎ.ವೆಂಕಟೇಶ್, ರಾಜ್‌ಗೋಪಾಲ್, ಅಂಬಿಕಾರಮೇಶ್ ,ಶಕುಂತಮ್ಮ, ಸಿದ್ದಗಂಗಮ್ಮ, ಕನ್ನಮೇಡಿ ಲೋಕೇಶ್, ಕಮಲ್ ಬಾಬು, ತಿಪ್ಪೇಈರಣ್ಣ, ಸತ್ಯನಾರಾಯಣಪ್ಪ, ಸಿಂಗರೆಡ್ಡಿಹಳ್ಳಿ ಪುರುತೋತಮ್, ವಿಜಯಲಕ್ಷ್ಮಿ ಶಾರದಬಾಯಿ ಇತರೆ ಆನೇಕ ಮಂದಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.