ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯುವ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸಲು ಅನುಕೂಲ ಆಗುವಂತೆ ಕೋರ್ಸ್ ಮುಗಿಯುವವರೆಗೆ ಪ್ರತಿ ವರ್ಷ ₹1 ಲಕ್ಷದಂತೆ ಶೇ.2ರ ಬಡ್ಡಿ ದರದಲ್ಲಿ ನೀಡುವ ಅರಿವು ಎಂಬ ಹೊಸ ಯೋಜನೆ ರೂಪಿಸಲಾಗಿದೆ ಎಂದು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆಸಗೋಡು ಜಯಸಿಂಹ ಹೇಳಿದ್ದಾರೆ.
- ಶಂಕರ ಸಮುದಾಯ ಭವನದಲ್ಲಿ ವಿಪ್ರೋತ್ತಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯುವ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸಲು ಅನುಕೂಲ ಆಗುವಂತೆ ಕೋರ್ಸ್ ಮುಗಿಯುವವರೆಗೆ ಪ್ರತಿ ವರ್ಷ ₹1 ಲಕ್ಷದಂತೆ ಶೇ.2ರ ಬಡ್ಡಿ ದರದಲ್ಲಿ ನೀಡುವ ಅರಿವು ಎಂಬ ಹೊಸ ಯೋಜನೆ ರೂಪಿಸಲಾಗಿದೆ ಎಂದು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆಸಗೋಡು ಜಯಸಿಂಹ ಹೇಳಿದರು.ಇಲ್ಲಿನ ಶಂಕರ ಸಮುದಾಯ ಭವನದಲ್ಲಿ ಇತ್ತೀಚೆಗೆ ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ಆಯೋಜಿಸಿದ ವಿಪ್ರೋತ್ತಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಬ್ರಾಹ್ಮಣ ಸಮಾಜದವರಿಗೆ ರೂಪಿಸಿರುವ ಅಭಿವೃದ್ಧಿ ಯೋಜನೆಗಳ ಪ್ರಯೋಜನ ತಲುಪಿಸಲು ₹100 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೋರುವುದಾಗಿ ತಿಳಿಸಿದರು.
ಮಂಡಳಿಯ ನೇರಸಾಲ ಯೋಜನೆಗೆ ಹೊಸದಾಗಿ 1 ಸಾವಿರ ಅರ್ಜಿಗಳು ಬಂದಿವೆ. ಸಮುದಾಯದವರು ಗೃಹ ಕೈಗಾರಿಕೆಗಳನ್ನು ನಡೆಸಲು ಹಾಗೂ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ₹2 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ಜಿಲ್ಲೆಯಲ್ಲ 97 ಫಲಾನುಭವಿಗಳಿಗೆ ₹1.94 ಕೋಟಿ ನೀಡಲಾಗಿದೆ. ಲಾಭ ಪಡೆದವರು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದ್ದಾರೆ ಎಂದರು.ಜ್ಯೋತಿಷಿ ಜಯತೀರ್ಥ ಆಚಾರ್ ಒಡೆಯರ್, ಡಾ.ವೆಂಕಟಗಿರೀಶ ಆಚಾರ್, ಶಂಕರ ನಾರಾಯಣ ಶಾಸ್ತ್ರಿ, ಜಿ.ಎನ್.ರಂಗನಾಥ, ಜಿ.ಎನ್.ಗಂಗಾಧರ, ನರಹರಿ, ಬಾಲೆಹೊಸೂರು, ವಿ.ವಿ.ಸುಬ್ರಹ್ಮಣ್ಯ ಎಸ್. ಭಟ್ಟ, ಚಿದಂಬರ ಶಿವಪೂಜಿ, ಡಿ.ಚಿದಂಬರ ಮೂರ್ತಿ, ಕೆ.ಎಸ್.ಪ್ರದೀಪ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ, ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಡಾ.ಶಶಿಕಾಂತ್, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ನಾಗಭೂಷಣ, ಬಿಳಿಚೋಡು ಶಾಮರಾವ್, ಶಂಕರ ನಾರಾಯಣ ಶಾಸ್ತ್ರಿ, ಡಾ. ಸಿ.ಕೆ.ಆನಂದ ತೀರ್ಥಾಚಾರ್, ಶೇಷಾಚಲ, ಸಿ.ವಿ.ಗಿರೀಶ ನಾಡಿಗ್ ಹಾಗೂ ಸಮಾಜ ಬಾಂಧವರು ಇದ್ದರು.- - -
-21ಕೆಡಿವಿಜಿ38: ಕಾರ್ಯಕ್ರಮದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆಸಗೋಡು ಜಯಸಿಂಹ ಅವರನ್ನು ಸನ್ಮಾನಿಸಲಾಯಿತು.