ಹೈಕೋರ್ಟ್ ಸಂಚಾರಿ ಪೀಠವನ್ನು ದಾವಣಗೆರೆ ತಾ. ಆನಗೋಡು ಸಮೀಪದ ಉಳುಪಿನಕಟ್ಟೆ ಬಳಿ ಆರಂಭಿಸಬೇಕು. ಅಲ್ಲಿ ಸಾಕಷ್ಟು ಜಾಗವೂ ಸಿಗುತ್ತದೆ. ದಾವಣಗೆರೆ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಕಾಮಗಾರಿ ಮುಗಿಯುತ್ತಿರುವುದು ಸಾರ್ವಜನಿಕರು, ವಕೀಲ ಬಾಂಧವರಲ್ಲಿ ಸಂತೋಷ ತಂದಿದೆ ಎಂದು ಹಿರಿಯ ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನಪ್ಪ ತಿಳಿಸಿದ್ದಾರೆ.
ದಾವಣಗೆರೆ: ಹೈಕೋರ್ಟ್ ಸಂಚಾರಿ ಪೀಠವನ್ನು ದಾವಣಗೆರೆ ತಾ. ಆನಗೋಡು ಸಮೀಪದ ಉಳುಪಿನಕಟ್ಟೆ ಬಳಿ ಆರಂಭಿಸಬೇಕು. ಅಲ್ಲಿ ಸಾಕಷ್ಟು ಜಾಗವೂ ಸಿಗುತ್ತದೆ. ದಾವಣಗೆರೆ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಕಾಮಗಾರಿ ಮುಗಿಯುತ್ತಿರುವುದು ಸಾರ್ವಜನಿಕರು, ವಕೀಲ ಬಾಂಧವರಲ್ಲಿ ಸಂತೋಷ ತಂದಿದೆ ಎಂದು ಹಿರಿಯ ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನಪ್ಪ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ನ್ಯಾಯಾಲಯದ ಹಳೆಯ ಕಟ್ಟಡವು ಶಿಥಿಲಾವಸ್ಥೆಗೆ ಬಂದಿದೆ. ಹಾಗಾಗಿ ಹೊಸ ಕಟ್ಟಡಕ್ಕೆ ಹಿಂದೆ ಸಂಘ ಒಪ್ಪಿಗೆ ಕೊಟ್ಟಿತ್ತು. ಈಗ ಹೊಸ ಕಟ್ಟಡದಲ್ಲಿ ಜಿಲ್ಲಾ ನ್ಯಾಯಾಲಯಗಳ ಸ್ಥಳಾಂತರ ಬೇಡವೆಂದರೆ ಹೇಗೆ? ದಾವಣಗೆರೆ ಜಿಲ್ಲಾ ಕೇಂದ್ರ ನಿರಂತರ ಬೆಳೆಯುತ್ತಿದೆ. ಸಾರ್ವಜನಿಕರು, ಕಕ್ಷಿದಾರರು, ವಕೀಲರ ಸಂಖ್ಯೆಯೂ ಹೆಚ್ಚುತ್ತಿದೆ. ಹಾಗಾಗಿ ಎನ್ಎಚ್-48 ಪಕ್ಕದ ಕಟ್ಟಡ ಸೂಕ್ತವಾಗಿದೆ. ರಾಜ್ಯ ಉಚ್ಚ ನ್ಯಾಯಾಲಯದ ಪೀಠವನ್ನು ದಾವಣಗೆರೆ ತಾ. ಆನಗೋಡು ಸಮೀಪದ ಉಳುಪನಕಟ್ಟೆಯ ಬಳಿ ಪ್ರಾರಂಭಿಸಬೇಕು. ಅಲ್ಲಿ ಸಾಕಷ್ಟು ಜಾಗ ದೊರೆಯುತ್ತದೆ ಎಂದಿದ್ದಾರೆ.ವಕೀಲರ ಸಂಘ ಪರಿಗಣಿಸಬೇಡಿ:
ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದಲ್ಲಿ ನಿರ್ಮಾಣ ಆಗುತ್ತಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಸರ್ಕಾರ, ನ್ಯಾಯಾಲಯ ಜಿಲ್ಲಾ ವಕೀಲರ ಸಂಘವನ್ನು ಪರಿಗಣಿಸಬಾರದು. ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಭೂಮಿಪೂಜೆಯಲ್ಲಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳೇ ಭಾಗವಹಿಸಿದ್ದಾರೆ. ಈಗ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಸ್ಥಳಾಂತರ ಬೇಡ ಎನ್ನುತ್ತಿರುವುದು ಸರಿಯಲ್ಲ. ಈಗಿರುವ ಜಿಲ್ಲಾ ವಕೀಲರ ಸಂಘವೇ ಕಾನೂನು ಬಾಹಿರವಾಗಿದೆ. ಇಂತಹ ಸಂಘ ಪರಿಗಣಿಸದಂತೆ ದಾವಣಗೆರೆ 4ನೇ ಹೆಚ್ಚುವರಿ (ಕಿರಿಯ ವಿಭಾಗ) ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ. ಹಾಗಾಗಿ, ಜಿಲ್ಲಾ ಕೋರ್ಟ್ ಸ್ಥಳಾಂತರ ಬೇಡ ಎನ್ನುವುದೂ ಪರಿಗಣನೆಗೇ ಬರುವುದಿಲ್ಲ. ಹಾಗಾಗಿ ನ್ಯಾಯಾಲಯದ ಉದ್ಘಾಟನೆಗೆ ಜಿಲ್ಲಾ ವಕೀಲರ ಸಂಘವನ್ನು ಪರಿಗಣಿಸಬಾರದು ಎಂದು ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನಪ್ಪ ಮನವಿ ಮಾಡಿದ್ದಾರೆ.- - -
-7ಕೆಡಿವಿಜಿ3: ಗುಮ್ಮನೂರು ಕೆ.ಎಂ.ಮಲ್ಲಿಕಾರ್ಜುನಪ್ಪ