ಪುರಸಭೆ ಸದಸ್ಯರನ್ನು ಹುಡುಕಿ ಕೊಡುವಂತೆ ಮನವಿ

| Published : Sep 25 2024, 12:56 AM IST

ಪುರಸಭೆ ಸದಸ್ಯರನ್ನು ಹುಡುಕಿ ಕೊಡುವಂತೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ, ಕಳೆದ ಹಲವು ದಿನಗಳಿಂದ ಪುರಸಭಾ ಸದಸ್ಯರು ಕಾಣೆಯಾಗಿದ್ದಾರೆ

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ಆಡಳಿತ ಮಂಡಳಿಯ ಸದಸ್ಯರು ಆಡಳಿತ ನಡೆಸುವಲ್ಲಿ ವಿಫಲರಾಗಿದ್ದು, ಪಟ್ಟಣದ ಜನತೆಯು ಕಳೆದ ಎರಡು ತಿಂಗಳಿಂದ ಕುಡಿಯುವ ನೀರು ಇಲ್ಲದೆ ಪರದಾಡುತ್ತಿದ್ದಾರೆ ಆದ್ದರಿಂದ ಪುರಸಭೆಯ ಆಡಳಿತ ಮಂಡಳಿಯ‌ ಸದಸ್ಯರನ್ನು ಹುಡುಕಿಕೊಡುವಂತೆ ಆಗ್ರಹಿಸಿ ಕರವೇ ಅಧ್ಯಕ್ಷ ಮಹೇಶ ಕಲಘಟಗಿ ನೇತೃತ್ವದಲ್ಲಿ ಮಂಗಳವಾರ ಸ್ಥಳೀಯ ಪೊಲೀಸ್ ಠಾಣೆ ಸಿಪಿಐ ನಾಗರಾಜ ಮಾಡಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಜನರು ಕಳೆದ ಎರಡು ತಿಂಗಳಿಂದ ಹಾಹಾಕಾರ ನಡೆಸುತ್ತಿದ್ದಾರೆ. ಇಷ್ಟಾದರೂ ಆಡಳಿತ ಮಂಡಳಿಯ ಸದಸ್ಯರು ಮೌನಕ್ಕೆ ಶರಣಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ, ಕಳೆದ ಹಲವು ದಿನಗಳಿಂದ ಪುರಸಭಾ ಸದಸ್ಯರು ಕಾಣೆಯಾಗಿದ್ದಾರೆ. ಆದ್ದರಿಂದ ಅವರನ್ನು 3 ದಿನಗಳಲ್ಲಿ ಹುಡುಕಿಕೊಂಡುವಂತೆ ಮನವಿ ಮಾಡಿದೆ ಅವರು ಸಿಗದೇ ಹೋದಲ್ಲಿ ಆಡಳಿತ ಮಂಡಳಿಯು ಸದಸ್ಯರು ಮೃತಪಟ್ಟಿರುವುದಾಗಿ ತಿಳಿದು ಅವರು ಶೃದ್ಧಾ ಕಾರ್ಯ ಪುರಸಭೆ ಎದುರು ಮಾಡಲಾಗುವುದು ಎಂದು ಮನವಿ‌ಯಲ್ಲಿ ತಿಳಿಸಿದೆ.

ಈ ವೇಳೆ ಶ್ರೇಯಾಂಕ ಹಿರೇಮಠ, ಪ್ರವೀಣ ದಶಮನಿ, ಭರಮಣ್ಣ ಗೌಳಿ, ಅಮರೀಶ ಗಾಂಜಿ, ಗಿರೀಶ ಗೌಳಿ, ಅರ್ಜುನ ಭಾಂಡಗೆ, ಮಹೇಶ ಕರಮಣ್ಣವರ, ಚಂದ್ರು ಪಾಣಿಗಟ್ಟಿ, ಗೋವಿಂದ ಗೋಸಾವಿ, ಕುಮಾರ ಕನವಳ್ಳಿ, ಕುಮಾರ ಶೆಟ್ಟರ್, ಸುಷ್ಮಾ ಸರ್ವದೆ, ಲಲಿತಾ ಅರ್ಕಸಾಲಿ, ಸೌಮ್ಯ ಹಗ್ಗರದ, ತೇಜಸ್ವಿನಿ ಗುರುಪ್ಪಗೌಡರ ಸೇರಿದಂತೆ ಅನೇಕರು ಇದ್ದರು.