ಸರ್ಕಾರಿ ನೌಕರರ ಬೇಡಿಕೆ ಈಡೇರಿಕೆಗೆ ಮನವಿ

| Published : Jan 22 2024, 02:18 AM IST

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಶಾಸಕ ಯು.ಬಿ. ಬಣಕಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಶಾಸಕ ಯು.ಬಿ. ಬಣಕಾರ ಅವರಿಗೆ ಮನವಿ ಸಲ್ಲಿಸಲಾಯಿತು.

ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಡಾ. ಎಸ್.ಪಿ. ಗೌಡರ ಮಾತನಾಡಿ, ೭ನೇ ವೇತನ ಆಯೋಗದಿಂದ ಶೀಘ್ರ ವರದಿ ತರಿಸಿಕೊಂಡು ರಾಜ್ಯ ಸರ್ಕಾರವು ನೌಕರರ ವೇತನ, ಭತ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಹೆಚ್ಚಿಸಿ ಆದೇಶ ಹೊರಡಿಸಬೇಕು. ಎನ್‌ಪಿಎಸ್ ಯೋಜನೆಯಿಂದ ಜೀವನ ನಿರ್ವಹಣೆ ಹಾಗೂ ಸದ್ಯಕಾಲದ ಬದುಕು ಅತ್ಯಂತ ಕಷ್ಟಕರವಾಗಲಿದೆ. ಹಾಗಾಗಿ ಹಳೆ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸಬೇಕು. ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯ ಅನುಷ್ಠಾನ ಗೊಳಿಸುವುದರೊಂದಿಗೆ ಈ ಪ್ರಮುಖ ಮೂರು ಬೇಡಿಕೆಗಳಿಗೆ ಕೂಡಲೇ ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆಯಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಶಾಸಕ ಯು.ಬಿ. ಬಣಕಾರ, ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದರು.

ಈ ಸಂದರ್ಭದಲ್ಲಿ ತಾಲೂಕ ನೌಕರರ ಸಂಘದ ಕಾರ್ಯದರ್ಶಿ ಕುಮಾರ ಮಡಿವಾಳ, ರಾಜ್ಯ ಪರಿಷತ್ ಸದಸ್ಯ ನಾಗಪ್ಪ ಹೆಗ್ಗೆರಿ, ಹಿರಿಯ ಉಪಾಧ್ಯಕ್ಷ ಕುಮಾರ ನಾಯ್ಕರ್, ನಾಗರಾಜ ಕಟ್ಟಿಮನಿ, ಮಹೇಶ ಮರಿಗೌಡರ, ಶಿವಕುಮಾರ ಬಂಗೇರ, ಸಿ.ಎಸ್. ಚಳಗೇರಿ, ದೀಪಕ್ ಕಾಲ್ಪಾಲ್, ವೃಂದ ಸಂಘಗಳ ಅಧ್ಯಕ್ಷ ಕುಮಾರ ಪುಟ್ಟಪ್ಪಗೌಡರ, ಕಾರ್ಯದರ್ಶಿ ರಮೇಶ್ ಪೂಜಾರ ರಟ್ಟಿಹಳ್ಳಿಯ ಎ.ಆರ್. ಬಡಗೌಡರ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಸಿ.ಎನ್. ಬಾಲಣ್ಣನವರ, ಪ್ರೌಢಶಾಲೆಯ ಸಹ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ ಪುರದ, ರಾಜು ತಳವಾರ, ಎಸ್.ಎಂ. ಬಣಕಾರ, ಬಸವರಾಜ ಬೂದನೂರ ಸುಧಾ ಟಿ.ಆರ್., ಸುರೇಶ್ ಹಾವನೂರ, ನಂಜುಂಡಪ್ಪ ಸೇರಿದಂತೆ ಕಂದಾಯ, ಆರೋಗ್ಯ, ಲೋಕೋಪಯೋಗಿ ಇಲಾಖೆಯ ವೃಂದ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಎಲ್ಲಾ ಪದಾಧಿಕಾರಿಗಳು ಇದ್ದರು.