ಎಂಜಿನಿಯರ್ ಭವನ ನಿರ್ಮಾಣಕ್ಕೆ ಜಾಗ ನೀಡಲು ಮನವಿ

| Published : Sep 11 2024, 01:09 AM IST

ಸಾರಾಂಶ

ಬಹಳ ದಿನಗಳಿಂದ ಬೇಡಿಕೆ ಬೇಡಿಕೆಯಾಗಿಯೇ ಉಳಿದಿರುವ ಎಂಜಿನಿಯರ್ಗಳ ಭವನದ ಜಾಗ ಆದಷ್ಟು ಬೇಗ ಎಲ್ಲಿಯಾದರೂ ಹುಡುಕಿ ನೀಡುವುದಾಗಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಬಹಳ ದಿನಗಳಿಂದ ಬೇಡಿಕೆ ಬೇಡಿಕೆಯಾಗಿಯೇ ಉಳಿದಿರುವ ಎಂಜಿನಿಯರ್‌ಗಳ ಭವನದ ಜಾಗ ಆದಷ್ಟು ಬೇಗ ಎಲ್ಲಿಯಾದರೂ ಹುಡುಕಿ ನೀಡುವುದಾಗಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು.

ಪುರಸಭೆಯಲ್ಲಿ ನಡೆದ ಎಂಜಿನಿಯರ್‌ಗಳ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಎಲ್ಲೆಲ್ಲಿ ಸರ್ಕಾರಿ ಜಾಗ ಇದೆ ಎಂಬುವುದನ್ನು ಖಚಿತ ಪಡಿಸಿಕೊಂಡು ಸರ್ಕಾರ ನಿಯಮಾವಳಿಗಳ ಪ್ರಕಾರ ಸೂಕ್ತ ಕ್ರಮ ವಹಿಸಿ ಆದಷ್ಟು ಬೇಗನೇ ಜಾಗೆಯನ್ನು ನೀಡುಲು ನನ್ನ ಪ್ರಾಮಾಣಿಕ ಪ್ರಯತ್ನಮಾಡುವುದಾಗಿ ಭರವಸೆ ನೀಡಿದರು.

ಈ ವೇಳೆ ಎಂಜಿನಿಯರ್‌ ಹಣಮಂತ ರಾವಳ ಮಾತನಾಡಿದರು.

ನಂತರ ಮಾತನಾಡಿದ ಸಿವಿಲ್ ಎಂಜಿನಿಯರ್ ಸಂಘದ ಸದಸ್ಯರಾದ ಅಸ್ಲಂ ಯಕ್ಸಂಬಿ ಸುಂದರ ನಗರ ನಿರ್ಮಾಣಕ್ಕಾಗಿ ಹಗಲಿರುಳು ಎನ್ನದೇ ನಿರಂತರ ಸೇವೆ ಸಲ್ಲಿಸುತ್ತಿರುವ ಸಿವಿಲ್ ಎಂಜಿನಿಯರಗಳು ತಮ್ಮ ನಿಸ್ವಾರ್ಥ ಸೇವೆಯಿಂದ ಸುಂದರ ಸಮಾಜ ಕಟ್ಟುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆ ಮಾಡುತ್ತಿದ್ದಾರೆ. ಆದರೆ ಅವರಿಗೊಂದು ಅವರದೇ ಆದ ಭವನ ಇಲ್ಲದಿರುವುದು ವಿಪರ್ಯಾಸದ ಸಂಗತಿ ಎಂದು ಹೇಳಿದರು.

ಪುರಸಭೆ ಅಧ್ಯಕ್ಷರಿಗೆ ನಗರದ ಎಂಜಿನಿಯರ್ ಅಸೋಶಿಯೇಷನದ ಭವನ ನಿರ್ಮಾಣಕ್ಕಾಗಿ ಪುರಸಭೆ ವತಿಯಿಂದ ಉಚಿತ ನಿವೇಶನ ನೀಡಬೇಕೆಂದು ಸಂಘದ ಸದಸ್ಯರು ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಪುರಸಭೆ ಉಪಾಧ್ಯಕ್ಷರಾದ ಶೀಲಾ ಬಾವಿಕಟ್ಟಿ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಎಂಜಿನಿಯರ್‌ಗಳಾದ ಬಿ ಜಿ ಗಾಣಿಗೇರ, ಎಂ ಎಸ್ ಮುಗಳಖೋಡ, ಸುನೀಲ್ ಕಡಪಟ್ಟಿ, ಪ್ರವೀಣ ಪಾವಟೆ, ಜೆ ಜೆ ಜಕ್ಕಣ್ಣವರ, ಶಿವಾನಂದ ಕನ್ನಾಳ, ರಾಜಶೇಖರ್ ಮುಗಳಖೊಡ, ಶಂಭುಲಿಂಗ ನಕಾತಿ,ಪ್ರಶಾಂತ ಅಂಗಡಿ, ವಿಕಾಸ ಕೆರೂರ, ಮಹಾಂತೇಶ ಬಂಡಿವಡ್ಡರ, ಪ್ರವೀಣ ಮುಗಳಖೊಡ, ಪವನ ಪತ್ತಾರ, ರೋಹಿತ್ ಅಂಬಿ, ವಸಂತಗೌಡ ಪಾಟೀಲ, ಮಹಾಂತೇಶ ನಾಗರಾಳ, ಸಚಿನ್ ಮುಗಳಖೋಡ, ಶಶಿ ಬುರುಡ, ಮಹಾಂತೇಶ ಬಿರಾದಾರ, ಲಕ್ಷ್ಮಣ ಮಲವಾಡಿ, ಸಂದೀಪ ಜಮಖಂಡಿ, ಕಿರಣ ಬುದ್ನಿ, ಪ್ರಸಾದ ನಿಂಬರಗಿ, ಸೋಮಶೇಖರ್ ಮೇಟಿ, ಸುಧಾಕರ ಅಮ್ಮನಗಿ, ನುಚ್ಚಿ, ಸರೋಜಾ ಕೆರೂರ್, ಆನಂದ ನುಚ್ಚಿ, ಸೇರಿ ಹಲವರು ಇದ್ದರು.