ವೀಣಾ ಕಾಶಪ್ಪನವರಗೆ ಟಿಕೆಟ್‌ ನೀಡಲು ಆಗ್ರಹ

| Published : Mar 20 2024, 01:22 AM IST

ಸಾರಾಂಶ

ಜಿಲ್ಲಾ ಪಂಚಾಯತಿ ಮಾಜಿ ಅದ್ಯಕ್ಷೆ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರಗೆ ಬಾಗಲಕೋಟೆ ಲೋಕಸಭೆಗೆ ಕಾಂಗ್ರೆಸ್‌ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿ ಪಕ್ಷದ ಜಿಲ್ಲಾ ಘಟಕದ ಮಹಿಳೆಯರು ಬೇಂಗಳೂರಿನ ಮುಖ್ಯಮಂತ್ರಿಗಳ ನಿವಾಸದ ಎದುರು ಪ್ರತಿಭಟನೆ ಮಾಡಿದರು.ಇಳಕಲ್ಲ, ವೀಣಾ ಕಾಶಪ್ಪನವರ, ಕಾಂಗ್ರೆಸ್‌ ಟಿಕೆಟ್‌, ಚುನಾವಣೆ

ಇಳಕಲ್ಲ: ಜಿಲ್ಲಾ ಪಂಚಾಯತಿ ಮಾಜಿ ಅದ್ಯಕ್ಷೆ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರಗೆ ಬಾಗಲಕೋಟೆ ಲೋಕಸಭೆಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿ ಪಕ್ಷದ ಜಿಲ್ಲಾ ಘಟಕದ ಮಹಿಳೆಯರು ಬೇಂಗಳೂರಿನ ಮುಖ್ಯಮಂತ್ರಿಗಳ ನಿವಾಸದ ಎದುರು ಪ್ರತಿಭಟನೆ ಮಾಡಿದರು.

ಪಕ್ಷ ಸಂಘಟನೆಗೆ ವೀಣಾ ಕಾಶಪ್ಪನವರ ಸಾಕಷ್ಟು ಕೆಲಸ ಮಾಡಿದ್ದಾರೆ. ಈಗಾಗಲೆ ಹಲವಾರು ಸಾರ್ವಜನಿಕ ಸಮಾರಂಭಗಳನ್ನು ಜಿಲ್ಲೆಯಾದ್ಯಂತ ನಡೆಸಿದ್ದಾರೆ. ಲೋಕಸಭಾ ಮತಕ್ಷೇತ್ರದಲ್ಲಿ ಬರುವ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ವಿವಿಕೆ ಫೌಂಡೇಶನ್ ವತಿಯಿಂದ ಸಾಕಷ್ಟು ಯುವ ಜನರಿಗೆ ಸದುಪಯೋಗವಾಗುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಪಕ್ಷದ ಟಿಕೆಟ್‌ ಬೇರೆಯವರಿಗೆ ನೀಡುವ ಬದಲಿಗೆ ಪಕ್ಷಕ್ಕಾಗಿ ದುಡಿದ ವೀಣಾ ಕಾಶಪ್ಪನವರಿಗೆ ನೀಡಲೇಬೇಕು ಎಂದು ಸುವರ್ಣ ಪಲ್ಲೇದ, ಸಂಗೀತಾ ಮಡಿವಾಳರ, ಮಂಜುಳಾ ಗರಡಿಮನಿ, ಮತ್ತಿತರು ಪಕ್ಷದ ವರಿಷ್ಠರಾದ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಆಗ್ರಹಿಸಿದರು.