ಸಾರಾಂಶ
ಪ್ರತಿ ಗ್ರಾಮದ ರುದ್ರಭೂಮಿಗೆ ಶವಸಂಸ್ಕಾರ ಮಾಡುವ ವೀರಭಾವುಕ ಕೋಮಿಗೆ ಸೇರಿದ (ಹರಿಜನರು) ೫ ಜನರ ಸಮಿತಿ ರಚನೆ ಮಾಡಿ ಶವ ಸಂಸ್ಕಾರ ಮಾಡಲು ವಿಧಿವಿಧಾನ ಪ್ರಕಾರ ಶವಕ್ಕೆ ಮೋಕ್ಷ ಸಿಗಲು ಅನುಕೂಲವಾಗಲು ಧರ್ಮದತ್ತಿ ಇಲಾಖೆಗೆ ಶಿಫಾರಸ್ಸು ಮಾಡಿ ನಮ್ಮ ಬೇಡಿಕೆಗಳ ಕೆಲಸ ಮಾಡಿಕೊಡಬೇಕೆಂದು ಮನವಿ
ಹಾವೇರಿ: ಜಿಲ್ಲೆಯ ಎಲ್ಲ ಗ್ರಾಮಗಳ ಹಿಂದೂ ಧರ್ಮದ ರುದ್ರಭೂಮಿಯಲ್ಲಿ ಸತ್ಯ ಹರಿಶ್ಚಂದ್ರ ಮಹಾರಾಜರ ಮೂರ್ತಿ ಸ್ಥಾಪಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಅಧಿಜಾಂಭವ ಸಂಘದ ವತಿಯಿಂದ ಜಿಲ್ಲಾಧಿಕಾರಿ ರಘುನಂದನ ಮೂರ್ತಿಗೆ ಜಿಲ್ಲಾಡಳಿತ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.
ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ಹಿಂದೂ ರುದ್ರಭೂಮಿಯಲ್ಲಿ ಸತ್ಯ ಹರಿಶ್ಚಂದ್ರ ಮಹಾರಾಜರ ಮೂರ್ತಿ ಸ್ಥಾಪಿಸಬೇಕು. ಪ್ರತಿ ಗ್ರಾಮದ ರುದ್ರಭೂಮಿಗೆ ಶವಸಂಸ್ಕಾರ ಮಾಡುವ ವೀರಭಾವುಕ ಕೋಮಿಗೆ ಸೇರಿದ (ಹರಿಜನರು) ೫ ಜನರ ಸಮಿತಿ ರಚನೆ ಮಾಡಿ ಶವ ಸಂಸ್ಕಾರ ಮಾಡಲು ವಿಧಿವಿಧಾನ ಪ್ರಕಾರ ಶವಕ್ಕೆ ಮೋಕ್ಷ ಸಿಗಲು ಅನುಕೂಲವಾಗಲು ಧರ್ಮದತ್ತಿ ಇಲಾಖೆಗೆ ಶಿಫಾರಸ್ಸು ಮಾಡಿ ನಮ್ಮ ಬೇಡಿಕೆಗಳ ಕೆಲಸ ಮಾಡಿಕೊಡಬೇಕೆಂದು ಮನವಿಯಲ್ಲಿ ಅಖಿಲ ಕರ್ನಾಟಕ ಅಧಿಜಾಂಭವ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಲಿಡ್ಕರ್ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ನೇತೃತ್ವ ನಿಯೋಗ ಮನವಿಯಲ್ಲಿ ಒತ್ತಾಯಿಸಿತು.ಈ ಸಂದರ್ಭದಲ್ಲಿ ಯುವ ಮುಖಂಡ ಮಂಜುನಾಥ ಮಡಿವಾಳರ, ಅಲೆಮಾರಿ ಸಮುದಾಯಗಳ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ, ವಿಜಯಕುಮಾರ ಹುಲಿಕಂತಿಮಠ, ಸುರೇಶ ಹೊಸಮನಿ, ಮಂಜುನಾಥ ತಾಂಡೂರ, ಶಿವಬಸವ ಚೌಶೆಟ್ಟಿ, ನಿರಂಜನ ಬಳಿಗಾರ ಇತರರು ಇದ್ದರು.