ಸಾರಾಂಶ
ನರಸಿಂಹರಾಜಪುರ, ಪಟ್ಟಣ ವ್ಯಾಪ್ತಿಯ ಯಾವುದಾದರೂ ಒಂದು ವೃತ್ತಕ್ಕೆ ಮಾಜಿ ಸಚಿವ ಬೇಗಾನೆ ರಾಮಯ್ಯ ಹೆಸರು ನಾಮಕರಣ ಮಾಡಲು ಒತ್ತಾಯಿಸಿ ಬೇಗಾನೆ ರಾಮಯ್ಯ ಅಭಿಮಾನಿ ಬಳಗದವರು ಮಂಗಳವಾರ ಪಟ್ಟಣ ಪಂಚಾಯಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಬೇಗಾನೆ ರಾಮಯ್ಯ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ಅಭಿನವ ಗಿರಿರಾಜ್
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪಟ್ಟಣ ವ್ಯಾಪ್ತಿಯ ಯಾವುದಾದರೂ ಒಂದು ವೃತ್ತಕ್ಕೆ ಮಾಜಿ ಸಚಿವ ಬೇಗಾನೆ ರಾಮಯ್ಯ ಹೆಸರು ನಾಮಕರಣ ಮಾಡಲು ಒತ್ತಾಯಿಸಿ ಬೇಗಾನೆ ರಾಮಯ್ಯ ಅಭಿಮಾನಿ ಬಳಗದವರು ಮಂಗಳವಾರ ಪಟ್ಟಣ ಪಂಚಾಯಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೇಗಾನೆ ರಾಮಯ್ಯ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ಅಭಿನವ ಗಿರಿರಾಜ್ ಮಾತನಾಡಿ, ಬೇಗಾನೆ ರಾಮಯ್ಯ ಅವರು ಈ ವರ್ಷ ಏಪ್ರಿಲ್ 24 ರಂದು ಇಹಲೋಕ ತ್ಯಜಿಸಿದ್ದಾರೆ. ಬೇಗಾನೆ ರಾಮಯ್ಯ ಅವರು 1978 ರಲ್ಲಿ ಶೃಂಗೇರಿ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ನಂತರ ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಪ್ರತಿ ಹಳ್ಳಿ ಗಳಿಗೆ ಬೋರ್ ವೆಲ್ ನೀಡುವ ಮೂಲಕ ಬೋರ್ ವೆಲ್ ರಾಮಯ್ಯ ಎಂದು ಪ್ರಸಿದ್ಧಿ ಪಡೆದಿದ್ದರು. ಅವರು ಎನ್.ಆರ್.ಪುರವನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದರು. ಅವರ ನೆನಪಿಗೆ ಪಟ್ಟಣದ ಯಾವುದಾದರೂ ಒಂದು ವೃತ್ತಕ್ಕೆ ಬೇಗಾನೆ ರಾಮಯ್ಯ ವೃತ್ತ ಎಂದು ಹೆಸರು ಇಡಬೇಕು. ಅತಿ ಶೀಘ್ರದಲ್ಲೇ ಬೇಗಾನೆ ರಾಮಯ್ಯ ನುಡಿ ನಮನ ಕಾರ್ಯಕ್ರಮ ಆಯೋಜಿಸ ಲಾಗುವುದು ಎಂದರು.ಬೇಗಾನೆ ಅಭಿಮಾನಿ ಬಳಗದ ಸಂಚಾಲಕ ಕೆ.ಎ.ಅಬೂಬಕರ್ ಮಾತನಾಡಿ, ಬೇಗಾನೆ ರಾಮಯ್ಯ ಅವರ ಜನಪರ ಖಾಳಜಿ,ಸೇವಾ ಮನೋಭಾವ ಗುರುತಿಸಿ ಅವರ ನೆನಪಿನಲ್ಲಿ ಹಲವು ಕಾರ್ಯಕ್ರಮ ನಡೆಸಲಾಗುವುದು ಎಂದರು.