ಹಿರೇಬೇವನೂರ ಗ್ರಾಮಕ್ಕೆ ಹೆಚ್ಚುವರಿ ಬಸ್‌ ಓಡಿಸಲು ಮನವಿ

| Published : Jan 11 2024, 01:31 AM IST

ಸಾರಾಂಶ

ಹಿರೇಬೇವನೂರ ಗ್ರಾಮದಲ್ಲಿ ಎರಡು ಪ್ರೌಢ ಶಾಲೆಗಳು, ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ ಶಾಲೆಗಳು ಇದ್ದು, ಶಾಲೆ, ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ವಿದ್ಯಾರ್ಥಿಗಳು ಬಸ್ಸಿನ ಸೌಕರ್ಯ ಇಲ್ಲದಕ್ಕಾಗಿ ನಡೆದುಕೊಂಡು ಗ್ರಾಮ ತಲುಪಬೇಕಾದ ಪರಿಸ್ಥಿತಿ ಇದೆ.

ಕನ್ನಡಪ್ರಭ ವಾರ್ತೆ ಇಂಡಿ

ತಾಲೂಕಿನ ಹಿರೇಬೇವನೂರ ಗ್ರಾಮಕ್ಕೆ ಸಮರ್ಪಕ ಬಸ್ಸುಗಳ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಆರ್‌ಪಿಐ ಮುಖಂಡರು ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.ಹಿರೇಬೇವನೂರ ಗ್ರಾಮದಲ್ಲಿ ಎರಡು ಪ್ರೌಢ ಶಾಲೆಗಳು, ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ ಶಾಲೆಗಳು ಇದ್ದು, ಶಾಲೆ, ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ವಿದ್ಯಾರ್ಥಿಗಳು ಬಸ್ಸಿನ ಸೌಕರ್ಯ ಇಲ್ಲದಕ್ಕಾಗಿ ನಡೆದುಕೊಂಡು ಗ್ರಾಮ ತಲುಪಬೇಕಾದ ಪರಿಸ್ಥಿತಿ ಇದೆ. ಹಿರೇಬೇವನೂರ ಗ್ರಾಮದ ಮಾರ್ಗವಾಗಿ ಮಾಶಾಳ, ಮಣೂರ, ಜಿಡಗಾ ಬಸ್‌ಗಳು ಓಡಾಡುತ್ತವೆ. ಆದರೆ, ಅವು ಅಲ್ಲಿಂದ ತುಂಬಿ ಬರುತ್ತಿರುವುದರಿಂದ ಹಿರೇಬೇವನೂರ ಗ್ರಾಮಕ್ಕೆ ನಿಲ್ಲುತ್ತಿಲ್ಲ. ಹೀಗಾಗಿ ಹಿರೇಬೇವನೂರ ಗ್ರಾಮಕ್ಕೆ ಹೋಗುವ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಹಾಗೂ ಸಂಜೆ ಎರಡು ಬಸ್ಸುಗಳು ಹೆಚ್ಚುವರಿ ಓಡಿಸಬೇಕು ಎಂದು ಅಗ್ರಹಿಸಿದರು.

ನಮ್ಮ ಮನವಿಗೆ ಸ್ಪಂದಿಸದಿದ್ದರೆ ಜ.16 ರಂದು ಹಿರೇಬೇವನೂರ ಗ್ರಾಮದಲ್ಲಿ ಬಸ್‌ ತಡೆದು ಶಾಲೆ, ಕಾಲೇಜು ವಿದ್ಯಾರ್ಥಿಗಳೊಂದಿಗೆ ರಸ್ತೆ ತಡೆ ಮಾಡುವ ಮೂಲಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ವೇಳೆ ಆರ್‌ಪಿಐ ಯುವ ಘಟಕದ ಅಧ್ಯಕ್ಷ ಬಾಬು ಕಾಂಬಳೆ, ವಿರೂಪಾಕ್ಷಿ ಕಾಳೆ, ಲಕ್ಕಪ್ಪ ಲಚ್ಯಾಣ, ಶಾರುಖ್‌ ಶೇಖ, ಮಾಳು ಪೂಜಾರಿ, ಆಕಾಶ ಚಿಕ್ಕಬೇವನೂರ, ಸಂದೀಪ ಸತ್ಪಾಲಕ ,ಸಿದ್ದು ಜೋಕಮಾರ, ಸುದೀಪ ಜಾಧವ ಮೊದಲಾದವರು ಇದ್ದರು.