29ರಿಂದ ಪುನರ್‌ಮನನ ತರಗತಿ ಆರಂಭಿಸಲು ಮನವಿ

| Published : May 19 2024, 01:52 AM IST

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ 29 ರಿಂದ ಜೂನ್ 6 ರವರೆಗೆ ಪುನರ್‌ಮನನ ತರಗತಿ ನಡೆಸುವಂತೆ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾದಾಮಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ 29 ರಿಂದ ಜೂನ್ 6 ರವರೆಗೆ ಪುನರ್‌ಮನನ ತರಗತಿ ನಡೆಸುವಂತೆ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಸಂಘದ ತಾಲೂಕು ಅಧ್ಯಕ್ಷ ಬಿ.ಕೆ. ಚಿಮ್ಮಲ, ಕಾರ್ಯದರ್ಶಿ ಉಜ್ವಲ್ ಬಸರಿ, ಉಪಾಧ್ಯಕ್ಷ ಸಿ.ಎಂ. ಕಲ್ಲೂರ, ಸಂಘಟನಾ ಕಾರ್ಯದರ್ಶಿ ಮಹೇಶ ಕೋಟನಕರ, ಸಂಘದ ನಿರ್ದೇಶಕರಾದ ಬಸಮ್ಮ ನರಸಾಪುರ, ರವೀಂದ್ರ ಕಟ್ಟಿ, ಶಿಕ್ಷಕರಾದ ಎಂ.ಎಸ್. ಗ್ಯಾನಪ್ಪನವರ, ಬಿ.ಎಚ್. ಬಂಡಿವಡ್ಡರ, ಎಸ್.ಎಫ್. ಕಾಲಗಗ್ಗರಿ, ಎಸ್.ಪಿ. ಗೌಡರ, ಶಿವಾನಂದ ಮರಿಯಣ್ಣವರ, ಎಸ್.ಎಸ್. ದೇಸಾಯಿ, ವಿಷ್ಣು ಚೌಹಾಣ, ಎ.ಎ.ಮುಲ್ಲಾ, ರವಿಕುಮಾರ ರಾಥೋಡ ಸೇರಿದಂತೆ ಪ್ರೌಢಶಾಲಾ ಸಹಶಿಕ್ಷಕರು ಇದ್ದರು.