ಸಾರಾಂಶ
ಶೃಂಗೇರಿ: ತಾಲೂಕಿನಲ್ಲಿ ಈ ವರ್ಷ ಅತಿಯಾದ ಮಳೆಯಿಂದಾಗಿ ವ್ಯಾಪಕ ಬೆಳೆ ಹಾನಿ ಉಂಟಾಗಿದೆ. ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ಶೀಘ್ರ ನೆರವು ನೀಡುವ ಮೂಲಕ ಸ್ಪಂದಿಸಬೇಕು ಎಂದು ಆಗ್ರಹಿಸಿ ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿತು.

ಈ ಸಂದರ್ಭ ಸಮಿತಿ ಅಧ್ಯಕ್ಷ ಅಂಬಳೂರು ರಾಮಕೃಷ್ಣ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ದಾಖಲೆಯ ಮಳೆಯಾಗಿದ್ದು, ಈಗಲೂ ಮುಂದುವರಿದಿದೆ. ಶೇ.50ರಷ್ಟು ಜನರು ಸಂಪೂರ್ಣ ಬೆಳೆಗಳು, ಜಮೀನುಳನ್ನು ಕಳೆದುಕೊಂಡಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂದರು.ಅಡಕೆಗೆ ಹಳದಿ ಎಲೆರೋಗ, ಎಲೆಚುಕ್ಕಿ ರೋಗ ವ್ಯಾಪಕವಾಗಿ ಕಾಡುತ್ತಿದೆ. ಬೆಳೆ ಉಳಿಸಿಕೊಳ್ಳಲು ರೈತರು 5-6 ಬಾರಿ ಔಷಧಿ ಸಿಂಪಡಿಸಿದ್ದಾರೆ. ಆದರೂ ಅಡಕೆ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರೈತರು ಸಂಕಷ್ಟದಲ್ಲಿದ್ದರೂ ಸರ್ಕಾರ ಇನ್ನೂ ನೆರವಿಗೆ ಬಂದಿಲ್ಲ. ನೆರೆಪ್ರವಾಹ, ಅತಿವೃಷ್ಟಿ ಪರಿಹಾರಗಳು ನೀಡಿಲ್ಲ. ಸರ್ಕಾರ ಕೂಡಲೇ ಪರಿಹಾರ ಘೋಷಿಸಬೇಕು ಎಂದರು.
ಸೆಕ್ಷನ್ 4(1) ಸರ್ವೇ ಮಾಡಬೇಕು. ಶೃಂಗೇರಿ ತಾಲೂಕನ್ನು ಅತಿವೃಷ್ಟಿಪೀಡಿತ ತಾಲೂಕು ಎಂದು ಘೋಷಿಸಬೇಕು. ಬೆಳೆ ಪರಿಹಾರ ಹೆಕ್ಟೇರ್‌ಗೆ ₹50 ಸಾವಿರಕ್ಕೆ ಕಡಿಮೆ ಇಲ್ಲದಂತೆ ಪರಿಹಾರ ಘೋಷಿಸಬೇಕು. ಕೂಡಲೇ ಸೆಕ್ಷನ್ 4(1) ಸರ್ವೇ ಆರಂಭಿಸಬೇಕು. ಕೂಡಲೇ ಅಕ್ರಮ ಸಕ್ರಮ ಸಭೆ ಕರೆದು ಅರ್ಜಿಗಳ ವಿಲೇವಾರಿ ಮಾಡಬೇಕು. 94 ಸಿ, 94 ಸಿಸಿ ಅರ್ಜಿಗಳ ವಿತರಣೆ ಮಾಡಿ ವಿಲೇವಾರಿ ಮಾಡಬೇಕು. ಮೋಜಣಿ ಇಲಾಖೆಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.ಸಮಿತಿಯ ಎಚ್.ಎಲ್. ತ್ಯಾಗರಾಜ್, ಕೆ.ಎಸ್. ರಮೇಶ್, ತನಿಕೋಡು ಮಂಜುನಾಥ್ ಸೇರಿದಂತೆ ನೂರಾರು ಪದಾದಿಕಾರಿಗಳು ಹಾಜರಿದ್ದರು.