ಸಾರಾಂಶ
ಕನಕಪುರ: ಸಂಕಷ್ಟದಲ್ಲಿರುವ ಸಂತ್ರಸ್ತರರಿಗೆ ನೆರವಾಗುವುದು ಮನುಷ್ಯ ಧರ್ಮ, ಭೀಕರ ಮಳೆ ಮತ್ತು ಭೂಕುಸಿತದಿಂದ ತತ್ತರಿಸುತ್ತಿರುವ ವಯನಾಡಿನ ಸಂತ್ರಸ್ತರಿಗೆ ತಾಲೂಕಿನ ಸಾರ್ವಜನಿಕರು ಸಹಾಯ ಹಸ್ತ ಚಾಚಬೇಕು ಎಂದು ಆರ್‌ಇಎಸ್ ಸಂಸ್ಥೆ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಮನವಿ ಮಾಡಿದರು.
ಕನಕಪುರ: ಸಂಕಷ್ಟದಲ್ಲಿರುವ ಸಂತ್ರಸ್ತರರಿಗೆ ನೆರವಾಗುವುದು ಮನುಷ್ಯ ಧರ್ಮ, ಭೀಕರ ಮಳೆ ಮತ್ತು ಭೂಕುಸಿತದಿಂದ ತತ್ತರಿಸುತ್ತಿರುವ ವಯನಾಡಿನ ಸಂತ್ರಸ್ತರಿಗೆ ತಾಲೂಕಿನ ಸಾರ್ವಜನಿಕರು ಸಹಾಯ ಹಸ್ತ ಚಾಚಬೇಕು ಎಂದು ಆರ್‌ಇಎಸ್ ಸಂಸ್ಥೆ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಮನವಿ ಮಾಡಿದರು.
ಆರ್‌ಇಎಸ್ ಸಂಸ್ಥೆ ಆವರಣದಲ್ಲಿ ವಯನಾಡಿನ ಸಂತ್ರಸ್ತರಿಗೆ ದಿನಬಳಕೆ, ಆಹಾರ ಮತ್ತು ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇವರ ನಾಡು ಕೇರಳದಲ್ಲಿ ಭೀಕರ ಮಳೆ ಮತ್ತು ಭೂಕುಸಿತದಿಂದ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದು, ಸಾಕಷ್ಟು ಜನ ಅವಶೇಷಗಳಡಿ ಸಿಕ್ಕು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ, ನೆರೆ ಮತ್ತು ಭೂ ಕುಸಿತದಿಂದ ಸಾಕಷ್ಟು ಕುಟುಂಬಗಳು ಸರ್ವಸ್ವವನ್ನೂ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸಂತ್ರಸ್ತರಿಗೆ ದಿನಬಳಕೆ ವಸ್ತುಗಳು, ಔಷಧ, ಬಟ್ಟೆ, ಆಹಾರ, ಕುಡಿಯುವ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದಿಸಿದರು.ಸಂಸ್ಥೆಯ ವಿದ್ಯಾರ್ಥಿಗಳು, ಉಪನ್ಯಾಸಕರು ನಗರಾದ್ಯಂತ ಸಂಚರಿಸಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದೇವೆ. ತಾಲೂಕಿನ ಜನರು ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಕೊಟ್ಟು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸಂಸ್ಥೆ ಕಾರ್ಯದರ್ಶಿ ಪುಟ್ಟಸ್ವಾಮಿ, ಪ್ರಾಂಶುಪಾಲ ಬಾಲಕೃಷ್ಣ, ತಮ್ಮಣ್ಣಗೌಡ , ಎಸ್.ಕೆ. ಸ್ನಾತಕೋತ್ತರ ಪದವಿ ಕೇಂದ್ರದ ಎಚ್.ಸಿ.ಪಾರ್ಥಸಾರಥಿ, ಉಪನ್ಯಾಸಕ ಕಬ್ಬಾಳೇಗೌಡ, ಎನ್‌ಎಸ್‌ಎಸ್ ಅಧಿಕಾರಿ ಪ್ರಕಾಶ್, ಪತ್ರಿಕೋದ್ಯಮ ವಿಭಾಗದ ಮೋಹನ್ ಕುಮಾರ್ ಉಪಸ್ಥಿತರಿದ್ದರು.(ಫೋಟೋ ಕ್ಯಾಫ್ಷನ್)
ಕನಕಪುರದ ರೂರಲ್ ಕಾಲೇಜು ಆವರಣದಲ್ಲಿ ಕೇರಳದ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತು ಸಂಗ್ರಹಿಸುವ ಜಾಗೃತಿ ಜಾಥಾಕ್ಕೆ ಆರ್‌ಇಎಸ್ ಅಧ್ಯಕ್ಷ ಶ್ರೀಕಂಠು ಚಾಲನೆ ನೀಡಿದರು.