ಹೊನ್ನಾಳಿ ತಾಲೂಕು ನರಿಗಿನಕೆರೆ ಗ್ರಾಮ ಬಳಿ ಬೃಹತ್ ಹೆಬ್ಬಾವು ರಕ್ಷಣೆ

| Published : Sep 15 2024, 01:47 AM IST

ಹೊನ್ನಾಳಿ ತಾಲೂಕು ನರಿಗಿನಕೆರೆ ಗ್ರಾಮ ಬಳಿ ಬೃಹತ್ ಹೆಬ್ಬಾವು ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಯೊಂದರ ಹಿಂಭಾಗದಲ್ಲಿ ಕಾಣಿಸಿಕೊಂಡ ದೊಡ್ಡ ಗಾತ್ರದ ಹೆಬ್ಬಾವನ್ನು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಉರಗ ತಜ್ಞರು ಸುರಕ್ಷಿತವಾಗಿ ಹಿಡಿದು, ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟ ಘಟನೆ ಹೊನ್ನಾಳಿ ತಾಲೂಕಿನಲ್ಲಿ ಶುಕ್ರವಾರ ವರದಿಯಾಗಿದೆ.

- 8 ಅಡಿ ಉದ್ದ, 25 ಕೆಜಿ ತೂಕದ ಹೆಬ್ಬಾವು ಮನೆ ಹಿತ್ತಲಲ್ಲಿ ಪತ್ತೆ - ಚಂದ್ರನಾಯ್ಕ ಮನೆ ಹಿತ್ತಿಲಿನಲ್ಲಿದ್ದ ಬೃಹತ್ ಗಾತ್ರದ ಹೆಬ್ಬಾವು - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಮನೆಯೊಂದರ ಹಿಂಭಾಗದಲ್ಲಿ ಕಾಣಿಸಿಕೊಂಡ ದೊಡ್ಡ ಗಾತ್ರದ ಹೆಬ್ಬಾವನ್ನು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಉರಗ ತಜ್ಞರು ಸುರಕ್ಷಿತವಾಗಿ ಹಿಡಿದು, ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟ ಘಟನೆ ಹೊನ್ನಾಳಿ ತಾಲೂಕಿನಲ್ಲಿ ಶುಕ್ರವಾರ ವರದಿಯಾಗಿದೆ.

ಹೊನ್ನಾಳಿ ತಾಲೂಕಿನ ನರಿಗಿನಕೆರೆ ಗ್ರಾಮದ ಚಂದ್ರನಾಯ್ಕ ಎಂಬವರ ಮನೆ ಹಿಂಭಾಗದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಂಡುಬಂದಿತು. ತಕ್ಷಣವೇ ಚಂದ್ರನಾಯ್ಕ ಹಾಗೂ ಗ್ರಾಮಸ್ಥರು ವಿಷಯವನ್ನು ಅರಣ್ಯ ಇಲಾಖೆ ಗಮನಕ್ಕೆ ತಂದರು. ತಕ್ಷಣವೇ ಅರಣ್ಯಾಧಿಕಾರಿ, ಸಿಬ್ಬಂದಿ, ಉರಗ ತಜ್ಞರ ಸಮೇತ ನರಿಗಿನಕೆರೆ ಗ್ರಾಮಕ್ಕೆ ಧಾವಿಸಿದರು.

ಸುಮಾರು 8 ಅಡಿ ಉದ್ದ, 25 ಕೆಜಿ ತೂಕದ ಭಾರೀ ಗಾತ್ರದ ಹೆಬ್ಬಾವು ಕಾಡಂಚಿನ ಗ್ರಾಮಕ್ಕೆ ಆಹಾರ ಅರಸಿ, ಬಂದು ವಶವಾಯಿತು. ನ್ಯಾಮತಿ ಉಪ ವಲಯ ಅರಣ್ಯಾಧಿಕಾರಿ ಶಿವಯೋಗಿ ನೇತೃತ್ವದಲ್ಲಿ ಹೊನ್ನಾಳಿ ಅರಣ್ಯ ರಕ್ಷಕ ವಸಂತ, ನಾಗರಾಜರ ಸಹಕಾರದಿಂದ ಹೆಬ್ಬಾವನ್ನು ಸೆರೆಹಿಡಿದು, ದೂರದ ಗಂಗವ್ವನ ಸರ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು ಎಂದು ಹೊನ್ನಾಳಿ ವಲಯ ಅರಣ್ಯಾಧಿಕಾರಿ ಕಿಶೋರ ನಾಯ್ಕ ತಿಳಿಸಿದರು.

- - - -14ಕೆಡಿವಿಜಿ7, 8: