ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರ ರಕ್ಷಣೆ

| Published : Nov 02 2024, 01:31 AM IST

ಸಾರಾಂಶ

ರಷ್ಯಾ ದೇಶದ ಮಹಿಳೆ ಜೈನ್(೪೧), ಬೆಂಗಳೂರಿನ ನಿವಾಸಿಗಳಾದ ಎಬಿನ್ ಡೆವಿಶ(೩೫), ಮಧುರಾ ಅಗ್ರವಾಲ್(೩೫), ರಮ್ಯಾ ವೆಂಕಟ್ರಮಣ(೩೪) ರಕ್ಷಣೆ ಒಳಗಾದ ಪ್ರವಾಸಿಗರು.

ಗೋಕರ್ಣ: ಸಮುದ್ರದ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ವಿದೇಶಿ ಹಾಗೂ ಸ್ವದೇಶಿ ಪ್ರವಾಸಿಗರು ಸೇರಿ ಒಟ್ಟು ನಾಲ್ಕು ಜನರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಶುಕ್ರವಾರ ಸಂಜೆ ಇಲ್ಲಿನ ಕುಡ್ಲೆ ಕಡಲತೀರದಲ್ಲಿ ನಡೆದಿದೆ.

ರಷ್ಯಾ ದೇಶದ ಮಹಿಳೆ ಜೈನ್(೪೧), ಬೆಂಗಳೂರಿನ ನಿವಾಸಿಗಳಾದ ಎಬಿನ್ ಡೆವಿಶ(೩೫), ಮಧುರಾ ಅಗ್ರವಾಲ್(೩೫), ರಮ್ಯಾ ವೆಂಕಟ್ರಮಣ(೩೪) ರಕ್ಷಣೆ ಒಳಗಾದ ಪ್ರವಾಸಿಗರು.

ಬೆಂಗಳೂರಿನ ಮೂವರು ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು, ಒಟ್ಟಾಗಿ ಸಮುದ್ರದಲ್ಲಿ ಆಟವಾಡಲು ತೆರಳಿದ್ದಾರೆ. ಇವರಿಗೆ ವಿದೇಶಿ ಮಹಿಳೆ ಜತೆಯಾಗಿದ್ದಾರೆ. ಹೀಗೆ ಈಜಾಡುತ್ತಿದ್ದ ವೇಳೆ ಸುಳಿಗೆ ಸಿಲುಕಿ ಜೀವಾಯದಲ್ಲಿದ್ದರು. ಇದನ್ನು ಗಮನಿಸಿದ ಜೀವಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಕುರ್ಲೆ, ಮಂಜುನಾಥ ಹರಿಕಂತ್ರ, ಪ್ರವಾಸಿ ಮಿತ್ರ ಸಿಬ್ಬಂದಿ ಶೇಖರ ಹರಿಕಂತ್ರ ಅವರು ತಕ್ಷಣ ರಕ್ಷಣಾ ಕಾರ್ಯಕ್ಕೆ ಇಳಿದಿದ್ದು, ಇವರಿಗೆ ಮೈಸ್ಟಿಕ್ ಗೋಕರ್ಣ ಅಡ್ವೆಂಚರ್ಸನವರಿಂದ ಕಾರ್ಯಾಚರಣೆಗೆ ಸಹಾಯ ಮಾಡಿದ್ದಾರೆ. ರಭಸದ ಅಲೆಯ ನಡುವೆಯೂ ಹರಸಾಹಸ ಮಾಡಿ ಪ್ರವಾಸಿಗರ ಜೀವ ಉಳಿಸಿ ದಡಕ್ಕೆ ತಂದಿದ್ದಾರೆ.ಜೀವರಕ್ಷಕ ಸಿಬ್ಬಂದಿಯಿಂದ ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ಓಂ ಕಡಲತೀರದಲ್ಲಿ ನಡೆದಿದೆ.ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಒಟ್ಟು ನಾಲ್ಕು ಜನ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು, ಕಡಲಿಗಿಳಿದು ಈಜಾಡಲು ತೆರಳಿದಾಗ ಇಬ್ಬರು ರಭಸದ ಅಲೆಗೆ ಸಿಲುಕಿ ಜೀವಾಪಾಯದಲ್ಲಿದ್ದರು. ಇದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಜೀವರಕ್ಷಕ ಸಿಬ್ಬಂದಿಗಳಾದ ಹರೀಶ್ ಮೂಡಂಗಿ, ಮಂಜೇಶ್ ಹರಿಕಂತ್ರ, ಪ್ರಭಾಕರ ಅಂಬಿಗ ತಮ್ಮ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿ ಜೀವ ಉಳಿಸಿದ್ದಾರೆ. ಚರಣ(೨೩),ಶ್ರೀಕಾಂತ್(೨೬) ಜೀವಾಪಾಯದಿಂದ ಪಾರಾಗಿ ಬಂದ ಪ್ರವಾಸಿಗರಾಗಿದ್ದಾರೆ. ಸರಣಿ ರಜೆಯ ಪ್ರಯುಕ್ತ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಕಡಲತೀರಕ್ಕೆ ಆಗಮಿಸುತ್ತಿದ್ದು, ಇವರನ್ನು ನಿಯಂತ್ರಿಸಲು ಜೀವರಕ್ಷಕ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ.